Virat Kohli
ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರು. ಮಾತ್ರವಲ್ಲ ಭಾರತದಲ್ಲಿ ಅತಿ ಹೆಚ್ಚು ತಾರಾ ಮೌಲ್ಯ ಹೊಂದಿರುವ ವ್ಯಕ್ತಿ. ಕೊಹ್ಲಿ ಒಳ್ಳೆಯ ಕ್ರಿಲೆಟಿಗ ಆಗೊರುವ ಜೊತೆಗೆ ಅತ್ಯುತ್ತಮ ಉದ್ಯಮಿ ಸಹ ಹೌದು. ಬಟ್ಟೆಗಳ ಬ್ರ್ಯಾಂಡ್, ಎಲೆಕ್ಟ್ರಾನಿಕ್ ಗೆಜೆಟ್ ಬ್ರ್ಯಾಂಡ್ ಸೇರಿದಂತೆ ಹಲವು ಸಂಸ್ಥೆಗಳನ್ನು ಹೊಂದಿದ್ದಾರೆ. ಹೋಟೆಲ್, ಪಬ್ ಗಳನ್ನು ಸಹ ಕೊಹ್ಲಿ ಹೊಂದಿದ್ದು, ತಮ್ಮ ಒನ್ ಏಯ್ಟ್ (18) ಪಬ್ ಅನ್ನು ಮೊದಲು ಪ್ರಾರಂಭ ಮಾಡಿದ್ದು ಬೆಂಗಳೂರಿನಲ್ಲಿ. ಆದರೆ ಈಗ ಆ ಪಬ್ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
RCB ತಂಡದ ಹೋಮ್ ಪಿಚ್ ಕಸ್ತೂರಬಾ ರಸ್ತೆಯ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿಯೇ ಒನ್ ಏಯ್ಟ್ ಪಬ್ ಅನ್ನು ಬೃಹತ್ ಆಗಿ ವಿರಾಟ್ ಕೊಹ್ಲಿ ಸ್ಥಾಪಿಸಿದ್ದಾರೆ. ಇದೊಂದು ಐಶಾರಾಮಿ ರೆಸ್ಟೋರೆಂಟ್, ಬಾರ್ ಮತ್ರು ಪಬ್ ಆಗಿದೆ. ಭಾರತದ ಆಹಾರ ಖಾದ್ಯಗಳು ಸೇರಿದಂತೆ ಹಲವು ದೇಶಗಳ ಆಹಾರಗಳ ಜೊತೆಗೆ, ಅತ್ಯುತ್ತಮ ಗುಣಮಟ್ಟದ ಮದ್ಯಗಳು ಸಹ ಇಲ್ಲಿದೊರೆಯುತ್ತವೆ. ಆದರೆ ಈಗ ಬೆಂಗಳೂರು ಪೊಲೀಸರು ಪಬ್ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಜೆಡಿಎಸ್-ಬಿಜೆಪಿ ನಡುವೆಯೇ ಮುನಿಸಿಗೆ ಕಾರಣಾಯ್ತೆ ಚನ್ನಪಟ್ಟಣ ಉಪಚುನಾವಣೆ?
ಆಗಿರುವುದಿಷ್ಟು, ರಾತ್ರಿ ಸಮಯ ಅವಧಿಗೆ ಮೀರಿ ರೆಸ್ಟೋರೆಂಟ್ ತೆರೆದಿದ್ದು ಗ್ರಾಹಕರಿಗೆ ಸೇವೆ ನೀಡುತ್ತಿದ್ದ ಕಾರಣ ಕಬ್ಬನ್ ಪಾರ್ಕ್ ಪೊಲೀಸರು ವಿರಾಟ್ ಕೊಹ್ಲಿಯ ಒನ್ ಏಯ್ಟ್ ಕಮ್ಯೂನ್ ನ ಮ್ಯಾನೇಜರ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಎಫ್ ಐಆರ್ ಸಹ ದಾಖಲಿಸಲಾಗಿದೆ.
ಜುಲೈ 6 ರಂದು ಕಬ್ಬನ್ ಪಾರ್ಕ್ ಪೊಲಿಒಸ್ ಠಾಣೆಯ ಸಿಬ್ಬಂದಿ ತಮ್ಮವ್ಯಾಪ್ತಿಯ ಎಂಜಿ ರೋಡ್, ಕಸ್ತೂರ ಬಾ ರಸ್ತೆ, ಬ್ರಿಗೇಡ್ ಗಳ ರೆಸ್ಟೋರೆಂಟ್ ಗಳ ಮೇಲೆ ವಿಶೇಷ ತಡರಾತ್ರಿ ದಾಳಿ ಮಾಡಿದ್ದರು. ಈ ವೇಳೆ ಅವಧಿಗೂ ಮೀರಿ ತೆರೆದಿದ್ದ. ವಿಶೇಷವಾಗಿ ಅವಧಿಗೂ ಮೀರಿ ಮದ್ಯ ಮಾರಾಟ ಮಾಡುತ್ತಿದ್ದ ರೆಸ್ಟೋರೆಂಟ್, ಬಾರ್, ಪಬ್ ಗಳ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿರಾಟ್ ಕೊಹ್ಲಿ ಒಡೆತನದ ಪಬ್ ಸೇರಿದಂತೆ ಇತರೆ ಮೂರು ಪ್ರತಿಷ್ಟಿತ ಪಬ್ ಗಳ ಮೇಲೂ ಕಬ್ಬನ್ ಪಾರ್ಕ್ ಪೊಲೀಸರು FIR ದಾಖಲಿಸಿದ್ದಾರೆ.