Pakistan: ಪಾಕಿಸ್ತಾನಕ್ಕೆ ತೆರೆಯಿತು ಅದೃಷ್ಟದ ಬಾಗಿಲು, ಸಮುದ್ರದಾಳದಲ್ಲಿ ಸಿಕ್ಕಿತು ಖಜಾನೆ

0
133
Pakistan

Pakistan

ವಿಶ್ವದ ಬಡ ರಾಷ್ಟ್ರಗಳ ಪಟ್ಟಿಯಲ್ಲಿ 52ನೇ ಸ್ಥಾನದಲ್ಲಿ ಪಾಕಿಸ್ತಾನ. ಐಎಂಎಫ್, ಚೀನಾ, ರಷ್ಯಾ ಹೀಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಲಗಳನ್ನು ಪಡೆದರೂ ಸಹ ದೇಶವನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನದವರ ತಲಾ ಆದಾಯ ಕುಸಿಯುತ್ತಲೇ ಸಾಗುತ್ತಿದೆ. ಆಹಾರ ಧಾನ್ಯದ ಕೊರತೆ ಆಗಾಗ್ಗೆ ಉಂಟಾಗುತ್ತಲೇ ಇರುತ್ತದೆ. ದೇಶವನ್ನು ನಡೆಸುವುದೇ ಅಲ್ಲಿನ ನಾಯಕರಿಗೆ ಕಷ್ಟವಾಗಿ ಕೂತಿದೆ. ಇಂಥಹಾ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಸಮುದ್ರದಾಳದಲ್ಲಿ ಖಜಾನೆಯೊಂದು ದೊರೆತಿದೆ. ಈ ಖಜಾನೆಯನ್ನು ಸರಿಯಾಗಿ ಉಪಯೋಗಿಸಿಕೊಂಡರೆ ದೇಶದ ಅರ್ಧ ಸಮಸ್ಯೆ ಪರಿಹಾರವಾಗಿಬಿಡುತ್ತದೆ. ಆದರೆ ಪಾಕಿಸ್ತಾನದ ನಾಯಕರಿಗೆ ಅಷ್ಟು ಬುದ್ಧಿಶಕ್ತಿ ಇರಬೇಕಲ್ಲ!

ಪಾಕಿಸ್ತಾನಕ್ಕೆ ಸೇರಿದ ಸಮುದ್ರ ಭಾಗದಲ್ಲಿ ಪೆಟ್ರೋಲಿಯಂ ಮತ್ತು ತೈಲ ನಿಕ್ಷೇಪವಿರುವುದು ಪತ್ತೆಯಾಗಿದೆ. ಪಾಕಿಸ್ತಾನವು ಮಿತ್ರ ರಾಷ್ಟ್ರದೊಂದಿಗೆ ಸೇರಿ ಮೂರು ವರ್ಷ ಮಾಡಿರುವ ಸರ್ವೆಯಿಂದ ಈ ವಿಷಯ ಪತ್ತೆಯಾಗಿದ್ದು, ಈಗ ದೊರೆತಿರುವ ಇಂಧನ ನಿಕ್ಷೇಪವು ವಿಶ್ವದ ನಾಲ್ಕನೇ ಅತಿ ದೊಡ್ಡ ಇಂಧನ ನಿಕ್ಷೇಪ ಆಗುವಷ್ಟೆ ಸಾಮರ್ಥ್ಯವುಳ್ಳ ನಿಕ್ಷೇಪವಾಗಿದೆಯಂತೆ. ಕೇವಲ ಪಳೆಯುಳಿಕೆ ಇಂಧನ ಮಾತ್ರವೇ ಅಲ್ಲದೆ ಇನ್ನೂ ಕೆಲವು ಬೆಲೆ ಬಾಳುವ ಖನಿಜಗಳು ಸಹ ಪಾಕಿಸ್ತಾನಕ್ಕೆ ಸೇರಿದ ಸಮುದ್ರ ಪ್ರಾಂತ್ಯದಲ್ಲಿ ಪತ್ತೆಯಾಗಿದೆ.

