Site icon Samastha News

Mukesh Ambani: ಒಂದೇ ದಿನದಲ್ಲಿ 73, 470 ಕೋಟಿ ಕಳೆದುಕೊಂಡ ಮುಖೇಶ್ ಅಂಬಾನಿ

Mukesh Ambani

Mukesh Ambani

Mukesh Ambani

ಮುಖೇಶ್ ಅಂಬಾನಿ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ರಿಲಯನ್ಸ್ ಗ್ರೂಪ್ ನ ಮಾಲೀಕ ಮುಖೇಶ್ ಅಂಬಾನಿ ಇತ್ತೀಚೆಗಷ್ಟೆ ತಮ್ಮ‌ ಮಗನ ಮದುವೆಯನ್ನು ಭಾರಿ ಅದ್ಧೂರಿಯಾಗಿ ಮಾಡಿದ್ದಾರೆ. ಈ ಮದುವೆಗೆ ಸುಮಾರು 6 ಸಾವಿರ ಕೋಟಿ ಹಣವನ್ನು ಮುಖೇಶ್ ಅಂಬಾನಿ ಖರ್ಚು ಮಾಡಿದ್ದಾರೆ. ಆದರೆ ಮದುವೆ ಮುಗಿದ ಕೆಲವೇ ದಿನದಲ್ಲಿ ಅಂಬಾನಿ, ಕೇವಲ ಒಂದೇ ದಿನದಲ್ಲಿ ಸುಮಾರು 73,470 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಮುಖೇಶ್ ಅಂಬಾನಿಯ ರಿಲಯನ್ಸ್ ಗ್ರೂಪ್ 20 ಲಕ್ಷ ಕೋಟಿಗೂ ಹೆಚ್ಚು ಮೌಲ್ಯವಿರುವ ಸಂಸ್ಥೆ. ಆದರೆ ಸೋಮವಾರ ಮಾರುಕಟ್ಟೆಯಲ್ಲಿ ರಿಲಯನ್ಸ್ ಗೆ ದೊಡ್ಡ ಹೊಡೆತವೊಂದು ಬಿದ್ದಿದೆ. ಕೆಲ ದಿನಗಳ ಹಿಂದಷ್ಟೆ ರಿಲಯನ್ಸ್ ಸಂಸ್ಥೆಯ ತ್ರೈಮಾಸಿಕ ವರದಿ ಬಂದಿದ್ದು, ವರದಿಯಲ್ಲಿ ಸಂಸ್ಥೆಯು 5% ನಷ್ಟ ಹೊಂದಿರುವುದಾಗಿ ಹೇಳಲಾಗಿದೆ‌. ಇದರಿಂದ ಒತ್ತಡಕ್ಕೊಳಗಾಗಿರುವ ಹೂಡಿಕೆದಾರರು, ಸತತವಾಗಿ ರಿಲಯನ್ಸ್ ಷೇರುಗಳನ್ನು ಮಾರಿದ್ದಾರೆ‌

ಹೂಡಿಕೆದಾರರು ಸತತವಾಗಿ ಷೇರು ಮಾರಾಟ ಮಾಡಿದ್ದರಿಂದ ಸೋಮವಾರ ಒಂದೇ ದಿನ ರಿಲಯನ್ಸ್ ಸಂಸ್ಥೆಯು 3.49% ಕುಸಿದಿದೆ. ಆ ಮೂಲಕ ಸುಮಾರು 73,470 ಕೋಟಿ ನಷ್ಟ ಅನುಭವಿಸಿದೆ. ಸೋಮವಾರದ ಮಾರುಕಟ್ಟೆಯ ಅಂತ್ಯಕ್ಕೆ ರಿಲಯನ್ಸ್ ಷೇರಿನ ಮೌಲ್ಯ 3,001 ರೂಪಾಯಿಗೆ ಬಂದು ನಿಂತಿದ್ದು, ಮಂಗಳವಾರವೂ ಸಹ ರಿಲಯನ್ಸ್ ಷೇರು ಕುಸಿಯಲಿದೆ ಎಂದು ಅಂದಾಜಿಸಲಾಗಿದೆ. ಸೋಮವಾರ ಒಂದೇ ದಿನ 98.37 ಷೇರುಗಳು NSE ನಲ್ಲಿ ಹಾಗೂ 1.90 ಷೇರುಗಳು BSE ಯಲ್ಲಿ ವಿನಿಮಯವಾಗಿವೆ.

Karnataka Government: ಕರ್ನಾಟಕದಲ್ಲಿ ಹೆಣ ಹೂಳಲು ಜಾಗವಿಲ್ಲ!

ರಿಲಯನ್ಸ್ ಸಂಸ್ಥೆಯು ಮಾರುಕಟ್ಟೆಯಲ್ಲಿ ಹಳೆಯ ಸಂಸ್ಥೆಯಾಗಿದ್ದು ಕೋಟ್ಯಂತರ ಭಾರತೀಯರು ಸಂಸ್ಥೆಯ ಮೇಲೆ ಹೂಡಿಕೆ ಮಾಡಿದ್ದಾರೆ. ಸತತ ಎರೆಉ ತ್ರೈಮಾಸಿಕ ವರದಿಯಲ್ಲಿ ಕಂಪೆನಿ ನಷ್ಟ ಅನುಭವಿಸಿದ್ದರಿಂದಾಗಿ ಹೂಡಿಕೆದಾರರು ಆತಂಕಕ್ಕೆ ಒಳಗಾಗಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಕುಸಿತ ಇನ್ನಹು ಸ್ವಲ್ಪ ದಿನ ಹೀಗೆಯೇ ಇರಲಿದ್ದು ರಿಲಯನ್ಸ್ ಷೇರು ಮೌಲ್ಯ ಸುಮಾರು 2800 ಅಥವಾ ಅದಕ್ಕೂ ತುಸು ಕಡಿಮೆಗೆ ಬಂದು ತಲುಪಬಹುದು ಎನ್ನಲಾಗುತ್ತಿದೆ.

ಅಂದಹಾಗೆ ರಿಲಯನ್ಸ್ ಸಂಸ್ಥೆಯ ಒಟ್ಟು ಮೌಲ್ಯ ಸುಮಾರು 21 ಲಕ್ಷ ಕೋಟಿಗಳದ್ದಾಗಿದೆ. ಮುಖೇಶ್ ಅಂಬಾನಿಯ ಒಟ್ಟು ಆಸ್ತಿ ಮೌಲ್ಯ 9.76 ಲಕ್ಷ‌ಕೋಟಿಗಳು. ಹಾಗಾಗಿ ಈ 73,470 ಕೋಟಿಯ ನಷ್ಟ ಸಂಸ್ಥೆಗೆ ಹಾಗೂ ಮುಖೇಶ್ ಅಂಬಾನಿಗೆ ವೈಯಕ್ತಿಕವಾಗಿ ದೊಡ್ಡ ಹಾನಿಯನ್ನೇನೂ ಮಾಡುವುದಿಲ್ಲ.

Exit mobile version