Site icon Samastha News

Dog Meat: ನಾಯಿ ಮಾಂಸ ಆರೋಪ, ಅಬ್ದುಲ್ ರಜಾಕ್​ನಿಂದ ಮಾಂಸ ಖರೀದಿಸಿದ ಹೋಟೆಲ್​ಗಳಿಗೆ ನೊಟೀಸ್

Dog Meet

Dog Meat

ಬೆಂಗಳೂರಿಗೆ ರೈಲಿನಲ್ಲಿ ನಾಯಿಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಪುನೀತ್ ಕೆರೆಹಳ್ಳಿ ಇನ್ನಿತರರು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ್ದ ಮಾಂಸ ಆಮದು, ಮಾಡಿಕೊಂಡಿದ್ದ ಅಬ್ದುಲ್ ರಜಾಕ್, ತಾವು ರಾಜಸ್ಥಾನದಿಂದ ಕುರಿ ಮಾಂಸವನ್ನೇ ತರಿಸಿರುವುದಾಗಿ ವಾದ ಮಾಡಿದರು. ಅಲ್ಲದೆ ಪುನೀತ್ ಕೆರೆಹಳ್ಳಿ ಜೊತೆ ವಾಗ್ವಾದ ನಡೆಸಿದ್ದರು. ಪ್ರತಿಭಟನೆ ಬಳಿಕ ಬಾಕ್ಸ್​ಗಳಲ್ಲಿದ್ದ ಮಾಂಸವನ್ನು ಹೈದರಾಬಾದ್​ನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಇನ್ನೂ ಬಂದಿಲ್ಲವಾದರೂ ಆಹಾರ ಸುರಕ್ಷತೆ ಅಧಿಕಾರಿಗಳು ಅಬ್ದುಲ್​ನಿಂದ ಮಾಂಸ ಖರೀದಿಸಿರುವ ಎಲ್ಲ ಹೋಟೆಲ್​ಗಳಿಗೆ ನೊಟೀಸ್ ನೀಡಿದ್ದಾರೆ.

ಮಾಂಸವನ್ನು ಪರಿಶೀಲನೆ ಮಾಡಿರುವ ಪಶು ವೈದ್ಯಾಧಿಕಾರಿಗಳು ಡಬ್ಬದಲ್ಲಿದ್ದಿದ್ದು ನಾಯಿ ಮಾಂಸವಲ್ಲ ಎಂದು ಖಾತ್ರಿ ಪಡಿಸಿದ್ದಾರಾದರೂ, ಡಬ್ಬದಲ್ಲಿದ್ದ ಮಾಂಸ ಶುಚಿಯಾಗಿರಲಿಲ್ಲ. ಅದು ತಿನ್ನಲು ಯೋಗ್ಯವಾದ ಮಾಂಸವಲ್ಲ ಎಂದು ಹೇಳಿದ್ದಾರೆ. ಆಹಾರ ಸುರಕ್ಷತೆ ಅಧಿಕಾರಿಗಳು ಸಹ ಮಾಂಸ ಶುಚಿ ಇಲ್ಲದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಅದ್ಭುಲ್ ರಜಾಕ್​ಗೆ ಸೇರಿದಂತೆ ಅವರಿಂದ ಮಾಂಸ ಖರೀದಿ ಮಾಡಿರುವ ಎಲ್ಲ ಹೋಟೆಲ್​ಗಳಿಗೆ ನೊಟೀಸ್ ನೀಡಿದ್ದು, ಅದ್ಬುಲ್ ರಜಾಕ್​ನಿಂದ ಎಷ್ಟು ವರ್ಷಗಳಿಂದ ಮಾಂಸ ಖರೀದಿ ಮಾಡುತ್ತಿದ್ದೀರಿ ಎಂದು ತಿಳಿಸುವಂತೆ ಹೇಳಿದ್ದಾರೆ. ಆಮದಾಗಿರುವ ಮಾಂಸವನ್ನು ರೈಲ್ವೆಯಿಂದ ಕೆಳಗೆ ಇಳಿಸಿಕೊಳ್ಳುವ ಜಾಗದಲ್ಲಿ ಇರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ.

Manu Bhaker: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಭಾಕೆರ್ ಯಾರು?

ರಾಜಸ್ಥಾನದಿಂದ ಆಮದಾಗಿರುವ ಮಾಂಸವನ್ನು ಹೈದರಾಬಾದ್​ನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬರುವುದು ಇನ್ನೂ ನಾಲ್ಕು ದಿನಗಳಾಗಬಹುದು ಎನ್ನಲಾಗುತ್ತಿದೆ. ಆದರೆ ಪಶುವೈದ್ಯಾಧಿಕಾರಿಗಳು ಈಗಾಗಲೇ ಅದು ಕುರಿಯದ್ದೇ ಮಾಂಸ ಎಂದು ಖಚಿತಪಡಿಸಿದ್ದಾರೆ. ರಾಜಸ್ಥಾನದಿಂದ ಆಮದಾಗಿರುವ ಮಾಂಸಕ್ಕೆ ನಾಯಿಯಂತೆ ಉದ್ದನೆಯ ಬಾಲ ಇರುವುದು ಅನುಮಾನಕ್ಕೆ ಕಾರಣವಾಗಿತ್ತು. ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರು ಪ್ರತಿಭಟನೆ ಮಾಡಿದಾಗಲೂ ಇದೇ ವಿಷಯದ ಬಗ್ಗೆ ಪ್ರಶ್ನೆ ಮಾಡಿದ್ದರು. ಆದರೆ ರಾಜಸ್ಥಾನದಲ್ಲಿ ಉದ್ದ ಬಾಲದ ಕುರಿಗಳನ್ನೇ ಮಾಂಸಕ್ಕಾಗಿ ಸಾಕಲಾಗುತ್ತದೆ.

ಇನ್ನು ಪ್ರತಿಭಟನೆ ಮಾಡಿ ದಾಂಧಲೆ ಎಬ್ಬಿಸಿದ್ದ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಮಧ್ಯರಾತ್ರಿ 12 ಗಂಟೆ ವೇಳೆಗೆ ಬಂಧಿಸಿದ್ದರು. ಬಳಿಕ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಅಸ್ವಸ್ಥರಾದರು, ಬೆಳಿಗಿನ ಜಾವವೇ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಮಾರನೇಯ ದಿನ ಪುನೀತ್ ಕೆರೆಹಳ್ಳಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯ್ತು. ಪುನೀತ್ ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಯ್ತು.

Exit mobile version