Site icon Samastha News

Ministry of Highways: ಕೆಟ್ಟ ರಸ್ತೆಗಳಿಗೆ ಹೇಳಿ‌ಗುಡ್ ಬೈ, ಬರಲಿದೆ ಹೊಸ ತಂತ್ರಜ್ಞಾನದ ರಸ್ತೆಗಳು

Ministry of Highways

Ministry of Highways

ಭಾರತದ ರಸ್ತೆಗಳಷ್ಟು ಕೆಟ್ಟ ರಸ್ತೆಗಳು ಇಮ್ಯಾವುದೇ ದೇಶದಲ್ಲೂ ಇರಲಿಕ್ಕಿಲ್ಲ. ಇಲ್ಲಿನ ವಾತಾವರಣ ಜನಸಂಖ್ಯೆ, ತಂತ್ರಜ್ಞಾನದ ಅಲಭ್ಯತೆ, ಬೇಜವಾಬ್ದಾರಿ ಜನ, ಭ್ರಷ್ಟಾಚಾರ ಇನ್ನಿತರೆಗಳೆಲ್ಲ ಸೇರಿ ರಸ್ತೆಗಳನ್ನು ಕುಲಗೆಡಿಸಿದ್ದಾರೆ. ಆದರೆ ಈಗ ಕೇಂದ್ರ ರಸ್ತೆ ಸಂಚಾರ ಮತ್ತು ಹೆದ್ದಾರಿ ಸಚಿವಾಲಯವು ಹೊಸದೊಂದು ಆದೇಶ ಹೊರಡಿಸಿದ್ದು, ಹೆದ್ದಾರಿ ಗುಣಮಟ್ಟಕ್ಕೆ ನಿರ್ದಿಷ್ಟ ಮಾನದಂಡ ವಿಧಿಸಿದೆ ಜೊತೆಗೆ ನಿರ್ದಿಷ್ಟ ತಂತ್ರಜ್ಞಾನದಿಂದಲೇ ರಸ್ತೆಗಳು ನಿರ್ಮಾಣವಾಗಬೇಕು ಎಂದಿದೆ.

ಕೇಂದ್ರ ಹೆದ್ದಾರಿ ಸಚಿವಾಲಯ ಸೂಚಿಸಿರುವ ತಂತ್ರಜ್ಞಾನದಿಂದ ರಸ್ತೆಗಳನ್ನು ನಿರ್ಮಿಸಿದರೆ ರಸ್ತೆಗಳು ಬೇಗನೆ ಹಾಳಾಗುವುದಿಲ್ಲ. ಬಿರುಕು ಬುಡುವುದಿಲ್ಲ, ರಸ್ತೆಯ ಮೇಲಿನ ಟಾರ್ ಸವೆದು ಹೋಗುವುದಿಲ್ಲ. ಅತಿಯಾದ ಬಿಸಿಲಿಗೆ ರಸ್ತೆಯ ಟಾರ್ ವಾಹನಗಳ ಚಕ್ರಗಳಿಗೆ ಅಂಟಿಕೊಳ್ಳುತ್ತಿತ್ತು, ಅದೂ ಸಹ ಆಗುವುದಿಲ್ಲವಂತೆ.

ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಹೆದ್ದಾರಿಗಳನ್ನು ನಿರ್ಮಿಸುವಾಗ ಕೇವಲ ಲೋಡ್ ಬೇರಿಂಗ್ ಕೆಪಾಸಿಟಿ (ತೂಕ ತಡೆಯುವ ಕ್ಷಮತೆ) ಮಾತ್ರವನ್ನೇ ಪರಿಗಣಿಸದೆ ಸ್ಥಳೀಯ ಹವಾಮಾನ, ಗಾಡಿಗಳ ಆಲ್ಸಲ್ ಭಾರ, ಒಟ್ಟು ಸಂಚರಿಸುವ ವಾಹನ ಇನ್ನಿತರೆಗಳನ್ನು ಸಹ ಪರಿಗಣಿಸಬೇಕೆಂದು ನಿಯಮ ಮಾಡಲಾಗಿದೆ.

Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?

ರಸ್ತೆ ನಿರ್ಮಾಣಕ್ಕೆ ಬಿಟುಮಿನ್ ಬ್ಲಿಂಡರ್ಸ್ ಅನ್ನಹ ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ. ಇದು ರಸ್ತೆಗೆ ಹೆಚ್ಚು ಶಕ್ತಿ ಒದಗಿಸುತ್ತದೆ. ಹಾಗೂ ಜಲ್ಲಿ, ಮಣ್ಣುಗಳನ್ನು ಹೆಚ್ಚು ಗಟ್ಟಿಯಾಗಿ ಹಿಡೊದಿಡುತ್ತದೆ. ಎಲ್ಲ ರೀತಿಯ ಹವಾಮಾನಗಳನ್ನು ಸಹಿಸಿಕೊಳ್ಳುತ್ತದೆ. ಹಾಗಾಗಿ ಬಿಟುಮಿನ್ ಬ್ಲಿಂಡರ್ಸ್ ಅನ್ನು ಖಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ. ಇದು ಭಾರತೀಯ ರಸ್ತೆಯ ಗುಣಮಟ್ಟವನ್ನು ಹೆಚ್ಚಿಸಲಿದೆ.

Exit mobile version