Online Fraud
ಭಾರತ ಡಿಜಿಟಲೈಸ್ ಏನೋ ಆಗುತ್ತಿದೆ. ಅದರ ಜೊತೆ-ಜೊತೆಗೆ ಆನ್ ಲೈನ್ ವಂಚನೆ ಪ್ರಕರಣಗಳು ಸಹ ಹೆಚ್ಚುತ್ತಲೇ ಇವೆ. ಕಳೆದ ಕೆಲವೇ ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಭಾರತದ ಅನೇಕರು ಆನ್ ಲೈನ್ ವಂಚನೆಯಲ್ಲಿ ಕಳೆದುಕೊಂಡಿದ್ದಾರೆ. ಶಿಕ್ಷಿತರು-ಅಶಿಕ್ಷಿತರು ಈ ವಂಚಕರ ಜಾಲಕ್ಕೆ ಬೀಳುತ್ತಿದ್ದಾರೆ. ಆದರೆ ವಂಚಕರ ಬಂಧನ ಆಗಿರುವುದಿ ಬಹಳ ಕಡಿಮೆ ಪ್ರಕರಣಗಳಲ್ಲಿ. ಇದೀಗ ನೋಯ್ಡಾ ಪೊಲೀಸರು ಮೋಸ್ಟ್ ವಾಂಟೆಡ್ ಗಳಾಗಿದ್ದ ಚಾಲಾಕಿ ಆನ್ ಲೈನ್ ವಂಚಕರನ್ನು ಬಂಧಿಸಿದ್ದಾರೆ.
ಕಳೆದ ಆರು ವರ್ಷಗಳಿಂದ ಸಾವಿರಾರು ಜನರಿಗೆ ಆನ್ ಲೈನ್ ವಂಚನೆ ಮಾಡಿ ಕೋಟ್ಯಂತರ ರೂಪಾಯಿ ಹಣ ಗಳಿಸಿದ್ದ ಕೆಲವರನ್ನು ನೊಯ್ಡಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 104 ನಕಲಿ ಪಾಸ್ ಪೋರ್ಟ್, ಆಧಾರ್ ಕಾರ್ಡ್, ಪಾಸ್ ಪೋರ್ಟ್, ನಕಲಿ ನೌಕರಿ ಆದೇಶಗಳು, ಕಂಪ್ಯೂಟರ್, ಮೊಬೈಲ್ ಇನ್ನಿತರೆ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಬಂದಿತರನ್ನು ಜಿತೇಂದ್ರ ಮತ್ತು ರೋಹಿತ್ ಒಬೆರಾಯ್ ಎಂದು ಗುರುತಿಸಲಾಗಿದೆ. ಈ ವಂಚಕ ಜೋಡಿ ಯುವಕರನ್ನು ಗುರಿ ಮಾಡಿಕೊಂಡು ಅವರುಗಳಿಗೆ ವಿದೇಶದಲ್ಲಿ ನೌಕರಿ ಕೊಡಿಸುವ ಆಮೀಶ ತೋರಿಸಿ ಅವರುಗಳಿಂದ ಹಣ ಪಡೆದು ಮೋಸ ಮಾಡುತ್ತಿತ್ತು. ಇದಕ್ಕಾಗಿ ನಕಲಿ ಕನ್ ಸಲ್ಟೆಂಟಿ ಕಚೇರಿ, ನಕಲಿ ಸಾಮಾಜಿಕ ಜಾಲತಾಣ ಪೇಜ್ ಗಳು, ನಕಲಿ ಪಾಸ್ ಪೋರ್ಟ್, ನಕಲಿ ನೌಕರಿ ಆದೇಶಗಳು, ಜನಪ್ರಿಯ ಸಂಸ್ಥೆಗಳ ನಕಲಿ ಲೆಟರ್ ಹೆಡ್ ಗಳನ್ನು ಬಳಸುತ್ತಿದ್ದರು.
Bengaluru Police: ರಸ್ತೆಯಲ್ಲಿ ಜಗಳವಾದಾಗ ಏನು ಮಾಡಬೇಕು? ಬೆಂಗಳೂರು ಪೊಲೀಸರು ನೀಡಿದ್ದಾರೆ ಸೂಚನೆ
ಪಂಜಾಬ್, ದೆಹಲಿ, ಹರಿಯಾಣ ಸೇರಿಸಂತೆ ಉತ್ತರದ ಕೆಲವು ರಾಜ್ಯಗಳಯುವಕರ ಜೊತೆಗೆ ನೇಪಾಳದ ಯುವಕರನ್ನು ಟಾರ್ಗೆಟ್ ಮಾಡಿಕೊಂಡಿದ್ದ ಇವರುಗಳು ಯುವಕರನ್ನು ಆನ್ ಲೈನ್ ಮೂಲಕ ಸಂಪರ್ಕಿಸಿ ಅವರಿಂದ ರೆಸ್ಯೂಮೆ ಪಡೆದು, ಕೆನಡ, ಯುಎಸ್ ಎ, ಪೋಲಂಡ್, ಯೂರೋಪ್ ನ ಕೆಲವು ದೇಶಗಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಪ್ರತಿಯೊಬ್ಬರಿಂದ 80 ಸಾವಿರದಿಂದ 5 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡುತ್ತಿತ್ತು. ಹೀಗೆ ವಚನೆ ಮಾಡಿಯೇ ಕೋಟ್ಯಂತರ ಹಣವನ್ನು ಈ ಆರೋಪಿಗಳು ಸಂಪಾದಿಸಿದ್ದರು.
ಜಿತೇಂದ್ರ ಈ ವಂಚನೆ ಯೋಜನೆಯ ಮುಖ್ಯಸ್ಥನಾಗಿದ್ದು ಈತ ಹಲವು ಯುವಕರನ್ನು ಇದಕ್ಕಾಗಿಯೇ ಕೆಲಸಕ್ಕೆ ನೇಮಿಸಿಕೊಂಡಿದ್ದ. ಈ ವಂಚಕ ಜಾಲದ ಬಗ್ಗೆ ಹಲವರು ದೂರು ನೀಡಿದ್ದರು. ಏಪ್ರಿಲ್ ತಿಂಗಳಲ್ಲಿ ಇದೇ ಗ್ಯಾಂಗ್ ಗೆ ಸೇರಿದ್ದ ಮಹಿಳೆಯೊಬ್ಬಾಕೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಆಕೆ ನೀಡಿದ ಮಾಹಿತಿ ಆಧರಿಸಿ ಈಗ ಪ್ರಮುಖ ಆರೋಪಿಗಳಾದ ಜಿತೇಂದ್ರ ಹಾಗೂ ರೋಹಿತ್ ಒಬೆರಾಯ್ ಅನ್ನು ಬಂಧಿಸಲಾಗಿದೆ.