Site icon Samastha News

Pushpa 2 Breaking News: ‘ಪುಷ್ಪ 2’ ಗೆ ಶಾಕ್ ನೀಡಿದ ಕರ್ನಾಟಕ ಸರ್ಕಾರ,‌ ಶೋಗಳು ರದ್ದು

Pushpa 2 Breaking News

Pushpa 2 Breaking News

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ನಾಳೆ (ಡಿಸೆಂಬರ್ 05) ಎಲ್ಲೆಡೆ ಬಿಡುಗಡೆ ಆಗಲಿದೆ. ಕರ್ನಾಟಕದಲ್ಲಿಯೂ ಸಹ ಸಿನಿಮಾ ಬಿಡುಗಡೆ ಜೋರಾಗಿಯೇ ಆಗುತ್ತಿದೆ. ಕರ್ನಾಟಕದಲ್ಲಿ ಕಳೆದ ಮೂರು ದಿನದಿಂದಲೂ ಅಡ್ವಾನ್ಸ್ ಬುಕಿಂಗ್ ಚಾಲ್ತಿಯಲ್ಲಿತ್ತು. ಆದರೆ ಈಗ ಹಠಾತ್ತನೆ ರಾಜ್ಯ ಸರ್ಕಾರ, ‘ಪುಷ್ಪ 2’ ಸಿನಿಮಾಕ್ಕೆ ಶಾಕ್ ನೀಡಿದೆ. ಈಗಾಗಲೇ ಟಿಕೆಟ್ ಬುಕ್ ಆಗಿದ್ದ ನೂರಾರು ಶೋಗಳು ರದ್ದಾಗಿವೆ. ಕೆಲವು ಚಿತ್ರಮಂದಿರಗಳ ಮೇಲೆ ಕೇಸ್ ಸಹ ದಾಖಲಾಗಿದೆ.

ಬೆಂಗಳೂರಿನ ಹಲವು ಚಿತ್ರಮಂದಿರಗಳು ನಿಯಮ ಬಾಹಿರವಾಗಿ ಸಿನಿಮಾ ಪ್ರದರ್ಶನಕ್ಕೆ ಮುಂದಾಗಿದ್ದವು. ಹಲವು ಚಿತ್ರಮಂದಿರಗಳು ರಾತ್ರಿ‌ 3 ಗಂಟೆಗೆ, 4 ಗಂಟೆ, 5 ಗಂಟೆಗೆ, ಕೆಲವು ಚಿತ್ರಮಂದಿರಗಳು ಮಧ್ಯರಾತ್ರಿ 12 ಗಂಟೆಗೆ ‘ಪುಷ್ಪ 2’ ಸಿನಿಮಾ ಪ್ರದರ್ಶಿಸಲು ಸಜ್ಜಾಗಿದ್ದವು, ಬುಕ್ ಮೈ ಶೋ ಮೂಲಕ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಸಹ ಮಾಡಲಾಗಿತ್ತು, ಆದರೆ ಈಗ ರಾಜ್ಯ ಸರ್ಕಾರ ನೀಡಿರುವ ಹೊಡೆತಕ್ಕೆ ಸಿನಿಮಾದ ವಿತಕರರು, ಚಿತ್ರಮಂದಿರ ಮಾಲೀಕರು ಕಂಗಾಲಾಗಿದ್ದಾರೆ.

ಬೆಂಗಳೂರು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಆದೇಶವೊಂದು ಪ್ರಕಟಗೊಂಡಿದ್ದು, ಕರ್ನಾಟಕ ಸಿನಿಮಾ ರೆಗ್ಯೂಲೇಷನ್ ನಿಯಮದ ಅನುಸಾರ ನಗರ ಭಾಗದ ಯಾವುದೇ ಚಿತ್ರಮಂದಿರದಲ್ಲಿ 6:30 ಗೆ ಮುಂಚಿತವಾಗಿ ಸಿನಿಮಾ ಪ್ರದರ್ಶನ ಮಾಡುವಂತಿಲ್ಲ, ಆ ನಿಯಮವನ್ನು ಮೀರಿ ಸಿನಿಮಾ ಪ್ರದರ್ಶನ ಮಾಡಲು ಮುಂದಾಗಿರುವ ಚಿತ್ರಂದಿರದ ವಿರುದ್ಧ ಕ್ರಮ ಜರುಗಿಸಲು ಸೂಚನೆ ನೀಡಿರುವುದಲ್ಲದೆ, ಬೆಂಗಳೂರು ಹಾಗೂ ಸುತ್ತ ಮುತ್ತಲಿನ ಯಾವ ಚಿತ್ರಮಂದಿರಗಳು ನಿಯಮ ಬಾಹಿರವಾಗಿ ಸಿನಿಮಾ ಪ್ರದರ್ಶನ ಮಾಡುತ್ತಿವೆಯೋ ಆ ಎಲ್ಲ ಚಿತ್ರಮಂದಿರಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.

Allu Arjun: ರಾಮ್ ಚರಣ್-ಅಲ್ಲು ಅರ್ಜುನ್​ಗೆ ಹೋಲಿಕೆ: ಯಾರು ಉತ್ತಮರು?

ಬೆಂಗಳೂರಿನ ಸುಮಾರು 42 ಚಿತ್ರಮಂದಿರಗಳ ಹೆಸರು ಪಟ್ಟಿಯಲ್ಲಿದ್ದು, ಆ ಎಲ್ಲ ಚಿತ್ರಮಂದಿರಗಳ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ. ಕರ್ನಾಟಕ ಸಿನಿಮಾ ರೆಗ್ಯೂಲೇಷನ್ ನಿಯಮ 41 ರ ಪ್ರಕಾರ ಯಾವುದೇ ಚಿತ್ರಮಂದಿರ ಬೆಳಿಗ್ಗೆ 6:30 ಕ್ಕೆ ಮುಂಚೆ ಸಿನಿಮಾ ಪ್ರದರ್ಶಿಸುವಂತಿಲ್ಲ ಹಾಗೂ ರಾತ್ರಿ 10:30 ರ ನಂತರ ಸಿನಿಮಾ ಪ್ರದರ್ಶನ ಪ್ರಾರಂಭ ಮಾಡುವಂತಿಲ್ಲ.

Exit mobile version