Site icon Samastha News

Hurun Report: ದೀಪಿಕಾ, ಅಲಿಯಾ ಅಲ್ಲ, ಭಾರತದ ಶ್ರೀಮಂತ ನಟಿ ಈಕೆ, ಕನ್ನಡಿಗರಿಗೆ ಚೆನ್ನಾಗಿಯೇ ಪರಿಚಯ

Hurun report,

Hurun Report

ಭಾರತೀಯ ಸಿನಿಮಾ ಆರಂಭ ಆದಾಗಿನಿಂದಲೂ ಪುರುಷ ಪ್ರಧಾನವೇ. ಸಿನಿಮಾ ನಟರಿ ಅಥವಾ ನಾಯಕರಿಗೆ ಇರುವಷ್ಟು ಪ್ರಾಧಾನ್ಯತೆ ನಾಯಕಿಯರಿಗೆ ಇಲ್ಲ. ಸಂಭಾವನೆ ವಿಷಯದಲ್ಲಂತೂ ನಾಯಕ ಮತ್ತು ನಾಯಕಿ ನಡುವೆ ಆಕಾಶ ಭೂಮಿಯ ಅಂತರ ಇದೆ. ಎಲ್ಲ ಅಡೆ ತಡೆಗಳ ನಡುವೆಯೂ ಕೆಲವು ನಾಯಕಿಯರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಒಳ್ಳೆಯ ಹಣವನ್ನೂ ಗಳಿಸಿದ್ದಾರೆ.

ಈಗ ಮಾರುಕಟ್ಟೆಯಲ್ಲಿರು ಅತಿ ಹೆಚ್ಚು ಸಂಭಾವನೆ ಪಡೆವ ನಟಿಯರೆಂದರೆ ಅದು ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್. ಆದರೆ ಭಾರತದ ಶ್ರೀಮಂತ ನಟಿಯರು ಇವರಲ್ಲ. ಬದಲಿಗೆ 90ರ ದಶಕದಲ್ಲಿ ಭಾರತೀಯ ಚಿತ್ರರಂಗವನ್ನು ಆಳಿದ ನಟಿ, ಈಗಲೂ ಸಹ ಭಾರತದ ಶ್ರೀಮಂತ ನಟಿ. ಅಂದಹಾಗೆ ಈ ನಟಿ ಕನ್ನಡದಲ್ಲಿಯೂ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಮತ್ಯಾರೂ ಅಲ್ಲ ನಟಿ ಜೂಹಿ ಚಾವ್ಲಾ.

ಇತ್ತೀಚೆಗಷ್ಟೆ ಹೂರುನ್ ಇಂಡಿಯಾ ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತದ ಅತ್ಯಂತ ಶ್ರೀಮಂತ ನಟಿ ಸ್ಥಾನವನ್ನು ಜೂಹಿ ಚಾವ್ಲಾ ತಮ್ಮದಾಗಿಸಿಕೊಂಡಿದ್ದಾರೆ. ಜೂಹಿ ಚಾವ್ಲಾರ ಒಟ್ಟು ಆಸ್ತಿ ಮೌಲ್ಯ 4500 ಕೋಟಿ ರೂಪಾಯಿಗಳು. ಅವರ ಪಾಲುದಾರ, ನಟ ಶಾರುಖ್ ಖಾನ್ ಆಸ್ತಿ 7000 ಸಾವಿರ ಕೋಟಿ ರೂಪಾಯಿಗಳು.

Belagavi Hindalga Jail: ನಮಗೊಂದು ನ್ಯಾಯ, ದರ್ಶನ್ ಗೊಂದು ನ್ಯಾಯವಾ? ನಮಗೂ ಬೇಕು ರಾಜಾತಿಥ್ಯ, ಕೈದಿಗಳ ಪ್ರತಿಭಟನೆ

ಜೂಹಿ ಚಾವ್ಲಾ, ಇಷ್ಟೋಂದು ಆಸ್ತಿಯನ್ನು ಸಿನಿಮಾ ನಟನೆಯಿಂದ ಗಳಿಸಿಲ್ಲ ಬದಲಿಗೆ ಕೆಲವು ಉದ್ಯಮಗಳು ಹಾಗೂ ರಿಯಲ್ ಎಸ್ಟೇಟ್ ನಿಂದ ಗಳಿಸಿದ್ದಾರೆ. ಜೊತೆಗೆ ಜೂಲಿ ಚಾವ್ಲಾರ ಪತಿ ಸಹ ದೊಡ್ಡ ಉದ್ಯಮಿ ಆಗಿದ್ದು, ಜೂಲಿ ಶ್ರೀಮಂತಿಕೆಯಲ್ಲಿ ಅವರ ಕೊಡುಗೆಯೂ ಸಹ ಸಾಕಷ್ಟಿದೆ. ಜೂಹಿ ಚಾವ್ಲಾ ಪತಿ ಜೈ ಮೆಹ್ತಾ ಭಾರತದ ಟಾಪ್ ಉದ್ಯಮಿಗಳಲ್ಲಿ ಒಬ್ಬರು. ಮೆಹ್ತಾ ಗ್ರೂಪ್ ನಲ್ಲಿ ಜೂಹಿ ಅವರ ಪಾಲೂ ಸಹ ಇದೆ. ಜೊತೆಗೆ ಐಪಿಎಲ್ ತಂಡವಾಗಿರುವ ಕೆಕೆಆರ್ ನಲ್ಲಿಯೂ ಜೂಲಿ ಪಾಲುದಾರಿಕೆ ಇದೆ. ಸ್ವತಃ ಜೂಲಿ ಕೆಲವು ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹಾಗಾಗಿ ಜೂಲಿಯ ಆಸ್ತಿ ಮೌಲ್ಯ ಹೆಚ್ಚಾಗಿದ್ದು, ಶ್ರೀಮಂತ ನಟಿ ಎನಿಸಿಕೊಂಡಿದ್ದಾರೆ.

Exit mobile version