ಆದರೆ ಈಗ ದೊರೆತಿರುವ ಇಂಧನವನ್ನು ಹೊರಗೆ ತೆಗೆಯುವುದು ಸಹ ಬಲು ಸವಾಲಿನ ಕೆಲಸವಾಗಿದೆ. ಈಗ ದೊರೆತಿರುವ ಸ್ಥಳದಿಂದ ಇಂಧನವನ್ನು ಹೊರಗೆ ತೆಗೆಯುವುದು ಕೆಲವು ವರ್ಷಗಳ ಕಾರ್ಯವಾಗಲಿದೆ. ಇಂಧನ ಹೊರತೆಗೆಯಲು, ಅದನ್ನು ರಿಫೈನ್ ಮಾಡಲು ಅಗತ್ಯವಾಗಿರುವ ಯಾವ ಮೂಲಭೂತ ಸೌಕರ್ಯ ಈಗಿರುವ ಪಾಕಿಸ್ತಾನದಲ್ಲಿ ಇಲ್ಲ. ಹಾಗಾಗಿ ಎಲ್ಲವನ್ನೂ ಮೊದಲಿನಿಂದ ಮಾಡಿ, ಇಂಧನವನ್ನು ಹೊರತೆಗೆಯುವುದು ಬಹಳ ಖರ್ಚಿನ ಕೆಲಸ ಆಗುವ ಜೊತೆಗೆ ಬಹಳ ಶ್ರಮ ಹಾಗೂ ಸಮಯ ಬೇಡುವ ಕೆಲಸ ಆಗಿದೆ. ಹಾಗಾಗಿ ಪಾಕಿಸ್ತಾನವು ತನ್ನ ಗಡಿಯಲ್ಲಿ ದೊರೆತಿರುವ ಇಂಧನ ನಿಕ್ಷೇಪವನ್ನು ಪರದೇಶಕ್ಕೆ ಬಾಡಿಗೆಗೆ ಕೊಡುವ ಯೋಜನೆ ಹಾಕಿಕೊಂಡಿದೆ ಎನ್ನಲಾಗುತ್ತಿದೆ.

Richest Begger: ವಿಶ್ವದ ಶ್ರೀಮಂತ ಭಿಕ್ಷುಕ, ಈತನ ಒಟ್ಟು ಆಸ್ತಿಯೆಷ್ಟು?

ಈಗಾಗಲೇ ನಿಕ್ಷೇಪದ ಹರಾಜಿಗೆ ಪಾಕಿಸ್ತಾನ ಸಜ್ಜಾಗಿದೆ. ತನ್ನ ಮಿತ್ರ ರಾಷ್ಟ್ರಗಳಲ್ಲಿ ಯಾವುದಾದರೂ ಒಂದು ರಾಷ್ಟ್ರಕ್ಕೆ ಪಾಕಿಸ್ತಾನವು ಇಂಧನ ನಿಕ್ಷೇಪವನ್ನು ಬಾಡಿಗೆ ಅಥವಾ ಲೀಸ್​ಗೆ ನೀಡಲಿದ್ದು ಭರ್ಜರಿಯಾಗಿ ಹಣಕಾಸು ನೆರವು ಪಡೆಯಲಿದೆ. ಆದರೆ ಪಾಕಿಸ್ತಾನಕ್ಕೆ ಹಣಕಾಸನ್ನು ಪ್ರಗತಿಗೆ ಹೇಗೆ ಬಳಸಬೇಕು, ಹೇಗೆ ದೇಶದ ಅಭಿವೃದ್ಧಿ ಮಾಡಬೇಕು ಎಂಬ ಬಗ್ಗೆ ಸೂಕ್ತ ಮಾಹಿತಿ ಇಲ್ಲ ಎಂಬುದು ಪಾಕಿಸ್ತಾನದ ಇತಿಹಾಸ ಅರಿವಿರುವ ಯಾರಿಗೇ ಆಗಲಿ ಗೊತ್ತಿದೆ. ಆದರೆ ಈಗಂತೂ ಪಾಕಿಸ್ತಾನಕ್ಕೆ ದೊಡ್ಡ ನಿಕ್ಷೇಪವೇ ಸಿಕ್ಕಿದೆ. ಇದರಿಂದಾದರೂ ಅಲ್ಲಿನ ಜನರ ಜೀವನ ಸುಧಾರಿಸಲಿದೆಯೇ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here