Richest cat
ಶ್ರೀಮಂತರು ದುಬಾರಿ ನಾಯಿ, ಬೆಕ್ಕುಗಳನ್ನು ಸಾಕುತ್ತಾರೆ. ಅವಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ. ಆದರೆ ಇಲ್ಲೊಂದು ಬೆಕ್ಕಿದೆ. ಈ ಬೆಕ್ಕು ಅದೆಷ್ಟು ಶ್ರೀಮಂತ ಎಂದರೆ ಈ ಬೆಕ್ಕಿನ ಬಳಿ ಸುಮಾರು 800 ಕೋಟಿಗೂ ಹೆಚ್ಚು ಹಣವಿದೆ. ಈ ಬೆಕ್ಕು ಇಷ್ಟೋಂದು ಹಣ ಗಳಿಸಿದ್ದು ಹೇಗೆ? ಮಾಹಿತಿ ತಿಳಿಯಲು ಮುಂದೆ ಓದಿ….
ಅಮೆರಿಕದ, ಕ್ಯಾಪಿಫೋರ್ನಿಯಾದ ಬೆಕ್ಕು ನಲಾ ಸುಮಾರು 836 ಕೋಟಿ ಆಸ್ತಿಯ ಒಡತಿ. 2010 ರಲ್ಲಿ ಕ್ಯಾಪಿಫೋರ್ನಿಯಾದಲ್ಲಿ ವಾಸವಿದ್ದ ವರಿಸಿರಿ ಮೆತಚಿಟ್ಟಿಪಣ್ ಎಂಬುವರು ಅದನ್ನು ಸಾಕಲು ಆರಂಭಿಸಿದರು. 2012 ರಲ್ಲಿ ಬೆಕ್ಕಿನ ಹೆಸರಲ್ಲಿ ಇನ್ ಸ್ಟಾಗ್ರಾಂ ಸೇರಿದಂತೆ ಕೆಲವು ಸಾಮಾಜಿಕ ಜಾಲತಾಣ ಖಾತೆಗಳನ್ನು ತೆರೆದರು. ಈ ಖಾತೆ ಬರಬರುತ್ತಾ ಜನಪ್ರಿಯವಾಗುತ್ತಾ ಹೋಯ್ತು. ಸುಮಾರು 50 ಲಕ್ಷ ಮಂದಿ ಈ ಬೆಕ್ಕಿನ ಪೇಜ್ ಫಾಲೋ ಮಾಡುತ್ತಿದ್ದಾರೆ. ಅತಿ ಹೆಚ್ಚು ಇನ್ ಸ್ಟಾಗ್ರಾಂ ಫಾಲೋವರ್ ಹೊಂದಿರುವ ಬೆಕ್ಕು ಎಂದು 2020 ರಲ್ಲಿ ಗಿನ್ನೇಸ್ ದಾಖಲೆಗೂ ಸಹ ಈ ಬೆಕ್ಕಿನ ಹೆಸರು ಸೇರಿಕೊಂಡಿದೆ.
ಫಾಲೋವರ್ ಗಳ ಸಂಖ್ಯೆ ಹೆಚ್ಚಿರುವ ಕಾರಣ ಸಹಜವಾಗಿಯೇ ಹಲವು ಕಂಪೆನಿಗಳು ಈ ಬೆಕ್ಕನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರಾಡಕ್ಟ್ ಗಳ ಜಾಹೀರಾತು ಮಾಡಿವೆ, ಮಾಡುತ್ತಲೇ ಇವೆ. ಮಾತ್ರವಲ್ಲದೆ ‘ಲವ್ ನಲಾ’ ಹೆಸರಿನ ಬೆಕ್ಕುಗಳ ಆಹಾರ ಬ್ರ್ಯಾಂಡ್ ಅನ್ನು ಸಹ ಹೊಂದಿದೆ. ತನ್ನದೇ ಹೆಸರಿನ ವೆಬ್ ಸೈಟ್, ನಲಾ ಹೆಸರಿನ ಪುಸ್ತಕವನ್ನು ಸಹ ಪ್ರತಿಷ್ಠಿತ ಪಂಗ್ವಿನ್ ಪಬ್ಲಿಷರ್ಸ್ ಹೊರತಂದಿದೆ. ಅನಿಮೇಷನ್, ಜಾಹೀರಾತು ಹೀಗೆ ಹಲವು ಮೂಲಗಳಿಂದ ಕೋಟ್ಯಂತರ ಹಣವನ್ನು ಈ ಬೆಕ್ಕು ಗಳಿಸಿಕೊಂಡಿದೆ.
http://Dr. Bro: ತಮ್ಮ ತಿಂಗಳ ಆದಾಯ ಬಹಿರಂಗಪಡಿಸಿದ ಖ್ಯಾತ ಯೂಟ್ಯೂಬರ್ ‘ಡಾ ಬ್ರೋ’
ಇನ್ ಸ್ಟಾಗ್ರಾಂ ಮಾತ್ರವೇ ಅಲ್ಲದೆ ಟಿಕ್ ಟಾಕ್, ಯೂಟ್ಯೂಬ್, ಫೇಸ್ ಬುಕ್ ಗಳಲ್ಲಿಯೂ ಸಹ ನಲಾ ಖಾತೆ ಹೊಂದಿದ್ದು, ಎಲ್ಲೆಡೆಯೂ ನಲಾ ಗೆ ಲಕ್ಷಾಂತರ ಫಾಲೋವರ್ ಗಳಿದ್ದಾರೆ.