Pakistan
ನೆರೆಯ ಪಾಕಿಸ್ತಾನ ಆರ್ಥಿಕವಾಗಿ ಕುಸಿದು ಹೋಗಿ ವರ್ಷಗಳೇ ಆಗಿದೆ. ಪಾಕಿಸ್ತಾನದ ಕೆಲ ಭಾಗಗಳಲ್ಲಿ ಜನ ಒಂದು ಹೊತ್ತು ಊಟಕ್ಕೂ ಪರದಾಡುವ ಸ್ಥಿತಿ ಇದೆ. ಪಾಕಿಸ್ತಾನ ಸರ್ಕಾರ ವಿಶ್ವ ಬ್ಯಾಂಕ್, ಚೀನಾ, ಅಮೆರಿಕ ಹೀಗೆ ಸಿಕ್ಕ ಸಿಕ್ಕ ದೇಶ, ಬ್ಯಾಂಕುಗಳಲ್ಲೆಲ್ಲ ಸಾಲ ಮಾಡಿಬಿಟ್ಟಿದೆ. ಆರ್ಥಿಕ ದರಿದ್ರ ರಾಷ್ಟ್ರಗಳಲ್ಲಿ ಒಂದು ಎಂಬ ಕುಖ್ಯಾತಿ ಪಾಕಿಸ್ತಾನಕ್ಕೆ ವರ್ಷಗಳ ಹಿಂದೆಯೇ ಅಂಟಿದೆ. ಆದರೆ ಇದೀಗ ಈ ದೇಶಕ್ಕೆ ಅಚಾನಕ್ಕಾಗಿ ಅದೃಷ್ಟ ಒಲಿದು ಬಂದಿದೆ. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಪಾಕಿಸ್ತಾನದ ಸ್ಥಿತಿ ಸಾಕಷ್ಟು ಸುಧಾರಿಸಲಿದೆ.
ಕೈಲಾಸ ಪರತವತದಲ್ಲಿ ಹುಟ್ಟಿ ಪಾಕಿಸ್ತಾನದಲ್ಲಿ ಹರಿಯುವ ಸಿಂಧೂ ನದಿ, ಪಾಕಿಸ್ತಾನದ ಪಾಲಿಗೆ ಅದೃಷ್ಟ ಹೊತ್ತು ತಂದಿದೆ. ವಿಶ್ವದ ಪುರಾತನ ನಾಗರೀಕತೆಗಳಲ್ಲಿ ಒಂದಾದ ಸಿಂಧೂ ನಾಗರೀಕತೆಗೆ ಕಾರಣವಾದ ಸಿಂಧೂ ನದಿ ತನ್ನ ಬಹುಪಾಲು ಹಾದಿಯನ್ನು ಪಾಕಿಸ್ತಾನದಲ್ಲೇ ಹರಿಯುತ್ತದೆ. ಈ ಪುರಾತನ ನದಿ ಈಗ ಚಿನ್ನವನ್ನು ಹೊತ್ತು ತಂದಿದೆ. ಅದೂ ಎಣಿಸಲು ಅಸಾಧ್ಯವಾದಷ್ಟು ಮೌಲ್ಯದ ಚಿನ್ನ!
ಹಿಮಾಲಯದಲ್ಲಿ ಹುಟ್ಟುವ ಸಿಂಧೂ ನದಿ ಹಿಮಾಲಯದಿಂದ ಚಿನ್ನವನ್ನು ತನ್ನೊಟ್ಟಿಗೆ ತರುತ್ತಿದೆ. ಪಾಕಿಸ್ತಾನದ ಮಾಧ್ಯಮಗಳ ವರದಿಯಂತೆ ಪ್ರತಿದಿನವೂ ಸಿಂಧೂ ನದಿಯಲ್ಲಿ ಭಾರಿ ಪ್ರಮಾಣದ ಚಿನ್ನ ಪತ್ತೆಯಾಗುತ್ತಿದೆ. ಸ್ಥಳೀಯರು ಈ ಚಿನ್ನವನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದಾರೆ. ಇದೀಗ ಸರ್ಕಾರ ಪಾಕಿಸ್ತಾನದ ಅಟ್ಟಾಕ್ ಜಿಲ್ಲೆಯಲ್ಲಿ ಸಿಂಧೂ ನದಿಯಿಂದ ಚಿನ್ನವನ್ನು ಮಗ್ರಹಿಸುವ ಕಾರ್ಯ ಮಾಡುತ್ತಿದೆ.
ಹಿಮಾಲಯದಲ್ಲಿ ಅಡಗಿದ್ದ ಮೆಟ್ರಿಕ್ ಗಟ್ಟಲೆ ಚಿನ್ನ ಈಗ ಸಿಂಧೂ ನದಿಯ ಪಾತ್ರದ ಒಳಗೆ ಬಂದಿದ್ದು, ಹಿಮಾಲಯದಲ್ಲಿ ಬಲು ವೇಗದಲ್ಲಿ ಹರಿಯುವ ಈ ನದಿ ತನ್ನೊಟ್ಟಿಗೆ ಚಿನ್ನವನ್ನೂ ಸಹ ಹೊತ್ತು ತಂದಿದ್ದು, ನದಿಯ ವೇಗೆ ಕಡಿಮೆಯಾಗುವ ಹಾಗೂ ನದಿ ಪಾತ್ರವೂ ವಿಷಾಲವಾಗುವ ಅಟಾಕ್ ಜಿಲ್ಲೆಯ ಪ್ರದೇಶದಲ್ಲಿ ಅದನ್ನು ಬಿಡುತ್ತಿದೆ. ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ 32 ಮೆಟ್ರಿಕ್ ಟನ್ ಚಿನ್ನ ಈಗಾಗಲೇ ಅಟಾಕ್ ಜಿಲ್ಲೆಯಲ್ಲಿ ಸಂಗ್ರಹಗೊಂಡಿದೆ. ಇಷ್ಟು ಭಾರಿ ಪ್ರಮಾಣದ ಚಿನ್ನದ ಮೌಲ್ಯ ಕೆಲವು ಲಕ್ಷ ಕೋಟಿಗಳಿಗೂ ಹೆಚ್ಚು.
Work: ಹೆಂಡತಿ ಮುಖ ಯಾಕೆ ನೋಡ್ತಿರಿ, ಭಾನುವಾರವೂ ಬಂದು ಕೆಲಸ ಮಾಡಿ: ಕಂಪೆನಿ ಮಾಲೀಕನ ಹೇಳಿಕೆಗೆ ವಿರೋಧ
ಸಿಂಧೂ ನದಿಯಿಂದ ಚಿನ್ನವನ್ನು ತೆಗೆಯುವುದಕ್ಕೆ ಸ್ಥಳೀಯ ಸರ್ಕಾರ ಸದ್ಯಕ್ಕೆ ನಿಷೇಧ ಹೇರಿದೆ. ಸರ್ಕಾರವೇ ಸಿಂಧೂ ನದಿಯಿಂದ ಚಿನ್ನವನ್ನು ಹೊರ ತೆಗೆಯುವ ಪ್ರಯತ್ನ ಮಾಡುತ್ತಿದೆ. ಆದರೆ ಅತ್ಯಂತ ವೇಗವಾಗಿ ಸಿಂಧೂ ನದಿ ಹರಿಯುವ ಕಾರಣ ಇದು ಸಹ ಅಷ್ಟು ಸುಲಭದ ಕಾರ್ಯ ಅಲ್ಲ.