Site icon Samastha News

Yoga Teacher: ಯೋಗ ಶಿಕ್ಷಕಿಯ ಅರೆಬೆತ್ತಲೆ ಮಾಡಿ ಹೂತರು, ಆದರೂ ಎದ್ದು ಬಂದ ಯುವತಿ

Yoga Teacher

Yoga Teacher

ಕೆಲ ಕಿಡಿಗೇಡಿಗಳು ಯೋಗ ಶಿಕ್ಷಕಿ ಒಬ್ಬಾಕೆ ಮೇಲೆ ಅತ್ಯಾಚಾರ ಯತ್ನ ಮಾಡಿದ್ದಲ್ಲದೆ ಗುಂಡಿ ತೋಡಿ ಆಕೆಯನ್ನು ಹೂತು ಹಾಕಿದರು ಆದರೆ ಕೆಲ ಸಮಯದ ಬಳಿಕ ಆ ಯುವತಿ ಮತ್ತೆ ಎದ್ದು ಬಂದಿದ್ದಾಳೆ! ಈ ವಿಚಿತ್ರ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ. ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಪೂರ್ವ ತಾಲ್ಲೂಕಿನ ಕೆಂಪೇಗೌಡ ಮುಖ್ಯರಸ್ತೆಯ ಡಿ.ಎಸ್.ಮಾಕ್ಸ್ ಸನ್‌ವರ್ತ್ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿರುವ ಯೋಗ ಟೀಚರ್, ಅರ್ಚನಾ ಎಂಬಾಕೆ ಈಗ ಸಾವು ಗೆದ್ದು ಬಂದಿರುವ ಯುವತಿ. ಆಕೆಯ ಕೊಲೆಗೆ ಯತ್ನಿಸಿದವರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

ಮದುವೆಯಾಗಿ ಗಂಡನಿಂದ ದೂರವಿದ್ದ ಅರ್ಚನಾ ಯೋಗ ಶಿಕ್ಷಕಿ ಆಗಿದ್ದರು. ನೋಡಲು ಬಲು ಸುಂದರವಾಗಿದ್ದರು. ಆಕೆಯ ಬಳಿ ಯೋಗ ಕಲಿಯುವುದಕ್ಕೆ ಬರುತ್ತಿದ್ದ ವ್ಯಕ್ತಿಯೊಬ್ಬ. ಅರ್ಚನಾ ಜೊತೆಗೆ ಸ್ನೇಹ ಬೆಳೆಸಿ, ಆಕೆಗೆ ಬಂದೂಕು ಚಲಾಯಿಸುವುದು ಹೇಗೆಂದು ಟ್ರೈನಿಂಗ್ ಕೊಡುವುದಾಗಿ ನಂಬಿಸಿ ಚಿಕ್ಕಬಳ್ಳಾಪುರದ ಶಿಡ್ಲಘಘಟ್ಟ ಬಳಿಯ ದಿಬ್ಬೂರಳ್ಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ನಿರ್ಜನ ಪ್ರದೇಶದಲ್ಲಿ ಸುಂದರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆದರೆ ಅರ್ಚನಾ ಆತನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸಿಲ್ಲ. ಇದರಿಂದ ಸಿಟ್ಟಾದ ಆ ವ್ಯಕ್ತಿ ತನ್ನ ಕೆಲ ಗೆಳೆಯರನ್ನು ಅಲ್ಲಿಗೆ ಕರೆಸಿ ಅರ್ಚನಾ ಅನ್ನು ಅರೆಬೆತ್ತಲೆಗೊಳಿಸಿ, ಲೈಂಗಿಕ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ. ಇನ್ನು ಆಕೆ ಬದುಕಿದರೆ ತಮಗೆ ಸಂಕಷ್ಟವೆಂದು ಆಕೆಯ ಕತ್ತು ಹಿಸುಕಿ ಕೊಲೆಯತ್ನ ಮಾಡಿದ್ದಾರೆ, ಕೊನೆಗೆ ಆಕೆ ಸತ್ತುಹೋಗಿದ್ದಾಳೆಂದು ಗುಂಡಿತೋಡಿ ಮೇಲೆ ಮರದಕೊಂಬೆ ಹಾಕಿ ಹೊರಟು ಹೋಗಿದ್ದಾರೆ. ಅವರೆಲ್ಲ ಹೊರಟು ಹೋದ ಮೇಲೆ ಅರ್ಚನಾ ಗುಂಡಿಯಿಂದ ಎದ್ದು ಬಂದಿದ್ದಾಳೆ.

