Plastic Bottle: ಇನ್ನು ಮುಂದೆ ಪೆಟ್ ವಾಟರ್ ಬಾಟಲ್ ಬಳಕೆ ಇಲ್ಲ: ಕೇಂದ್ರ ಸಚಿವ

0
98
Plastic Bottles

Plastic Bottle

ಮದುವೆ ಮನೆಗಳಲ್ಲಿ, ಇತರೆ ಕಾರ್ಯಕ್ರಮಗಳಲ್ಲಿ 300 ಎಂಎಲ್ ನ ಪೆಟ್ ಬಾಟಲಿ ಬಳಕೆ ಹೆಚ್ಚಾಗಿದೆ. ಮುಂಚೆಯೆಲ್ಲ ಪೇಪರ್​ ಕಪ್​ಗಳನ್ನು ಇರಿಸಿ ಅದಕ್ಕೆ ನೀರು ಹುಯ್ಯಲಾಗುತ್ತಿತ್ತು, ಆದರೆ ಇತ್ತೀಚೆಗೆ ಪೆಟ್ ಬಾಟಲಿಗಳ ಬಳಕೆ ಮಾಡಲಾಗುತ್ತಿದೆ. ಅದಕ್ಕೂ ಮುಂಚೆ ಅರ್ದ ಲೀಟರಿನ ಬಾಟಲಿಗಳನ್ನು ಬಳಸಲಾಗುತ್ತಿತ್ತು. ಆದರೆ ಅರ್ಧ ಲೀಟರ್ ಬಾಟಲಿನಲ್ಲಿ ನೀರು ಉಳಿದು ವೇಸ್ಟ್ ಆಗುತ್ತಿದ್ದ ಕಾರಣ ಪೆಟ್ ಬಾಟಲಿ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಜನ ಪೆಟ್ ಬಾಟಲಿ ಬಳಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಆದರೆ ಈ ಪೆಟ್ ಬಾಟಲಿ ಬಳಕೆ ವಿರುದ್ಧ ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡಿದ್ದು, ಪೆಟ್ ಬಾಟಲಿ ಬಳಕೆಯನ್ನು ಕೈಬಿಟ್ಟಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ನಾವು ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್, ಪೆಟ್ ಬಾಟಲ್ ಬಳಕೆ ನಿಲ್ಲಿಸಿದ್ದೇವೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ದೆಹಲಿಯಲ್ಲಿ ಇಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್​​ (BIS) ಆಡಳಿತ ಮಂಡಳಿಯ 8ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ಲಾಸ್ಟಿಕ್ ಮತ್ತು ಪೆಟ್ ಬಾಟಲಿಗಳಲ್ಲಿನ ಆಹಾರ ಪದಾರ್ಥ ಸೇವನೆಯಿಂದ ಮೈಕ್ರೋ ಲೆವೆಲ್ ಪ್ಲಾಸ್ಟಿಕ್ ಹಂತ ಹಂತವಾಗಿ ಸಣ್ಣ ಪ್ರಮಾಣದಲ್ಲಿ ನಮ್ಮ ದೇಹ ಸೇರುತ್ತಿದೆ ಎಂದರು.

ಫೈಬರ್ ಅಂಶವಿರುವ ಮತ್ತು ಪ್ಲಾಸ್ಟಿಕ್ ನಂತಹ ಪ್ಯಾಕೆಟ್ ಗಳಲ್ಲಿನ ಆಹಾರ, ನೀರು ಸೇವನೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ, ಇಂದು ಬಹುತೇಕ ಜಂಕ್ ಫಡ್ ಗಳನ್ನೆಲ್ಲ ಪ್ಲಾಸ್ಟಿಕ್ ಪ್ಯಾಕೆಟ್ ಗಳಲ್ಲೇ ಪುರೈಸಲಾಗುತ್ತಿದೆ. ಇದನ್ನು ಮನಗಂಡು ಪ್ರಧಾನಿ ಮೋದಿ ಅವರು ಸಭೆ, ಸಮಾರಂಭಗಳಲ್ಲಿ ಇಂಥ ಪ್ಲಾಸ್ಟಿಕ್, ಪೆಟ್ ಬಾಟಲ್ ಬಳಕೆ ನಿಲ್ಲಿಸಲು ನಿರ್ದೇಶಿಸಿದ್ದಾರೆ. ಮೋದಿ ಅವರ ನಿರ್ದೇಶನದಂತೆ ನಾವು ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಕಿ ಕೈ ಬಿಟ್ಟಿದ್ದೇವೆ ಎಂದಿದ್ದಾರೆ ಜೋಶಿ.

Leopard:  ಬೆಂಗಳೂರಿನ ಪ್ರಮುಖ ಏರಿಯಾ‌ನಲ್ಲಿ ಕಾಣಿಸಿಕೊಂಡ ಚಿರತೆ, ಹೈ ಅಲರ್ಟ್ ಘೋಷಣೆ

‘ದೇಶದಲ್ಲಿ ಆಹಾರ ಉತ್ಪನ್ನಗಳ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಇರುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು. ಕೆಲ ತಿಂಗಳ ಹಿಂದಷ್ಟೆ ಭಾರತದ ಹಲವು ಆಹಾರ ಉತ್ಪನ್ನಗಳು ವಿಷಕಾರಿ ಅಂಶಹೊಂದಿರುವುದು ಪತ್ತೆಯಾಗಿತ್ತು. ಹಲವು ದೇಶಗಳು ಭಾರತದ ಆಹಾರ ಉತ್ಪನ್ನಗಳ ರಫ್ತು ರದ್ದು ಮಾಡಿದವು.

LEAVE A REPLY

Please enter your comment!
Please enter your name here