Site icon Samastha News

Temple: ವಿಶ್ವ ಪ್ರಸಿದ್ಧ ಪದ್ಮನಾಭಸ್ವಾಮಿ ದೇಗುಲದಲ್ಲಿ ಮಾಂಸಾಹಾರ! ಹೊತ್ತಿಕೊಂಡಿದೆ ವಿವಾದದ ಕಿಡಿ

Temple

Temple

ಕೇರಳ, ತಿರುವನಂತಪುರದ ಪದ್ಮನಾಭಸ್ವಾಮಿ ದೇಗುಲ ಯಾರಿಗೆ ತಾನೆ ತಿಳಿದಿಲ್ಲ. ಭಾರಿ ಪ್ರಮಾಣದಲ್ಲಿ ಚಿನ್ನ ಪತ್ತೆಯಾದ ಬಳಿಕವಂತೂ ಈ ದೇವಾಲಯ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಇದೀಗ ಈ ದೇವಾಲಯ ವಿವಾದದ ಕೇಂದ್ರವಾಗಿದೆ. ಅದಕ್ಕೆ ಕಾರಣ ಮಾಂಸಾಹಾರ!

ಹಿಂದೂ ದೇವಾಲಯಗಳಲ್ಲಿ ಮಾಂಸಾಹಾರಕ್ಕೆ ನಿಷೇಧ. ಆದರೆ ಕಳೆದ ಶನಿವಾರ ಸಾಮಾಜಿಕ ಜಾಲತಾಣದಲ್ಲಿ‌ ಬಿರಿಯಾನಿ ಪ್ಯಾಕೆಟ್ ಗಳ ಚಿತ್ರ ಹರಿದಾಡಿತ್ತು. ಈ ಚಿತ್ರ ಪ್ರಸಿದ್ಧ ಪದ್ಮನಾಭಸ್ವಾಮಿ ದೇವಾಲಯದ ಒಳಗಿನ ಕಚೇರಿಯದ್ದು ಎನ್ನಲಾಗಿದೆ. ಇದು ಭಕ್ತಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ದೇವಾಲಯದ ಕೆಲ ಪೂಜಾರಿಗಳು ಸಹ ಈ ಘಟನೆಯನ್ನು ಖಂಡಿಸಿದ್ದು ಪ್ರತಿಭಟನೆ ನಡೆಸಿದ್ದಾರೆ.

ವಿಶ್ವದಲ್ಲೇ ಅಪರೂಪ ಪುಣೆಯ ಕೊಲೆ ಕೇಸ್: ಶಿಕ್ಷೆ ಪ್ರಕಟಣೆಯೂ ಅಪರೂಪದ್ದು

ಕೆಲವು ದಿನದ ಹಿಂದೆ ಬಿರಿಯಾನಿ ಪಾಕೆಟ್ ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆ ಬಿರಿಯಾನಿ ಪಾಕೆಟ್ ಗಳನ್ನು ಪದ್ಮನಾಭ ಸ್ವಾಮಿ ದೇವಾಲಯದ ಕಚೇರಿ ಇರುವ, ದೇವಾಲಯಕ್ಕೆ ಸೇರಿದ ಮತ್ತಿಲಕಂ ಕಟ್ಟಡದ ಚಿತ್ರ ಎನ್ನಲಾಗಿತ್ತು. ಅದೂ ಸಹ ಆ ಬಿರಿಯಾನಿ ಪಾಕೆಟ್ ಗಳನ್ನು ದೇವಾಲಯದ ಸಿಬ್ಬಂದಿ ಊಟ ಮಾಡುವ ಜಾಗದಲ್ಲಿಯೇ ಇಡಲಾಗಿತ್ತು ಎನ್ನಲಾಗಿದೆ.

ಈ ಹಿಂದೆಯೂ ಸಹ ದೇವಾಲಯದ ಕೆಲ ಆಡಳಿತ‌ ಸಿಬ್ಬಂದಿ ದೇವಾಲಯಕ್ಕೆ ಮಾಂಸಾಹಾರ ತಂದು ಸೇವಿಸಿದ್ದಿದೆ ಎಂದು ದೇವಾಲಯದ ಕೆಲವರು ಹೇಳಿರುವುದಾಗಿ ಕೇರಳದ ಕೆಲ ಪತ್ರಿಕೆಗಳು ವರದಿ ಮಾಡಿವೆ. ದೇವಾಲಯದ ಪ್ರಮುಖ ಅರ್ಚಕ ತರನನೆಲ್ಲೂರು ನಂಬೂದಿರಿ ಪದ ಅವರು ಮಾತನಾಡಿ, ಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು. ತನಿಖೆಗೆ ಒತ್ತಾಯಿಸಿದ್ದಾರೆ. ಅಲ್ಲದೆ ದೇವಾಲಯದ ರಾಜಮನೆತನದವರಾದ ಕೌಡಿಯಾರ್ ರಾಜಮನೆತನದವರು ಸಹ ಸರ್ಕಾರಕ್ಕೆ ಪತ್ರ ಬರೆದು ತನಿಖೆಗೆ ಒತ್ತಾಯ ಮಾಡಿದ್ದಾರೆ‌.

Exit mobile version