ಅರ್ಚನಾ ಅನ್ನು ಕೊಲ್ಲುವ ಉದ್ದೇಶದಿಂದ ಮೊಬೈಲ್ ಚಾರ್ಜರ್ ವೈರ್​ನಿಂದ ಕತ್ತು ಹಿಸುಕಿದಾಗ ಆಕೆ ಸತ್ತಂತೆ ನಾಟಕ ಆಡಿದ್ದಾಳೆ. ಆ ದುರುಳರು, ಕೂಡಲೇ ಹಳ್ಳ ತೆಗೆದು ಅದರಲ್ಲಿ ಅರ್ಚನಾ ಅನ್ನು ಹಾಕಿ ಮೇಲೆ ಕೆಲವು ಕಡ್ಡಿಗಳನ್ನು ಹಾಕಿ ಹೊರಟು ಹೋಗಿದ್ದಾರೆ. ಅವರು ಹೊರಡುವುದನ್ನೇ ಕಾಯುತ್ತಿದ್ದ ಅರ್ಚನಾ ಅಲ್ಲಿಂದ ಎದ್ದು ಬಂದಿದ್ದಾಳೆ. ಮೈಮೇಲೆ ಎರಡು ತುಂಡು ಬಟ್ಟೆ ಮಾತ್ರವೇ ಇದ್ದರೂ ರಾತ್ರಿ ಸಮಯದಲ್ಲಿ ನಡೆದುಕೊಂಡು ಹೋಗಿ, ಶಿಡ್ಲಘಟ್ಟ ತಾಲ್ಲೂಕಿನ ಧನಮಿಟ್ಟೇನಹಳ್ಳಿ ಗ್ರಾಮದ ಬಳಿ ಆಗಮಿಸಿದ್ದಾಳೆ. ಗ್ರಾಮದ ವ್ಯಕ್ತಿ ವೆಂಕಟೇಶ್ ಎಂಬಾತ ಅರ್ಚನಾಳ ಸ್ಥಿತಿ ಕಂಡು ಆಕೆಗೆ ಸಹಾಯ ಮಾಡಿದ್ದಾನೆ. ಆಕೆಗೆ ಬಟ್ಟೆ ಕೊಟ್ಟು ಆಕೆಯನ್ನು ಪೊಲೀಸ್ ಠಾಣೆಗೆ ತಲುಪಿಸಿದ್ದಾನೆ. ಅರ್ಚನಾ ಅಲ್ಲಿ ದೂರು ನೀಡಿದ್ದು, ಅರ್ಚನಾ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲ್ಲಲು ಯತ್ನಿಸಿದ ಸತೀಶ್ ರೆಡ್ಡಿ ಹಾಗೂ ಅವನ ಕೆಲ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

KSRTC: ಮೆಜೆಸ್ಟಿಕ್ ನಲ್ಲಿ ಗೌರಿಬಿದನೂರು ಜನರ ಪರದಾಟ, ಅಧಿಕಾರಿಗಳ ಅರಚಾಟ

ಸಾವು ಗೆದ್ದ ಬಂದ ಅರ್ಚನಾ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಯಲಿಯೂರು ಗ್ರಾಮದವರಾಗಿದ್ದು, ಮದುವೆಯಾಗಿ ಗಂಡನಿಂದ ದೂರ ಉಳಿದಿದ್ದಾರೆ. ಸುಂದರಿಯಾದ ಅರ್ಚನಾ, ಒಂದು ಮಗುವಿನ ತಾಯಿ ಆಗಿದ್ದು, ಜೀವನ ಸಾಗಿಸಲು ಯೋಗ ಶಿಕ್ಷಕಿ ಆಗಿದ್ದಾರೆ. ಬಂಧಿತ ಸತೀಶ್ ರೆಡ್ಡಿ, ಅರ್ಚನಾ ಬಳಿ ಕೆಲ ತಿಂಗಳಿನಿಂದ ಯೋಗ ಕಲಿಯುತ್ತಿದ್ದನಂತೆ. ಅರ್ಚನಾ ಮೇಲೆ ಮನಸ್ಸಾಗಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಆದರೆ ಈಗ ಸತೀಶ್ ರೆಡ್ಡಿಯ ಬಂಧನ ಆಗಿದೆ.

Exit mobile version