Mukesh Ambani: ಹಣ ಕೊಟ್ಟು ಮದುವೆ ಬಗ್ಗೆ ಪ್ರಚಾರ ಮಾಡಿಸಿದ ಅಂಬಾನಿ ಕುಟುಂಬ!

0
138
Mukesh Ambani
Mukesh Ambani Family

Mukesh Ambani

ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಇತ್ತೀಚೆಗಷ್ಟೆ ಬಲು ಅದ್ಧೂರಿಯಾಗಿ ನಡೆಯಿತು. ಸುಮಾರು 6000 ಕೋಟಿ ಹಣವನ್ನು ಇದಕ್ಕಾಗಿ ಖರ್ಚು ಮಾಡಲಾಯ್ತು. ಕೇವಲ ಮದುವೆ ಮಾಡಿದ್ದಲ್ಲದೆ ಮದುವೆ ಬಗ್ಗೆ ಪಾಸಿಟಿವ್ ಸುದ್ದಿಗಳನ್ನು ಬಿತ್ತಿರಿಸಲು ಅಂಬಾನಿ ಕುಟುಂಬ ಕೋಟ್ಯಂತರ ರೂಪಾಯಿ ಹಣ ಖರ್ಚಾಗಿದೆ. ಯೂಟ್ಯೂಬರ್ ಒಬ್ಬರಿಂದ ಈ ವಿಷಯ ಬಹಿರಂಗವಾಗಿದೆ.

ಮದುವೆಗೆ ಮುಂಚೆ ಅದ್ಧೂರಿಯಾಗಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ನಡೆದಾಗಿನಿಂದ ಮದುವೆ ಮುಗಿಯುವ ವರೆಗೂ ಅಂಬಾನಿಗಳ ಅದ್ಧೂರಿತನದ ಬಗ್ಗೆ ಅವರ ಸರಳತೆ, ದೈವ ಭಕ್ತಿ, ದೇಶಪ್ರೇಮ ಇದನ್ನೆಲ್ಲ ಹೈಲೈಟ್ ಮಾಡಲೆಂದೇ ಕೋಟ್ಯಂತರ ರೂಪಾಯಿ ಹಣ‌ ಕೊಟ್ಟು ಸುದ್ದಿಗಳನ್ನು ಪ್ರಸಾರ ಮಾಡಿಸಲಾಗಿದೆ. ವಿಶೇಷವಾಗಿ ಜನಪ್ರಿಯ ಯೂಟ್ಯೂಬರ್ ಗಳಿಗೆ ಭಾರಿ ಮೊತ್ತವನ್ನು ಅಂಬಾನಿ ಕುಟುಂಬ ನೀಡಿದೆ.

ಅಂಬಾನಿ ಕುಟುಂಬದ ಮದುವೆ ಹೇಗೆ ಭಾರತದ ಎಕಾನಮಿಗೆ ಸಹಾಯಕಾರಿಯಾಗಲಿದೆ. ಹೇಗೆ ಅಂಬಾನಿಗಳು ದೇಶದ ಗೌರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯುತ್ತಿದ್ದಾರೆ ಎಂದೆಲ್ಲ ಸುದ್ದಿಗಳನ್ನು ಹಣ ಕೊಟ್ಟು ಅಂಬಾನಿ ಕುಟುಂಬದವರು ಪ್ರಸಾರ ಮಾಡಿಸಿಕೊಂಡಿದ್ದಾರೆ. ಮುಂಬೈ ಮೂಲದ ಯೂಟ್ಯೂಬರ್ ಒಬ್ಬರು ತಮಗೆ ಬಂದ ಅಂಬಾನಿಯವರ ಈ ಆಫರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಹೇಗೆ ಅಂಬಾನಿ ಕುಟುಂಬದವರು ಹಣ ಕೊಟ್ಟು ತಮ್ಮನ್ನು ತಾವೇ ಹೊಗಳಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ಹೊರ ಹಾಕಿದ್ದಾರೆ.

ಕಾವ್ಯಾ ಕರ್ನಾಟಕ್ ಯೂಟ್ಯೂಬರ್ ಆಗಿದ್ದು, ಹಣ ಪಡೆದು ಕೆಲವು ಬ್ರ್ಯಾಂಡ್ ಗಳ‌ಪ್ರಚಾರವನ್ನು ಇವರು ಮಾಡಿದ್ದಾರೆ. ಅಂವಾನಿ ಮದುವೆ ಸಮಯದಲ್ಲಿ ಇವರಿಗೆ ಅಂಬಾನಿ ಸಂಸ್ಥೆಯಿಂದ 3.60 ಲಕ್ಷ ರೂಪಾಯಿಯ ಆಫರ್ ಬಂತಂತೆ. ಅಂಬಾನಿ ಕುಟುಂಬದ ಮದುವೆ ಹೇಗೆ ಭಾರತೀಯ ಆರ್ಥಿಕತೆಯನ್ನು ಹೆಚ್ಚು ಮಾಡಲಿದೆ ಎಂದು ಕಾವ್ಯಾ ತಮ್ಮ ಚಾನೆಲ್ ಮೂಲಕ ಹೇಳಬೇಕಿತ್ತಂತೆ. ಅದಕ್ಕರ ಬೇಕಾದ ಎಲ್ಲ ಮಾಹಿತಿಯನ್ನು ಕಂಪೆನಿಯವರೇ ನೀಡಿದ್ದರಂತೆ ಜೊತೆಗೆ ವಿಡೊಯೋಗಳನ್ನು ಸಹ ನೀಡಿದ್ದರಂತೆ. ಆದರೆ ಕಾವ್ಯಾ ಆ ಆಫರ್ ಅನ್ನು ನಿರಾಕರಿಸಿದ್ದಾರೆ.

Cat Kidnap Case: ಕರ್ನಾಟಕ ಹೈಕೋರ್ಟ್ ನಲ್ಲಿ ಬೆಕ್ಕಿನ ಕಿಡ್ನ್ಯಾಪ್ ಪ್ರಕರಣ!

ಅಸಲಿಗೆ ಇದೇ ಸಮಯದಲ್ಲಿ ಹಲವು ಯೂಟ್ಯೂಬ್ ಚಾನೆಲ್, ಇನ್ ಸ್ಟಾಗ್ರಾಂ ರೀಲ್ ಗಳಲ್ಲಿ ಅಂಬಾನಿ ಮದುವೆಯಿಂದ ಭಾರತಕ್ಕೆ ಎಷ್ಟು ಒಳಿತಾಗಲಿದೆ. ಅಂಬಾನಿ ಹೇಗೆ ದೇಶದ ಗೌರವ ಹೆಚ್ಚಿಸುತ್ತಿದ್ದಾರೆ, ಅಂಬಾನಿ ಕುಟುಂಬದವರು ಅದೆಷ್ಟು ಸಂಸ್ಕಾರವಂತರು, ದೈವ ಭಕ್ತರು ಎಂದೆಲ್ಲ ವಿಡೊಯೋಗಳು ಹರಿದಾಡಿದವು. ಅಸಲಿಗೆ ಇವು ಸಹ ಹಣ ಕೊಟ್ಟು ಮಾಡಿಸಲಾದ ಪ್ರಚಾರ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here