Site icon Samastha News

Darshan Thoogudeepa: ರಿಮ್ಯಾಂಡ್ ಅರ್ಜಿ‌ ಸಿದ್ಧ: ದರ್ಶನ್ ಗೆ ಜಾಮೀನು ಕೊಡದೇ ಇರಲು ಕಾರಣಗಳನ್ನು ನೀಡಿದ ಪೊಲೀಸರು

Darshan Thoogudeepa

Darshan_Renukaswamy_Pavitra

Darshan Thoogudeepa

ರೇಣುಕಾ ಸ್ವಾಮಿ‌ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರ ಎರಡನೇ ಅವಧಿಯ ನ್ಯಾಯಾಂಗ ಬಂಧನ ಅವಧಿ ನಾಳೆ (ಜುಲೈ 18) ಕ್ಕೆ ಮುಕ್ತಾಯವಾಗಲಿದೆ. ನಾಳೆ ದರ್ಶನ್ ಹಾಗೂ ಇತರರಿಗೆ ಜಾಮೀನು ಸಿಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ ಅವರ ಅಭಿಮಾನಿಗಳು. ಆದರೆ ಪೊಲೀಸರು ಈಗಾಗಲೇ ಎಲ್ಲ ಆರೋಪಿಗಳ ವಿರುದ್ಧ ರಿಮ್ಯಾಂಡ್ ಅರ್ಜಿಯನ್ನು ತಯಾರಿಸಿದ್ದು, ಆರೋಪಿಗಳಿಗೆ ಜಾಮೀನು ನೀಬಾರದೆಂದು ನ್ಯಾಯಾಲಯಕ್ಕೆ ಮನವಿ ಮಾಡಲಿದ್ದಾರೆ.

ಆರೋಪಿಗಳಿಗೆ ಜಾಮೀನು ಏಕೆ ನೀಡಬಾರದು ಎಂಬುದಕ್ಕೆ ಕೆಲವು ಕಾರಣಗಳನ್ನು ಪೊಲೀಸರು ರಿಮ್ಯಾಂಡ್ ಅರ್ಜಿಯಲ್ಲಿ ನಮೂದಿಸಿದ್ದಾರೆ. ಆರೋಪಿಗಳಲ್ಲಿ ದರ್ಶನ್ ಸೇರಿದಂತೆ ಇನ್ನೂ ಕೆಲವರು ಪ್ರಭಾವಿಗಳಾಗಿದ್ದು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದಿದ್ದಾರೆ. ಮಾಡುತ್ತಿರುವುದು ಅಪರಾಧ ಎಂದು ಗೊತ್ತಿದ್ದರೂ ಇವರು ಆರೋಪ ಎಸಗಿದ್ದಾರೆ. ಪ್ರಕರಣದಿಂದ ತಪ್ಪಿಸಿಕೊಳ್ಳಲು ಸಾಕ್ಷ್ಯನಾಶಕ್ಕೆ ಯತ್ನಿಸಿದ್ದಾರೆ. ಹಣದ ಪ್ರಭಾವವನ್ನೂ ಬಳಸಿದ್ದಾರೆ.

Darshan: ದರ್ಶನ್ ಮತ್ತು ಅವರ ಅಭಿಮಾನಿಗಳ ಬಗ್ಗೆ ನಟ ರಾಜ್ ಬಿ ಶೆಟ್ಟಿ ಹೇಳಿದ್ದೇನು?

ಆರೋಪಿಗಳಿಗೆ ಜನ ಬೆಂಬಲ ಇದ್ದು, ಅವರ ಬಳಸಿ ಸಾಕ್ಷ್ಯಗಳ ಮೇಲೆ‌ ಪ್ರಭಾವ ಬೀರಬಹುದು. ಆರೋಪಿಗಳು ಜಾಮೀನು ಪಡೆದರೆ ಎಲ್ಲರೂ ಒಟ್ಟಾಗಿ ಪ್ರಕರಣದಿಂದ ಪಾರಾಗುವ ಹೊಸ ಯೋಜನೆ ಹಾಕಬಹುದು. ವಿದೇಶಕ್ಕೆ ಹೋಗಿ ತಲೆಮರೆಸಿಕೊಳ್ಳುವ ಸಾಧ್ಯತೆಯೂ ಇದೆ. ಇದೆಲ್ಲದರ ಜೊತೆಗೆ ಕೆಲವು ಸಾಕ್ಷ್ಯಗಳ ಫೊರೆನ್ಸಿಕ್ ರಿಪೋರ್ಟ್ ಇನ್ನೂ ಬರಬೇಕಿದೆ.  ಕೆಲವು ವ್ಯಕ್ತಿಗಳ‌ ವಿಚಾರಣೆ ನಡೆದಿದ್ದು, ಇನ್ನೂ ಕೆಲವರ ವಿಚಾರಣೆ ನಡೆಸುವ ಯೋಚನೆ ಇದೆ ಹಾಗಾಗಿ ಆರೋಪಿಗಳಿಗೆ ಜಾಮೀನಜ ನೀಡಬಾರದು ಎಂದು ಪೊಲೀಸರು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11 ರಂದು ದರ್ಶನ್ ಬಂಧನವಾಗಿತ್ತು. ದರ್ಶನ್ ಮಾತ್ರವಲ್ಲದೆ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ. ಮೂರು ಆರೋಪಿಗಳನ್ನು ತುಮಕೂರಿನ ಕಾರಾಗೃಹದಲ್ಲಿ ಇಡಲಾಗಿದೆ. ಈ ಮೂವರು ಅಪ್ರೂವರ್ ಗಳಾಗಿದ್ದು, ನ್ಯಾಯಾಧೀಶರ ಮುಂದೆ ಸಾಕ್ಷ್ಯಗಳನ್ನು ಸಹ ನುಡಿದಿದ್ದಾರೆ. ಮುಂದಿನ ತಿಂಗಳು ಎರಡನೇ ಅಥವಾ ಮೂರನೇ ವಾರದಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಅದಾದ ಬಳಿಕವಷ್ಟೆ ದರ್ಶನ್ ಗೆ ಜಾಮೀನು ಸಿಗುವ ಸಾಧ್ಯತೆ ಇದೆ.

Exit mobile version