Nithin Kamath: ತನ್ನ ಗ್ರಾಹಕರಿಗೆ 4 ವರ್ಷದಲ್ಲಿ 50 ಸಾವಿರ ಕೋಟಿ ಆದಾಯ ಮಾಡಿಕೊಟ್ಟಿದೆ ಬೆಂಗಳೂರಿನ ಈ ಕಂಪೆನಿ

0
187
Nithin Kamath

Nithin Kamath

ಹೂಡಿಕೆ ಪಡೆದು ಲಾಭ ಹಂಚುವ ಹಲವು ಸಂಸ್ಥೆಗಳು ಭಾರತದಲ್ಲಿವೆ. ಹಲವು ಸಂಸ್ಥೆಗಳು ಉತ್ತಮ ಲಾಭವನ್ನೇ ತನ್ನ ಗ್ರಾಹಕರಿಗೆ ಮಾಡಿಕೊಡುತ್ತಿವೆ. ಗ್ರಾಹಕರ ಹಣ ಮುಳುಗಿಸಿರುವ ಸಂಸ್ಥೆಗಳು ಸಹ ಇವೆ. ಇದರ ನಡುವೆ ಬೆಂಗಳೂರಿನ ಕಂಪೆನಿಯೊಂದು ಕಳೆದ ಕೇವಲ‌ ನಾಲ್ಕು ವರ್ಷದಲ್ಲಿ ತನ್ನ ಗ್ರಾಹಕರಿಗೆ ಬರೋಬ್ಬರಿ 50 ಸಾವಿರ ಕೋಟಿ ಲಾಭ ಮಾಡಿಕೊಟ್ಟಿದೆ. ಆ ಸಂಸ್ಥೆ ಮತ್ಯಾವುದು ಅಲ್ಲ ಭಾರತದ  ಅತ್ಯಂತ ಹೆಚ್ಚು ಬಳಕೆಯ ಷೇರ್ ಬ್ರೋಕರ್ ಸಂಸ್ಥೆ ಜಿರೋಧಾ.

ನಿತಿನ್ ಕಾಮತ್-ನಿಖಿಲ್‌ಕಾಮತ್ ಸಹೋದರರು ಸ್ಥಾಪಿಸೊರುವ ಜಿರೋಧ ಸಂಸ್ಥೆ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹಪಂದಿರುವ ಟ್ರೇಡಿಂಗ್ ಸಂಸ್ಥೆ. ಮಾತ್ರವಲ್ಲದೆ ಅತಿ ಹೆಚ್ಚು ಲಾಭ ಮಾಡುತ್ತಿರುವ ಸಂಸ್ಥೆ ಸಹ. ಇದೀಗ ಈ ಸಂಸ್ಥೆಯ ಸಹ ಸಂಸ್ಥಾಪಕ ನಿತಿನ್ ಕಾಮತ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಗ್ರಾಹಕರು ಜಿರೋಧಾ ಮೂಳ ಹೂಡಿಕೆ ಮಾಡಿ ಕಳೆದ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 50 ಸಾವಿರ ಕೋಟಿ ಲಾಭ ಮಾಡಿದ್ದಾರಂತೆ.

https://samasthanews.com/which-country-has-more-gold-reserve-how-much-gold-reserve-india-has/

ಟ್ವೀಟ್ ಮಾಡಿರುವ ನಿತಿನ್ ಕಾಮತ್ ಕಳೆದ ನಾಲ್ಕು ವರ್ಷದಲ್ಲಿ ಜಿರೋಧಾ ಬಳಸಿ ಹೂಡಿಕೆ ಮಾಡಿರುವ ಹೂಡಿಕೆದಾರರು 50 ಸಾವಿರ ಕೋಟಿ ಲಾಭವನ್ನು ಮಾಡಿದ್ದಾರೆ. ಅಲ್ಲದೆ 4.50 ಲಕ್ಷ ಕೋಟಿಯ ಎಯುಎಂ ನಿಂದಾಗಿ 1 ಲಕ್ಷ ಕೋಟಿಗೂ ಹೆಚ್ಚಿನ ಲಾಭವನ್ನು ಪಡೆದಿದ್ದಾರೆ ಎಂದಿದ್ದಾರೆ ನಿತಿನ್. ಈ ಎಯುಎಂ ಗಳು ಕಳೆದ ಕೆಲ ವರ್ಷಗಳಲ್ಲಿ ಪ್ರಾರಂಭಿಸಲಾಗಿವೆ ಎಂದಿದ್ದಾರೆ ನಿತಿನ್.

ನಿತಿನ್ ಕಾಮತ್ ಇಲ್ಲಿ ನೀಡೊರುವುದು ಈಕ್ವಿಟಿ ಹೂಡಿಕೆಯ ಲಾಭವನ್ನಷ್ಟೆ. ಆಪ್ಷನ್ಸ್, ಫ್ಯೂಚರ್ಸ್ ನ‌ಲಾಭ ಅಥವ ನಷ್ಟದ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇತ್ತೀಚೆಗಷ್ಟೆ ಜಿರೋಧ ಮ್ಯೂಚಲ್‌ ಫಂಡ್ ಅನ್ನು ಸಹ ಪ್ರಾರಂಭ ಮಾಡಿದೆ.

LEAVE A REPLY

Please enter your comment!
Please enter your name here