Site icon Samastha News

Paetongtarn Shinawatra: ಈ ಸುಂದರ ಯುವತಿ ಕೋಟ್ಯಂತರ ಜನಸಂಖ್ಯೆಯ ದೇಶವೊಂದರ ಪ್ರಧಾನಿ

Paetongtarn Shinawatra

Paetongtarn Shinawatra

ನೋಡಲು ಚೆಂದ ಕಾಣುವ ಬಟ್ಟೆಗಳನ್ನು ಧರಿಸಿ, ಫೋಟೊಕ್ಕೆ ಫೋಸು ನೀಡುತ್ತಿರುವ ಈ ಚೆಲುವೆ ಯಾವುದೋ ಸಿನಿಮಾ ನಟಿಯೋ, ಇನ್​ಸ್ಟಾಗ್ರಾಂ ಮಾಡೆಲ್ ಅಥವಾ ಇನ್​ಫ್ಲ್ಯುಯೆನ್ಸರ್ ಅಲ್ಲ ಬದಲಿಗೆ ಈಕೆ ಕೋಟ್ಯಂತರ ಜನಸಂಖ್ಯೆ ಇರುವ ಏಷ್ಯಾದ ಪ್ರಮುಖ ದೇಶವೊಂದರ ಪ್ರಧಾನ ಮಂತ್ರಿ. ಅದೂ ಆ ದೇಶದ ಅತ್ಯಂತ ಕಿರಿಯ ಮತ್ತು ಜನಪ್ರಿಯ ಪ್ರಧಾನ ಮಂತ್ರಿ.

ಬಹುತೇಕ ಭಾರತೀಯರ ಮೆಚ್ಚಿನ ಪ್ರವಾಸಿ ದೇಶವಾಗಿರುವ ಥಾಯ್ಲೆಂಡ್​ನ ಅತ್ಯಂತ ಕಿರಿಯ ಪ್ರಧಾನಿ ಈಕೆ. ಈ ಚೆಲುವೆಯ ಹೆಸರು ಪೆಟೊಂಗ್​ಟಾರ್ನ್ ಶಿನಾವಾಟ್ರ. ಈ ಹಿಂದೆ ಪದಚ್ಯುತಗೊಂಡ ಮಾಜಿ ಪ್ರಧಾನ ಮಂತ್ರಿ ತಾಕ್ಸಿನ್ ಶಿನಾವಾಟ್ರ ಅವರ ಪುತ್ರಿ ಈಕೆ. ಆಗಸ್ಟ್ 18 ರಂದು ಪೆಟೊಂಗ್​ಟಾರ್ನ್ ಶಿನಾವಾಟ್ರ ಥಾಯ್ಲೆಂಡ್​ನ ನೂತನ ಪ್ರಧಾನಿಯಾಗಿ ದೇಶದ ಸಂಸತ್ತು ಆಯ್ಕೆ ಮಾಡಿದೆ. ಈ ಹಿಂದಿನ ಪ್ರಧಾನಿ ಅಂದರೆ ಪೆಟೊಂಗ್​ಟಾರ್ನ್ ಶಿನಾವಾಟ್ರ ತಂದೆಯ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದು ಉಚ್ಛ ನ್ಯಾಯಾಲಯವು ಅವರನ್ನು ದೋಷಿ ಎಂದು ಪರಿಗಣಿಸಿದ ಕಾರಣ ಅವರು ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಥಾಯ್ಲೆಂಡ್​ ಸಂಸತ್ತಿನ ಮುಕ್ಕಾಲು ಮತಗಳನ್ನು ಪಡೆದುಕೊಂಡು ಪೆಟೊಂಗ್​ಟಾರ್ನ್ ಶಿನಾವಾಟ್ರ ಪ್ರಧಾನಿ ಆಗಿದ್ದಾರೆ. ಥಾಯ್ಲೆಂಡ್​ನ ಅತ್ಯಂತ ಕಿರಿಯ ಪ್ರಧಾನಿ ಎನಿಸಿಕೊಂಡಿದ್ದಾರೆ. ಮಾತ್ರವಲ್ಲದೆ ದೇಶದ ಎರಡನೇ ಮಹಿಳಾ ಪ್ರಧಾನಿ ಹಾಗೂ ಶಿನಾವಾಟ್ರ ಕುಟುಂಬದ ಮೂರನೇ ಪ್ರಧಾನಿ ಇವರಾಗಿದ್ದಾರೆ.

ಪೆಟೊಂಗ್​ಟಾರ್ನ್ ಶಿನಾವಾಟ್ರ, ಚುನಾವಣೆ ಗೆದ್ದು ಸಂಸದೆಯಾಗಿದ್ದರಾದರೂ ಪ್ರಧಾನಿ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ. 37 ವಯಸ್ಸಿನ ಪೆಟೊಂಗ್​ಟಾರ್ನ್ ಶಿನಾವಾಟ್ರ, 30ರ ಆಸುಪಾಸಿನ ಮಹಿಳೆಯರಂತೆ ತಮ್ಮ ಪಾಡಿಗೆ ತಾವಿದ್ದವರು. ಇನ್​ಸ್ಟಾಗ್ರಾಂನಲ್ಲಿ ಸುಂದರ ಫೋಟೊಗಳನ್ನು ಅಪ್​ಲೋಡ್ ಮಾಡುತ್ತಾ, ಪ್ರವಾಸಗಳಿಗೆ ಹೋಗುತ್ತಾ ತಮ್ಮಿಷ್ಟದವರ ಜೊತೆಗೆ, ಕುಟುಂಬದವರ ಜೊತೆಗೆ ರೀಲ್ಸ್ ಮಾಡುತ್ತಾ ಆರಾಮವಾಗಿದ್ದರು. ಅಂದಹಾಗೆ ಅವರ ಇನ್​ಸ್ಟಾಗ್ರಾಂ ಐಡಿ ಸಹ ಅವರ ಅಧಿಕೃತ ಹೆಸರಲ್ಲಿ ಅಲ್ಲ ಬದಲಿಗೆ ಅವರ ಅಡ್ಡ ಹೆಸರಿನ ಮೇಲಿದೆ.

Bharat Bandh: ನಾಳೆ ಭಾರತ ಬಂದ್: ಕರೆ ನೀಡಿದ್ದಯ ಯಾರು? ಏನಿರುತ್ತೆ? ಏನಿರಲ್ಲ?

ಪೆಟೊಂಗ್​ಟಾರ್ನ್ ಶಿನಾವಾಟ್ರ, ಪ್ರಧಾನಿ ಆಗಿ ಆಯ್ಕೆ ಆದಾಗ ಭಾರತದ ಪ್ರಧಾನಿ ನರೇಂದ್ರ ಮೋದಿ ಸಹ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಲ್ಲದೆ, ಒಟ್ಟಿಗೆ ಕೆಲಸ ಮಾಡೋಣವೆಂದು ಸಹ ಹೇಳಿದ್ದಾರೆ. ನರೇಂದ್ರ ಮೋದಿ ಅವರ ಸಂದೇಶಕ್ಕೆ ಪೆಟೊಂಗ್​ಟಾರ್ನ್ ಶಿನಾವಾಟ್ರ ಪ್ರತಿಕ್ರಿಯೆ ನೀಡಿದ್ದಾರೆ.

Exit mobile version