Salman Khan
ಸಲ್ಮಾನ್ ಖಾನ್ ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕೆಲ ಚಿತ್ರ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದರು. ಈ ಚಿತ್ರಗಳಲ್ಲಿ ಸಲ್ಮಾನ್ ಖಾನ್ ಧರಿಸಿದ್ದ ವಾಚು ಬಹುವಾಗಿ ಗಮನ ಸೆಳೆಯಿತು. ಅದ್ಭುತವಾದ ಡಿಸೈನ್ ಒಳಗೊಂಡಿದ್ದು ಆ ವಾಚಿನ ಬೆಲೆ ಬರೋಬ್ಬರಿ 61 ಲಕ್ಷ ರೂಪಾಯಿಗಳು. ವಾಚ್ ನೋಡಿದವರೆಲ್ಲರೂ ವಾವ್, ವಾವ್ ಎನ್ನುತ್ತಿದ್ದರೆ ಕೆಲ ಮುಸ್ಲಿಂ ಧರ್ಮಗಳು ಮಾತ್ರ ಸಲ್ಮಾನ್ ವಾಚ್ ಕಂಡು ಅನವಶ್ಯಕವಾಗಿ ಉರಿ ಹತ್ತಿಸಿಕೊಂಡಿದ್ದಾರೆ.
ಕೆಲ ಮುಸ್ಲಿಂ ಧರ್ಮಗುರುಗಳಿಗೆ ಸಲ್ಮಾನ್ ಖಾನ್ ಧರಿಸಿರುವ ವಾಚ್ ಇಷ್ಟವಾಗಿಲ್ಲ, ಅದಕ್ಕೆ ಕಾರಣವೆಂದರೆ ಸಲ್ಮಾನ್ ಖಾನ್ ಧರಿಸಿರುವುದು ಅಯೋಧ್ಯೆ ಎಡಿಷನ್ ವಾಚು. ಅಯೋಧ್ಯೆ ರಾಮಮಂದಿರ ನಿರ್ಮಾಣವಾದ ಬೆನ್ನಲ್ಲೆ ಜಾಕೋಬ್ ಆಂಡ್ ಕೋ ಸಂಸ್ಥೆಯು ‘ರಾಮ ಜನ್ಮಭೂಮಿ’ ಎಡಿಷನ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ವಾಚಿನ ಡಯಲ್ನಲ್ಲಿ ಶ್ರೀರಾಮ, ಹನುಮಂತ ಮತ್ತು ರಾಮಮಂದಿರದ ಸೂಕ್ಷ್ಮವಾದ ಕೆತ್ತನೆಗಳು ಇದೆ.
Darshan Thoogudeepa: ಮುಂದುವರೆದ ದರ್ಶನ್ ಅಭಿಮಾನಿಗಳ ಹುಚ್ಚಾಟ, ಚಿತ್ರಮಂದಿರಕ್ಕೆ ಹಾನಿ
ಸಲ್ಮಾನ್ ಖಾನ್ ರಾಮ ಮಂದಿರದ ವಾಚ್ ಧರಿಸಿರುವುದು ಕೆಲ ಮುಸ್ಲಿಂ ಧರ್ಮಗುರುಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಸಲ್ಮಾನ್ ಖಾನ್ ಅನ್ನು ಕೆಲ ಧರ್ಮಗುರುಗಳು ‘ಹರಾಮ್’ ಎಂದು ಸಹ ಕರೆದಿದ್ದಾರೆ. ರಾಮನ ವಿಗ್ರಹವಿರುವ ವಾಚ್ ಧರಿಸುವ ಮೂಲಕ ಇಸ್ಲಾಂಗೆ ದ್ರೋಹ ಎಸಗಿದ್ದಾರೆ. ಮುಸ್ಲೀಂ ಸಮುದಾಯದವರಿಗೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ.
ಸಲ್ಮಾನ್ ಖಾನ್ ಮಾತ್ರವೇ ಅಲ್ಲದೆ ಹಲವಾರು ಸಿನಿಮಾ ಸೆಲೆಬ್ರಿಟಿಗಳ ಬಳಿ ಅಯೋಧ್ಯೆ ಎಡಿಷನ್ ವಾಚು ಇದೆ. ಈ ಹಿಂದೆ ನಟ ಅಭಿಷೇಕ್ ಬಚ್ಚನ್ ಅವರು ಇದೇ ರೀತಿಯ ಅಯೋಧ್ಯೆ ಎಡಿಷನ್ ವಾಚ್ ಧರಿಸಿದ್ದರು. ಅದು ಟೈಟಾನಿಯಂ ವರ್ಷನ್ ಆಗಿದ್ದು ಅದರ ಬೆಲೆ ಸುಮಾರು 34 ಲಕ್ಷ ರೂಪಾಯಿಗಳು. ಆದರೆ ಈಗ ಸಲ್ಮಾನ್ ಖಾನ್ ಧರಿಸಿರುವ ವಾಚಿನ ಬೆಲೆ ಬರೋಬ್ಬರಿ 61 ಲಕ್ಷ ರೂಪಾಯಿಗಳು. ಜಾಕೋಬ್ ಆಂಡ್ ಕೋ ಸಂಸ್ಥೆಯವರು ಈ ವಾಚನ್ನು ತಯಾರಿಸಿದ್ದು, ಕೋಟ್ಯಂತರ ಬೆಲೆಯ ದುಬಾರಿ ಮತ್ತು ಐಶಾರಾಮಿ ವಾಚುಗಳನ್ನು ಈ ಸಂಸ್ಥೆಯವರು ಮಾರಾಟ ಮಾಡುತ್ತಾರೆ.
ಅಂದಹಾಗೆ ಸಲ್ಮಾನ್ ಖಾನ್ ನಟನೆಯ ‘ಸಿಖಂಧರ್’ ಸಿನಿಮಾ ನಾಳೆ ಅಂದರೆ ಮಾರ್ಚ್ 30ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ನಾಯಕಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ‘ಘಜಿನಿ’, ‘ಕತ್ತಿ’, ‘ತುಪ್ಪಾಕಿ’, ‘7ತ್ ಸೆನ್ಸ್’, ‘ಸ್ಪೈಡರ್’ ಇನ್ನೂ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಖ್ಯಾತ ತಮಿಳು ನಿರ್ದೇಶಕ ಎಆರ್ ಮುರುಗದಾಸ್. ಸಿನಿಮಾಕ್ಕೆ ಸಾಜಿದ್ ನಾಡಿಯಾವಾಲ ಬಂಡವಾಳ ತೊಡಗಿಸಿದ್ದಾರೆ. ಸಂತೋಷ್ ನಾರಾಯಣ್ ಮತ್ತು ಪ್ರೀತಮ್ ಈ ಸಿನಿಮಾಕ್ಕೆ ಬಂಡವಾಳ ತೊಡಗಿಸಿದ್ದಾರೆ.