Nuclear Battery: ಬರುತ್ತಿದೆ ಹೊಸ ಬಗೆಯ ಸ್ಮಾರ್ಟ್‌ಫೋನ್‌, ಚಾರ್ಜ್‌ ಮಾಡುವ ಅಗತ್ಯವೇ ಇಲ್ಲ

0
172

Nuclear Battery

ಸ್ಮಾರ್ಟ್‌ ಫೋನ್‌ ಲೋಕದಲ್ಲಿ ದಿನದಿಂದ ದಿನಕ್ಕೆ ಹೊಸ ಬಗೆಯ ಬದಲಾವಣೆಗಳು ಆಗುತ್ತಲೇ ಇವೆ. ಕಳೆದ 20 ವರ್ಷಗಳಲ್ಲಿ ಮೊಬೈಲ್‌ ಉದ್ಯಮದಲ್ಲಿ ಆಗಿರುವ ತ್ವರಿತ ಬದಲಾವಣೆ ಬೇರೆ ಕ್ಷೇತ್ರಗಳಲ್ಲಿ ಆಗಿಲ್ಲ. ಕೇವಲ ಕರೆ ಮಾಡಲು ಬಳಕೆ ಆಗುತ್ತಿದ್ದ ಮೊಬೈಲ್‌ ಗಳು ಈಗ ವೈದ್ಯಕೀಯ ನೆರವು, ಭದ್ರತೆ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಲು ನೆರವಾಗುತ್ತಿದೆ.

ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿಹೊಸ ಅನ್ವೇಷಣೆಗಳು ನಡೆಯುತ್ತಲೇ ಇದೆ. ಹೊಸ ಹೊಸ ಆಯ್ಕೆ, ಹೊಸ ತಂತ್ರಜ್ಙಾನಗಳು ಮೊಬೈಲ್‌ ಅನ್ನು ಸೇರ್ಪಡೆಗೊಳ್ಳುತ್ತಲೇ ಇವೆ. ಆದರೆ ಮೊಬೈಲ್‌ ನ ಬ್ಯಾಟರಿಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿರಲಿಲ್ಲ. ಅದೇ ಇಯಾನ್‌, ಲೀಥಿಯಮ್‌ ಬ್ಯಾಟರಿ ಬಳಸಲಾಗುತ್ತಿದೆ. ಆದರೆ ಈಗ ಹೊಸ ಬಗೆಯ ಮೊಬೈಲ್‌ ಮಾರುಕಟ್ಟೆಗೆ ಕಾಲಿಡಲು ಸಜ್ಜಾಗಿದ್ದು, ಈ ಮೊಬೈಲ್‌ ಅನ್ನು ಚಾರ್ಜ್‌ ಮಾಡುವ
ಅವಶ್ಯಕತೆಯೇ ಇಲ್ಲ!

ಈಗಿರುವ ಸ್ಮಾರ್ಟ್‌ಫೋನ್ ಗಳನ್ನು ದಿನಕ್ಕೆ ಒಮ್ಮೆ ಅಥವಾ ದಿನಕ್ಕೆ ಎರಡು ಬಾರಿ ಚಾರ್ಜ್‌ ಮಾಡಲೇ ಬೇಕಾಗಿದೆ. ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಇರುವ ಕಾರಣ ಕನಿಷ್ಟ ಒಂದು ಗಂಟೆಯಲ್ಲಿ ಮೊಬೈಲ್‌ ಚಾರ್ಜ್‌ ಆಗುತ್ತವೆ. ಆದರೆ ಇದೀಗ ಬರಲಿರುವ ಹೊಸ ಮಾದರಿಯ ಬ್ಯಾಟರಿಗಳಲ್ಲಿ ಶಕ್ತಿ ಖರ್ಚಾಗುವುದೇ ಇಲ್ಲ. ಈ ಮೊಬೈಲ್‌ ಗಳನ್ನು ಚಾರ್ಜ್‌ ಮಾಡುವ ಅವಶ್ಯಕತೆಯೇ ಇಲ್ಲ. ಈಗಿನ ಮೊಬೈಲ್‌ ಗಳಲ್ಲಿ
ಇಯಾನ್-ಲೀಥಿಯಮ್‌ ಬ್ಯಾಟರಿ ಬಳಕೆ ಆಗುತ್ತಿದೆ ಆದರೆ ಇದೀಗ ಬರಲಿರುವುದು ನ್ಯೂಕ್ಲಿಯರ್‌ ಬ್ಯಾಟರಿಗಳು. ಈ ಬ್ಯಾಟರಿಗಳಲ್ಲಿ ನ್ಯೂಕ್ಲಿಯರ್‌ ಶಕ್ತಿಯನ್ನು ಬಳಸಲಾಗಿದ್ದು, ಇದು ಖಾಲಿಯೇ ಆಗುವುದಿಲ್ಲ. ಹಾಗಾಗಿ ಮೊಬೈಲ್‌ ಅನ್ನು ಚಾರ್ಜ್‌ ಮಾಡುವ ಅಗತ್ಯವೇ ಬರುವುದಿಲ್ಲ.

