US Election
ಅಮರಿಕದ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. 48 ಗಂಟೆಗಳ ಒಳಗೆ ಅಲ್ಲಿ ಮತದಾನ ನಡೆಯಲಿದೆ. ಅಮೆರಿಕದಲ್ಲಿ ಮತದಾನಕ್ಕೆ ಭಾರತದಂತೆ ಬ್ಯಾಲೆಟ್ ಯಂತ್ರ ಬಳಸುವುದಿಲ್ಲ ಬದಲಿಗೆ ಮತಪತ್ರ ಬಳಸಲಾಗುತ್ತದೆ. ಈ ಹಿಂದೆ ಭಾರತದಲ್ಲಿಯೂ ಇದೇ ಮಾದರಿಯಲ್ಲಿ ಮತದಾನ ನಡೆಯುತ್ತಿತ್ತು. ಜನ ಮತಪತ್ರದಲ್ಲಿ ಮುದ್ರೆ ಒತ್ತಿ ಅದನ್ನು ಮತಪೆಟ್ಟಿಗೆಗೆ ಹಾಕುತ್ತಿದ್ದರು. ಅಮೆರಿಕದಲ್ಲಿ ಈಗಲೂ ಅದೇ ಪದ್ಧತಿ ಬಳಕೆಯಲ್ಲಿದೆ. ಮತದಾರರ ಅನುಲೂಲಕ್ಕಾಗಿ ಮತಪತ್ರದಲ್ಲಿ ಸೂಚನೆಗಳನ್ನು, ಅಭ್ಯರ್ಥಿ ಮತ್ತು ಪಕ್ಷದ ಹೆಸರುಗಳನ್ನು ಕೆಲ ಭಾಷೆಗಳಲ್ಲಿ ಮುದ್ರಿಸಲಾಗುತ್ತದೆ. ಈ ಭಾರಿ ಭಾರತೀಯ ಭಾಷೆಯ ಬಳಕೆ ಮಾಡಲಾಗುತ್ತಿದೆ. ಆದರೆ ಆ ಭಾಷೆ ಹಿಂದಿ ಅಲ್ಲ!
ಅಮೆರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯರು ನೆಲೆಸಿದ್ದಾರೆ. ಭಾರತೀಯರ ಮತಗಳು ಚುನಾವಣೆ ದಿಕ್ಕನ್ನೇ ಬದಲಾಯಿಸುತ್ತವೆ, ಈ ಬಾರಿ ಚುನಾವಣಾ ಪ್ರಚಾರದಲ್ಲಿ ಸಹ ಅಧ್ಯಕ್ಷೀಯ ಅಭ್ಯರ್ಥಿಗಳಾದ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಅವರುಗಳು ಭಾರತೀಯರ ಮತ ಗಳಿಸುವ ಉದ್ದೇಶದಿಂದಲೇ ಪ್ರಚಾರ ಮಾಡಿದ್ದರು. ಮಾತ್ರವಲ್ಲದೆ ಭಾರತೀಯ ಭಾಷೆಗಳಲ್ಲಿ ಚುನಾವಣಾ ಪತ್ರ, ಪೋಸ್ಟರ್’ಗಳನ್ನು ಸಹ ಹಂಚಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈಗ ಮತಪತ್ರದಲ್ಲೂ ಭಾರತೀಯ ಭಾಷೆ ಸೇರಿಕೊಂಡಿದೆ.
ಅಮರಿಕದ ಚುನಾವಣಾ ಮತಪತ್ರದಲ್ಲಿ ಐದು ಭಾಷೆಗಳನ್ನು ಬಳಕೆ ಮಾಡಲಾಗುತ್ತದೆ. ಇಂಗ್ಲೀಷ್, ಚೈನೀಸ್, ಸ್ಪ್ಯಾನಿಷ್, ಕೊರಿಯನ್ ಮತ್ತು ಭಾರತದ ಬೆಂಗಾಳಿ ಭಾಷೆಯನ್ನು ಮತಪತ್ರದಲ್ಲಿ ಮುದ್ರಿಸಲಾಗುತ್ತದೆ. ಬೆಂಗಾಳಿ ಭಾಷೆಯನ್ನು ಬಳಸುವುದು ಅಮೆರಿಕದ ಭಾಷಾ ಬಳಕೆ ಕಾನೂನಿನಲ್ಲಿ ಅಡಕವಾಗಿದೆ. ಅಂದಹಾಗೆ ಬೆಂಗಾಲಿ ಭಾಷೆಯನ್ನು ಇದೇ ಮೊದಲ ಬಾರಿಗೆ ಏನೂ ಬಳಸುತ್ತಿಲ್ಲ, ಈ ಮೊದಲು 2013 ರ ಚುನಾವಣೆಯಲ್ಲಿಯೂ ಸಹ ಮತಪತ್ರದಲ್ಲಿ ಬೆಂಗಾಲಿ ಭಾಷೆಯನ್ನು ಬಳಸಲಾಗಿದೆ. 1965 ರ ಮತದಾನ ಹಕ್ಕು ಕಾಯ್ದೆಯ ಅಡಿಯಲ್ಲಿ ದಕ್ಷಿಣ ಎಡಷಿಯಾ ಸಮುದಾಯದ ಭಾಷೆಯಾಗಿ ಬೆಂಗಾಲಿಯನ್ನು ಮತಪತ್ರ ಮತ್ತು ಕೆಲ ಪ್ರದೇಶದ ಬ್ಯಾಲೆಟ್’ಗಳಲ್ಲಿ ಬಳಸಲಾಗುತ್ತಿದೆ.
HD Kumaraswamy: ಐಪಿಎಸ್ ಅಧಿಕಾರಿಗೆ ಬೆದರಿಕೆ ಕುಮಾರಸ್ವಾಮಿ ಮತ್ತು ನಿಖಿಲ್ ವಿರುದ್ಧ ಎಫ್’ಐಆರ್ ದಾಖಲು
ಅಮೆರಿಕದ ನ್ಯೂಯಾರ್ಕ್ ಒಂದರಲ್ಲಿಯೇ 200 ಕ್ಕೂ ಹೆಚ್ಚು ಭಾಷೆ ಮಾಡುವ ವಿವಿಧ ದೇಶಗಳ, ಸಮುದಾಯದ ಜನರಿದ್ದಾರೆ. ದೊಡ್ಡ ಸಂಖ್ಯೆಯ ಭಾರತೀಯರು ಅಮೆರಿಕದ ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದು, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಈ ಬಾರಿ ರಿಪಬ್ಲಿಕ್ ಪಾರ್ಟಿಯಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಸ್ಪರ್ಧೆ ಮಾಡಿದ್ದಾರೆ. ಇಬ್ಬರ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.