Site icon Samastha News

MS Dhoni: ‘ಸ್ವಂತ ತಂಡ ಕಟ್ಟುವೆ’: ಮಹೇಂದ್ರ ಸಿಂಗ್ ಧೋನಿ ಘೋಷಣೆ

MS Dhoni

MS Dhoni

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ನಿವೃತ್ತಿಯ ಬಗ್ಗೆ ಸುದ್ದಿಗಳು ತುಸು ಜೋರಾಗಿಯೇ ಹರಿದಾಡುತ್ತಿವೆ. ಆದರೆ ಧೋನಿ ಈ ವರೆಗೆ ಈ ಬಗ್ಗೆ ತುಟಿ ಬಿಚ್ಚಿಲ್ಲ. ಭಾರತೀಯ ಕ್ರಿಕೆಟ್ ತಂಡದಿಂದ ಬೇಗನೆ ನಿವೃತ್ತರಾದ ಧೋನಿ, ಚನ್ನೈ ತಂಡದಿಂದ ನಿವೃತ್ತರಾಗುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಈ ಐಪಿಎಲ್ ಧೋನಿಯ ಕೊನೆಯ ಐಪಿಎಲ್ ಆಗುತ್ತದೆ ಎನ್ನಲಾಗಿತ್ತು. ಆದರೆ ಬೆಂಗಳೂರಿನ ವಿರುದ್ಧ ಹೀನಾಯ ಸೋಲು ಕಂಡು ಹೊರ ನಡೆದ ಬಳಿಕ ಧೋನಿ ಇನ್ನೂ ಒಂದು ಸೀಸನ್ ಆಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೆಲ್ಲದರ ಮಧ್ಯೆ ಧೋನಿ ಹೊಸ ಘೋಷಣೆ ಮಾಡಿದ್ದಾರೆ. ತಾವೆ ಒಂದು ತಂಡ ಕಟ್ಟುವುದಾಗಿ ಧೋನಿ ಹೇಳಿದ್ದಾರೆ.

ಸಿಎಸ್್ಕೆ ತಂಡದ ಕ್ಯಾಪ್ಟನ್ ಆಗಿರುವ ಧೋನಿ, ಈಗ ತಾವೇ ಒಂದು ಹೊಸ ತಂಡ ಕಟ್ಟುವ ಘೋಷಣೆ ಮಾಡಿರುವುದು ಸಿಎಸ್್ಕೆ ಅಭಿಮಾನಿಗಳಿಗೆ ಆಘಾತ ತಂದಿದೆ. ಈ ಬಗ್ಗೆ ಫೇಸ್್ಬುಕ್ ಪೋಸ್ಟ್ ಹಾಕಿರುವ ಧೋನಿ, ‘ಹೊಸದೊಂದು ಹೆಜ್ಜೆ ಇಡಲು ಇದು ಸಕಾಲ, ಈ ಸಮಯದಲ್ಲಿ ಏನು ಮಾಡಬೇಕಿದೆಯೋ, ಅದನ್ನು ಮಾಡಲೇ ಬೇಕಾಗಿದೆ. ನಾನು ಒಂದು ಹೊಸ ತಂಡವನ್ನು ಕಟ್ಟುತ್ತಿದ್ದೇನೆ” ಎಂದು ಧೋನಿ ಬರೆದುಕೊಂಡಿದ್ದಾರೆ. ಧೋನಿಯ ಫೇಸ್ ಬುಕ್ ಪೋಸ್ಟ್್ಗೆ ಹಲವರು ಭಿನ್ನ ಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಧೋನಿ ಹೊಸ ಐಪಿಎಲ್ ತಂಡ ಕಟ್ಟಲಿದ್ದಾರೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಇದು ಮಾರುಕಟ್ಟೆ ತಂತ್ರ ಎಂಬುದು ತಿಳಿಯುತ್ತದೆ. ಏಕೆಂದರೆ ಧೋನಿ ತಾವು ಹೊಸ ತಂಡ ಕಟ್ಟುವ ಪೋಸ್ಟ್ ಅನ್ನು ಸಿಟ್ರಾನ್ ಸಂಸ್ಥೆಯ ಫೇಸ್ ಬುಕ್ ಪೇಜ್ ಗೆ ಟ್ಯಾಗ್ ಮಾಡಿ ಹಂಚಿಕೊಂಡಿದ್ದಾರೆ. ಬಹುಷಃ ಸಿಟ್ರಾನ್ ಕಾರು ಸಂಸ್ಥೆಯೊಂದಿಗೆ ಧೋನಿ ಹೊಸ ಒಪ್ಪಂದ ಮಾಡಿಕೊಂಡಿದ್ದು, ಅದರ ಸಲುವಾಗಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ವೇಗವಾಗಿ ಹರಡುತ್ತಿರುವ ಡೆಂಘಿಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ, ಈ ಕ್ರಮಗಳನ್ನು ಅನುಸರಿಸಿ

ಹೊಸ ತಂಡ ಕಟ್ಟುವ ಪೋಸ್ಟ್ ಹಾಕಿದರೆ ಖಂಡಿತ ಅದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತದೆ. ಅದನ್ನು ಸಿಟ್ರಾನ್ ಜೊತೆ ಹಂಚಿಕೊಂಡರೆ ಅಗತ್ಯವಾದ ಜಾಹೀರಾತು ಸಹ ಸಿಗುತ್ತದೆ ಹಾಗಾಗಿ ಈ ತಂತ್ರವನ್ನು ಧೋನಿ ಅನುಸರಿಸಿದ್ದಾರೆ. ಸೀಟ್ರಾನ್ ಹಳೆಯ ಕಾರು ಸಂಸ್ಥೆಗಳಲ್ಲಿ ಒಂದು, ಆದರೆ ಭಾರತದ ಮಾರುಕಟ್ಟೆಗೆ ಇತ್ತೀಚೆಗಷ್ಟೆ ಕಾಲಿಟ್ಟಿದೆ. ಕಡಿಮೆ ದರಕ್ಕೆ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದರ ಕಾರುಗಳ ಸೇಲ್ಸ್ ತುಸು ಕುಂಟುತ್ತಾ ಸಾಗಿದ್ದು, ಯಾವುದೇ ಸೆಲೆಬ್ರಿಟಿ ರಾಯಭಾರಿಗಳನ್ನು ಈ ವರೆಗೆ ನೇಮಿಸಿಕೊಂಡಿರಲಿಲ್ಲ. ಇದೀಗ ಧೋನಿಯನ್ನು ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲು ಮುಂದಾಗಿದೆ ಸಂಸ್ಥೆ.

Exit mobile version