Site icon Samastha News

Ramya: ದರ್ಶನ್ ವಿರುದ್ಧ ಫೀಲ್ಡಿಗಿಳಿದ ನಟಿ ರಮ್ಯಾ, ಹೇಳಿದ್ದೇನು?

Ramya

Ramya

ರೇಣುಕಾ ಸ್ವಾಮಿ ಕೊಲೆಯನ್ನು ನೆಟ್ಟಿಗರು, ಜನ ಸಾಮಾನ್ಯರು ಖಂಡಿಸಿದ್ದಾರೆ ಆದರೆ ಸಿನಿಮಾ ಸೆಲೆಬ್ರಿಟಿಗಳು ಈ ವಿಷಯದಲ್ಲಿ‌ ಮೌನವಾಗಿಯೇ ಉಳಿದಿದ್ದಾರೆ. ನಿನ್ನೆ ನಡೆದ ಡಾಲಿ ಧನಂಜಯ್ ರ ‘ಕೋಟಿ’ ಸಿನಿಮಾ ಪ್ರೀಮಿಯರ್ ನಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು ಆದರೆ ಯಾವೊಬ್ಬರೂ ದರ್ಶನ್ ಬಗ್ಗೆ ಮಾತನಾಡಿಲ್ಲ. ಕೆಲವರು, ‘ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ’ ಎಂದಷ್ಟೆ ಹೇಳಿ ಸುಮ್ಮನಾಗಿದ್ದಾರೆ. ಆದರೆ ನಟಿ ರಮ್ಯಾ ಧೈರ್ಯವಾಗಿ ಘಟನೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ವ್ಯಕ್ತಪಡಿಸೊದ್ದಾರೆ.

ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಮ್ಯಾ, ‘ ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಆಪ್ಷನ್ ಅನ್ನು ನೀಡಲಾಗಿದೆ. ಟ್ರೋಲಿಂಗ್ ತೀವ್ರವಾಗಿದ್ದರೆ ದೂರು ನೋಡುವ ಆಯ್ಕೆಯೂ ಇದೆ. ಈ ಟ್ರೋಲರ್ ಗಳು ನನನ್ನು ವರ್ಷಗಳಿಂದಲೂ ಕೆಟ್ಟ ಭಾಷೆ ಬಳಸಿ ಟ್ರೋಲ್ ಮಾಡುತ್ತಲೇ ಇದ್ದಾರೆ. ನಾನು ಮಾತ್ರವಲ್ಲ ಇತರೆ ನಟ-ನಟಿಯರೂ ಸಹ ಟ್ರೋಲ್ ಗಳನ್ನು ಎದುರಿಸಿದ್ದಾರೆ. ಹೆಂಡತಿ, ಮಕ್ಕಳನ್ನೂ ಬಿಡದೆ ಟ್ರೋಲ್ ಮಾಡಿದ್ದಾರೆ. ಬಹಳ ಕೆಟ್ಟ ಸಾಮಾಜಿಕ ಜಾಲತಾಣದಲ್ಲಿ ಸಮಾಜದಲ್ಲಿ ನಾವಿದ್ದೀವಿ ಎಂಬುದು ನಿಜ ಎಂದಿದ್ದಾರೆ ರಮ್ಯಾ.

https://samasthanews.com/renuka-swamy-murder-case-what-all-happened-on-june-13/

‌ಕಾನೂನು ನಂಬುವ ನಾಗರೀಕಳಾಗಿ ಕೆಲವು ಟ್ರೋಲರ್ ಗಳ ಮೇಲೆ ದೂರು ಕೊಟ್ಟಿದ್ದೇನೆ. ಪೊಲೋಸರ ಎಚ್ಚರಿಕೆ ಬಳಿಕ ಕೆಲವು ಟ್ರೋಲರ್ ಗಳು ಟ್ರೋಲಿಂಗ್ ನಿಲ್ಲಿಸಿದ್ದಾರೆ. ಆ ಬಳೊಕ ನಾನು ದೂರು ವಾಪಸ್ ಪಡೆದಿದ್ದೂ ಸಹ ಇದೆ. ಆ ಟ್ರೋಲರ್ ಗಳು‌ ಬಹುತೇಕ ಯುವಕರು, ಅವರು ಮೋಜಿಗೆ ಬಿದ್ದು ಈ ಟ್ರೋಲಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಅವರ ಭವಿಷ್ಯದ ಬಗ್ಗೆಯೂ ನಾವು ಆಲೋಚಿಸಬೇಕಿದೆ ಎಂದಿದ್ದಾರೆ.

‘ಯಾರೂ ಸಹ ಕಾನೂನಿಗಿಂತಲೂ ದೊಡ್ಡವರಿಲ್ಲ. ಯಾರೂ ಸಹ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಟ್ರೋಲ್‌ ಮಾಡುವವರನ್ನೆಲ್ಲ‌ ಹೊಡೆಯುತ್ತಾ, ಕೊಲ್ಲುತ್ತಾ ಇರಲು ಸಾಧ್ಯವೆ? ನಿಮಗೆ ಕಾನೂನಿನಲ್ಲಿ ನಂಬಿಕೆ ಇರಲಿ, ಇಲ್ಲದಿರಲಿ ಒಂದು ಸಣ್ಣ ದೂರು ನೀಡಿದ್ದರೂ ಸಾಕಿತ್ತು, ಕಾನೂನು ಅದರ ಕೆಲಸ ಅದು ಮಾಡುತ್ತಿತ್ತು ಎಂದಿದ್ದಾರೆ ರಮ್ಯಾ.

ಇದರ ಜೊತೆಗೆ ಪೊಲೀಸರು ಮಾಡುತ್ತಿರುವ ಕಾರ್ಯದ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿರುವ ರಮ್ಯಾ, ತಮ್ಮ ಕರ್ತವ್ಯವನ್ನು ಯಾವುದೇ ಒತ್ತಡಕ್ಕೆ ಮಣಿಯದೆ ಮಾಡುತ್ತೊರುವ ಪೊಲೀಸರಿಗೆ ಧನ್ಯವಾದ. ಆ ಪೊಲೀಸರು ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಕೆಲಸ ಮುಂದುವರೆಸಿ ಸಾಮಾನ್ಯ ನಾಗರೀಕರು ನ್ಯಾಯ ವ್ಯವಸ್ಥೆಯ ಮೇಲೆ ಇಟ್ಟಿರುವ ಭರವಸೆಯನ್ನು ಉಳಿಸುತ್ತಾರೆ‌ ಎಂದು ನಂಬಿದ್ದೇನೆ ಎಂದಿದ್ದಾರೆ ನಟಿ ರಮ್ಯಾ.

ತಮ್ಮ ಪೋಸ್ಟ್ ನಲ್ಲಿ ಜಸ್ಟಿಸ್ ಫಾರ್ ರೇಣುಕಾ ಸ್ವಾಮಿ ಎಂದು ಹ್ಯಾಷ್ ಟ್ಯಾಗ್ ಹಾಕಿರುವ ರಮ್ಯಾ, ಅದರ ಜೊತೆಗೆ, ದರ್ಶನ್, ಯಡಿಯೂರಪ್ಪ ಹಾಗೂ ಪ್ರಜ್ವಲ್ ರೇವಣ್ಣ ಹೆಸರುಗಳನ್ನೂ ಸಹ ಸೇರಿಸಿದ್ದಾರೆ.

Exit mobile version