Ola-Uber: ಓಲಾ, ಊಬರ್ ಕಾರುಗಳಲ್ಲಿ ಹಾಕಲ್ಲ ಏಸಿ, ಏಕಿಂತ ನಿರ್ಧಾರ?

0
41
Ola_Uber

Ola-Uber

ಕಾರುಗಳಲ್ಲಿ ಏಸಿ ಹಾಕುವುದು ಸಾಮಾನ್ಯ. ಅದೂ ಈ ಸುಡು ಬೇಸಗೆಯಲ್ಲಿ ಏಸಿ ಇಲ್ಲದೆ ಕಾರು ಪ್ರಯಾಣ ಮಾಡುವುದು ಯಮಯಾತನೆ. ಪರಿಸ್ಥಿತಿ ಹೀಗಿರುವಾಗ ಜನಪ್ರಿಯ ಕಾರು ಬಾಡಿಗೆ ಕಂಪೆನಿಗಳಾದ ಓಲಾ, ಊಬರ್ ಕಾರುಗಳಲ್ಲಿ ಏಸಿ ಹಾಕಲಾಗುವುದಿಲ್ಲ ಎಂಬ ಘೋಷಣೆ ಹೊರಬಿದ್ದಿದೆ. ಈ ಘೋಷಣೆ ಹೊರಡಿಸಿರುವುದು ಓಲಾ, ಊಬರ್ ಕಂಪೆನಿಗಳಲ್ಲ ಬದಲಿಗೆ ಕಾರು ಡ್ರೈವರ್ ಗಳು.

ಹೌದು, ಹೈದರಾಬಾದ್ ನ ಓಲಾ, ಊಬರ್ ಕಾರು ಚಾಲಕರು ಓಲಾ, ಊಬರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ತಮ್ಮ ಬೇಡಿಕೆ ಈಡೇರುವವರೆಗೆ ಓಲಾ, ಊಬರ್ ಕಾರುಗಳಲ್ಲಿ ಏಸಿ ಹಾಕುವುದಿಲ್ಲ ಎಂದು ಘೋಷಿಸಿದ್ದಾರೆ. ಸೋಮವಾರ (ಮಾರ್ಚ್ 24) ದಿಂದ ತಮ್ಮ ಬೇಡಿಕೆ ಈಡೇರುವ ವರೆಗೆ ಈ ಘೋಷಣೆ ಇರಲಿದೆ ಎಂದಿದ್ದಾರೆ ಕಾರು ಚಾಲಕರು.

ಓಲಾ, ಊಬರ್, ರ್ಯಾಪಿಡೋ ಗಳು ಸೂಕ್ತ ರೀತಿಯಲ್ಲಿ ಹಣ ವಿತರಣೆ ಮಾಡುತ್ತಿಲ್ಲ ಎಂದು ಕ್ಯಾಬ್ ಡ್ರೈವರ್ ಗಳ ಆರೋಪವಾಗಿದ್ದು ಹಲವು ರಾಜ್ಯಗಳಲ್ಲಿ ಒಪಲಾ, ಊಬರ್ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೆ ಓಲಾ, ಊಬರ್ ಕಾರು ಚಾಲಕರು ಏರ್ ಪೋರ್ಟ್ ರೈಡ್ ಗಳನ್ನು ಸಾಮೂಹಿಕವಾಗಿ ರದ್ದು ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದರು. ಇದೀಗ ‘ನೋ ಏಸಿ’ ಪ್ರತಿಭಟನೆ ಮಾಡುತ್ತಿದ್ದಾರೆ.

ಓಲಾ, ಊಬರ್, ರ್ಯಾಪಿಡೋಗಳು ಅತ್ಯಂತ ಕಡಿಮೆ ಹಣವನ್ನು ಚಾಲಕರಿಗೆ ನೀಡುತ್ತಿದೆ ಎಂದು ಓಲಾ,ಊಬರ್, ರ್ಯಾಪಿಡೋ ಕಾರು ಚಾಲಕರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ಪ್ರೀ ಪೇಡ್ ಟ್ಯಾಕ್ಸಿ ರೀತಿಯಲ್ಲಿ ತಮಗೂ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಚಾಲಕರ ಸಂಘದ ಅಧ್ಯಕ್ಷರು ಹೇಳುವಂತೆ, ಈ ಬಾಡಿಗೆ ಕಂಪೆನಿಗಳು ತಮಗೆ ಅನುಕೂಲ ಆಗುವಂತೆ ಬೆಲೆಗಳನ್ನು ನಿಗದಿಪಡಿಸಿವೆ. ಇದರಿಂದಾಗಿ ಚಾಲಕರಿಗೆ ಭಾರಿ ನಷ್ಟವಾಗುತ್ತಿದೆಯಂತೆ.

Bank Strike: ಎರಡು ದಿನ ಬ್ಯಾಂಕ್ ಮುಷ್ಕರ, ಬ್ಯಾಂಕ್ ನೌಕರರ ಒತ್ತಾಯಗಳೇನು?

ಏಸಿ ಹಾಕಿಕೊಂಡು ಕಾರು ಓಡಿಸಿದರೆ ಕಿಲೋ ಮೀಟರ್ ಗೆ 15-16 ಖರ್ಚು ಬರುತ್ತದೆ. ಆದರೆ ಚಾಲಕನಿಗೆ ಕಂಪೆನಿಗಳು ಕೊಡುವುದು ಕೇವಲ 10-12 ರೂಪಾಯಿಗಳು ಮಾತ್ರ ಎಂದಿದ್ದಾರೆ. ಚಾಲಕರ ಸಂಘದ ಅಧ್ಯಕ್ಷ ಷೇಕ್ ಸಲಾಹುದ್ದೀನ್. 2024 ರಲ್ಲಿ ಒಮ್ಮೆ ಚಾಲಕರು ‘ನೋ ಏಸಿ’ ಪ್ರತಿಭಟನೆ ಮಾಡಿದ್ದರು. ಪ್ರೀ ಪೇಡ್ ಟ್ಯಾಕ್ಸಿಗಳು, ಓಲಾ, ಊಬರ್ ಗೆ ಹೋಲಿಸಿದರೆ ಪ್ರತಿ ರೈಡ್ ಗೆ 200-300 ರೂಪಾಯಿ ಹಚ್ಚಯ ಹಣ ದುಡಿಯುತ್ತವೆಯಂತೆ. ನಮಗೂ ಪ್ರೀ ಪೇಡ್ ಟ್ಯಾಕ್ಸಿ ದರಗಳನ್ನು ನೀಡಬೇಕು ಎಂಬುದು ಟ್ಯಾಕ್ಸಿ ಚಾಲಕರ ಒತ್ತಾಯ.

LEAVE A REPLY

Please enter your comment!
Please enter your name here