ಈಗಿರುವ ಬ್ಯಾಟರಿಗಳ ಗಾತ್ರ ತುಸು ದೊಡ್ಡದು, ಬ್ಯಾಟರಿಯ ಶಕ್ತಿ ಹೆಚ್ಚಾದಂತೆ ಅದರ ಗಾತ್ರವೂ ಹೆಚ್ಚಾಗುತ್ತಲೇ ಇರುತ್ತದೆ. ಆದರೆ ಈಗ ಬರಲಿರುವ ನ್ಯೂಕ್ಲಿಯರ್‌ ಬ್ಯಾಟರಿಯ ಗಾತ್ರ ಅತ್ಯಂತ ಚಿಕ್ಕದು. ಕೇವಲ ಐದು ರೂಪಾಯಿ ನಾಣ್ಯದ ಗಾತ್ರದ ಬ್ಯಾಟರಿ ಒಂದು ಮೊಬೈಲ್‌ ಅನ್ನು ಬರೋಬ್ಬರಿ 50 ವರ್ಷಗಳ ವರೆಗೆ ಆನ್‌ ನಲ್ಲಿ ಇಡಬಲ್ಲದು. ಯುರೇನಿಯಮ್‌ ಅಥವಾ ನ್ಯೂಕ್ಲಿಯರ್‌ ಬ್ಯಾಟರಿಯನ್ನನು ಚೈನಾದ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ್ದು, ಮೊಬೈಲ್‌, ಡ್ರೋನ್‌ ಸೇರಿದಂತೆ ಇನ್ನೂ ಕೆಲವು ಬ್ಯಾಟರಿ ಚಾಲಿತ ಉತ್ಪನ್ನಗಳಲ್ಲಿ ಇದನ್ನು ಬಳಸಲು ತಯಾರಿ ನಡೆದಿದೆ. ಕೆಲವು ವರದಿಗಳ ಪ್ರಕಾರ ಈ ಬ್ಯಾಟರಿಯ ಪರೀಕ್ಷೆಗಳು ಮುಗಿದಿದ್ದು, ಇದೀಗ ಬ್ಯಾಟರಿಯನ್ನು ದೊಡ್ಡ ಸಂಖ್ಯೆಯಲ್ಲಿ ತಯಾರಿಸಲಾಗುತ್ತಿದೆಯಂತೆ.

BDA: ಮೈಸೂರು ರಾಜಮನೆತನಕ್ಕೆ ಶಾಕ್ ಕೊಟ್ಟ ಸರ್ಕಾರ, ಕೋರ್ಟ್ ಮೆಟ್ಟಿಲೇರಿದ ರಾಜ ಕುಟುಂಬ

ಸದ್ಯಕ್ಕೆ ಈ ತಂತ್ರಜ್ಙಾನ ಚೈನಾದ ಬಳಿ ಮಾತ್ರವೇ ಇದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಸಹ ಬರಬಹುದು. ಇನ್ನೊಂದೆರಡು ವರ್ಷಗಳಲ್ಲಿ ಈ ನ್ಯೂಕ್ಲಿಯರ್‌ ಬ್ಯಾಟರಿಗಳ ಬಳಕೆ ವ್ಯಾಪಕವಾಗಿ ಆಗಲಿದೆ ಎನ್ನುತ್ತಾರೆ ವಿಜ್ಙಾನಿಗಳು. ಒಂದೊಮ್ಮೆ ಈ ನ್ಯೂಕ್ಲಿಯರ್‌ ಬ್ಯಾಟರಿಗಳು ಬಳಕೆಗೆ ಬಂದರೆ ಸ್ಪಾರ್ಟ್‌ ಫೋನ್‌ ಕ್ಷೇತ್ರದಲ್ಲಿ ಭಾರಿ ದೊಡ್ಡ ಕ್ರಾಂತಿಯೇ ಆಗಲಿದೆ. ಮುಂದೆ ಇದೇ ರೀತಿಯ ಬ್ಯಾಟರಿಗಳನ್ನು ಕಾರುಗಳಲ್ಲಿಯೂ ಬಳಸುವ ಯೋಜನೆ ಇದೆ.

LEAVE A REPLY

Please enter your comment!
Please enter your name here