Site icon Samastha News

Prajwal Devraj: ಡೈನಾಮಿಕ್ ಪ್ರಿನ್ಸ್ ಪವರ್ ಫುಲ್ ಎದುರಾಳಿ, ದುಬೈನಿಂದ ಆಗಮನ

Prajwal Devraj

Prajwal Devraj

ಸೆಟ್ಟೇರಿದಾಗಿಂದಲೂ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಕರಾವಳಿ. ಗುರುದತ್ ಗಾಣಿಗ ನಿರ್ಮಾಣದ ಜೊತೆಗೆ ನಿರ್ದೇಶನ ಮಾಡುತ್ತಿರೋ ಕರಾವಳಿ ಸಿನಿಮಾಗೆ ಖಡಕ್ ವಿಲನ್ ಎಂಟ್ರಿ ಕೊಟ್ಟಾಗಿದೆ.

ಪ್ರತಿ ಪಾತ್ರವರ್ಗವನ್ನ ವಿಭಿನ್ನ ರೀತಿಯಲ್ಲಿ ಇಂಟ್ರಡ್ಯೂಸ್ ಮಾಡುತ್ತಿರೋ ನಿರ್ದೇಶಕ ಗುರುದತ್ ಗಾಣಿಗ ಚಿತ್ರದ ಮತ್ತೊಂದು ಮುಖ್ಯಪಾತ್ರಧಾರಿಯನ್ನ ವಿಶೇಷ ರೀತಿಯಲ್ಲಿ ಪರಿಚಯಿಸಿದ್ದಾರೆ. ಕರಾವಳಿ ಸಿನಿಮಾದಲ್ಲಿ ಡೈನಾಮಿಕ್ ಪ್ರಿನ್ಸ್ ಎದುರು ಅಬ್ಬರಿಸಲು ಮಿಸ್ಟರ್ ದುಬೈ ಶಿಥಿಲ್ ಪೂಜಾರಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ.

ಮಂಗಳೂರು ಮೂಲದ ಶಿಥಿಲ್ ಪೂಜಾರಿ ದುಬೈನಲ್ಲಿ ನೆಲಸಿದ್ದು ಕರಾವಳಿ ಚಿತ್ರಕ್ಕೆ ಆಡಿಷನ್ ಮೂಲಕ ಆಯ್ಕೆ ಆಯ್ಕೆ ಆಗಿದ್ದಾರೆ. ಬೆಸ್ಟ್ ಎಂಟರ್ಟೈನರ್ ದುಬೈ, ಬೆಸ್ಟ್ ಪೀಪಲ್ ಚಾಯ್ಸ್ ದುಬೈ , ಬೆಸ್ಟ್ ಫಿಜಿಕ್ಸ್ ದುಬೈ ಪಡೆದುಕೊಂಡು ಈ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿರೋ ಮೊದಲ ಕನ್ನಡಿಗ ಶಿಥಿಲ್ ಆಗಿದ್ದಾರೆ.

ಬೆಂಗಳೂರಿನಲ್ಲಿ ಭೇಟಿ ನೀಡಲೇ ಬೇಕಾದ ಎಂಟು ಸ್ಥಳಗಳು ಇವು

ಸದ್ಯ ಕರಾವಳಿ ಸಿನಿಮಾದಲ್ಲಿ ವಾಲಿ ಎಂಬ ನೆಗೆಟಿವ್ ಶೇಡ್ ನಲ್ಲಿ ಶಿಥಿಲ್ಅಭಿನಯ ಮಾಡುತ್ತಿದ್ದು ಮೊದಲ ಹಂತದ ಚಿತ್ರೀಕರಣ ಮುಗಿಸಿರೋ ಶಿಥಿಲ್ ಮತ್ತೆ ಎರಡನೇ ಹಂತದ ಚಿತ್ರೀಕರಣಕ್ಕೇ ಕರಾವಳಿ ತಂಡ ಸೇರಿಕೊಳ್ಳಲಿದ್ದಾರೆ…ಸದ್ಯ ಶಿಥಿಲ್ ಲುಕ್ ಮೊದಲ ನೋಟದಲ್ಲೇ ಭರವಸೆ ಮೂಡಿಸುತ್ತಿದ್ದು ಮುಂದಿನ ದಿನಗಳಲ್ಲಿ  ಕನ್ನಡಕ್ಕೆ ಭರವಸೆಯ ಖಳನಾಟನಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ.

Exit mobile version