Nokia Magic Max 5G
ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳದಿದ್ದರೆ ಎಂಥಹಾ ಉತ್ತುಂಗದಲ್ಲಿದ್ದರೂ ಪಾತಾಳಕ್ಕೆ ಬೀಳುತ್ತೇವೆ ಎಂಬುದಕ್ಕೆ ನೋಕಿಯಾ ಅತ್ಯುತ್ತಮ ಉದಾಹರಣೆ. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬರುವಮುಂಚೆ ಮುಂಚೆ ನೋಕಿಯಾ ಫೋನು ರಾಜನಂತೆ ಮೆರೆದಿತ್ತು. ಆದರೆ ಆಂಡ್ರಾಯ್ಡ್ ಬಂದ ಕಾಲಕ್ಕೆ ನೋಕಿಯಾ, ಆಡ್ರಾಯ್ಡ್ ಆಪರೇಟಿಂಗ್ ಸಿಸ್ಟಂಗೆ ಬದಲಾಗಲಿಲ್ಲ, ಆಂಡ್ರಾಯ್ಡ್ ಅನ್ನು ನಿರಾಕರಿಸಿತು. ಇದರಿಂದಾಗಿ ನೋಕಿಯಾ ಪಾತಾಳಕ್ಕೆ ಜಾರಿತು. ಈಗ ಮತ್ತೆ ಮೇಲೆದ್ದು ಬರಲು ಮುಂದಾಗಿದೆ.
ಮೊದಲ ಬಾರಿಗೆ ಆಂಡ್ರಾಯ್ಡ್ ಅನ್ನು ನಿರಾಕರಿಸಿದ್ದ ನೋಕಿಯಾ ಈಗ ಆಂಡ್ರಾಯ್ಡ್ ಶಕ್ತಿಯನ್ನು ಅರಿತುಕೊಂಡಿದ್ದು, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಫೋನುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ನೋಕಿಯಾ ಹೊಸದೊಂದು ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ತಂದಿದ್ದು, ಗಟ್ಟಿತನ, ಡಿಸೈನ್ ಮತ್ತು ಬಣ್ಣಗಳಿಂದ ಸೆಳೆಯುತ್ತಿದೆ. ಬೆಲೆಯೂ ದುಬಾರಿ ಏನಲ್ಲ.
ನೋಕಿಯಾ ಕಳೆದ ಕೆಲ ವರ್ಷಗಳಿಂದ ಆಂಡ್ರಾಯ್ಡ್ ಫೋನ್ ಗಳನ್ನು ಮಾರುಕಟ್ಟೆಗೆ ತರುತ್ತಿದೆ. ಇದರ ಬೆಲೆಗಳು 10 ರಿಂದ 15 ಸಾವಿರದ ಒಳಗೆ ಇವೆ. ಆದರೆ ಈಗ ನೋಕಿಯಾ ಹೊಸ ಮ್ಯಾಜಿಕ್ ಮ್ಯಾಕ್ಸ್ 5ಜಿ ಫೋನು ಮಾರುಕಟ್ಟೆಗೆ ತರಲಿದ್ದು ನೋಕಿಯಾದ ಈ ಹಿಂದಿನ ಫೋನುಗಳಿಗೆ ಹೋಲಿಸಿದರೆ ಉತ್ಕೃಷ್ಟ ಗುಣಮಟ್ಟವನ್ನು ಹೊಂದಿದೆ. ಡಿಸೈನ್, ಶಕ್ತಿ, ಗಟ್ಟಿತನ ಎಲ್ಲದರ ಮೂಲಕ ಗಮನ ಸೆಳೆಯುತ್ತಿದೆ.
http://ಬಿಡುಗಡೆ ಆಗುತ್ತಿದೆ ಸ್ಯಾಮ್‌ಸಂಗ್, ಆಫಲ್ ಗೂ ನಡುಕ ಹುಟ್ಟಿಸಿರುವ ‘ನಥಿಂಗ್’ ಫೋನ್
ನೋಕಿಯಾ ಮ್ಯಾಜಿಕ್ ಮ್ಯಾಕ್ಸ್ ಫೋನಿನ ಡಿಸೈನ್ ಐಫೋನ್ ಮಾದರಿಯಲ್ಲಿದೆ. ಅದೇ ಮಾದರಿಯ ಅಂಚುಗಳು, ಕ್ಯಾಮೆರಾ ಎಲ್ಲವನ್ನೂ ಒಳಗೊಂಡಿದೆ. ವಿಶೇಷವೆಂದರೆ ಈ ಫೋನಿನ ಮುಂದೆ ಮಾತ್ರವಲ್ಲ ಹಿಂದೆ ಸಹ ಡಿಸ್ ಪ್ಲೇ ಇದೆ. ಈ ಡಿಸ್ಪ್ಲೇ ನಲ್ಲಿ ಸಮಯ, ದಿನಾಂಕ, ಇನ್ನಿತರೆ ನೋಟೊಫಿಕೇಶನ್ ಗಳು ಕಾಣಿಸಿಕೊಳ್ಳುತ್ತವೆ.
12 ಜಿಬಿ ರ್ಯಾಮ್, 500 ಜಿಬಿ ಸ್ಟೋರೇಜ್ ಕೆಪಾಸಿಟಿ ಹೊಂದಿರುವ ಈ ಫೋನು 144 ಮೆಗಾಪಿಕ್ಸಲ್ ಕ್ಯಾಮೆರಾ ಒಳಗೊಂಡಿರಲಿದೆಯಂತೆ. ಮಾತ್ರವಲ್ಲ ಇದು ಹಿಂದೆ ಮೂರು ಮತ್ತು ಮುಂದೆ ಎರಡು ಕ್ಯಾಮೆರಾಗಳನ್ನು ಒಳಗೊಂಡಿರಲಿದೆ. 6.7 ಇಂಚಿನ ದೊಡ್ಡ ಡಿಸ್ಪ್ಲೇ ಜೊತೆಗೆ ಶಕ್ತಿಯುತ ಚಿಪ್ ಸೆಟ್, ಪ್ರಾಸೆಸರ್ ಗಳನ್ನು ಒಳಗೊಂಡಿರಲಿದೆ. ನೋಕಿಯಾ ಮೆಗಾ ಮ್ಯಾಕ್ಸ್ 5ಜಿಯ ಬೆಲೆ 30 ಸಾವಿರ ರೂಪಾಯಿಯ ಆಸು-ಪಾಸು ಇರಲಿದೆ ಎನ್ನಲಾಗಿದೆ.