Rashmika Mandanna: ರಶ್ಮಿಕಾ ಮಂದಣ್ಣ ಆಸ್ತಿ ಮೌಲ್ಯ ಎಷ್ಟು,  9 ವರ್ಷದಲ್ಲಿ ಗಳಿಸಿದ ಹಣವೆಷ್ಟು?

0
38
Rashmika Mandanna

Rashmika Mandanna

ರಶ್ಮಿಕಾ ಮಂದಣ್ಣ ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಟಿ. ರಶ್ಮಿಕಾ ನಟಿಸಿರುವ ಕಳೆದ ಮೂರು ಸಿನಿಮಾಗಳು ದಾಖಲೆಯ ಮೊತ್ತದ ಹಣವನ್ನು ದೋಚಿಕೊಂಡಿವೆ. ಮೊದಲಿಗೆ ‘ಅನಿಮಲ್’ ಸಿನಿಮಾ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಯ್ತು. ಆ ಬಳಿಕ ಬಿಡುಗಡೆ ಆದ ‘ಪುಷ್ಪ 2’ ಸಿನಿಮಾ ಅಂತೂ ಎಲ್ಲ ಹಳೆ ದಾಖಲೆಗಳನ್ನು ಮುರಿದು ಹಾಕಿತು.. ಅದರ ಬಳಿಕ ಬಿಡುಗಡೆ ಆದ ‘ಛಾವ’ ಸಿನಿಮಾ ಸಹ ಬಾಲಿವುಡ್ ನ ಹಲವು ದಾಖಲೆಗಳನ್ನು ಮುರಿಯಿತು.

ಒಂದರ ಹಿಂದೊಂದು ಸಿನಿಮಾಗಳು ಹಿಟ್ ಆಗುತ್ತಿರುವ ಕಾರಣ ರಶ್ಮಿಕಾ ಮಂದಣ್ಣರ ಸಭಾವನೆ ಸಹ ಏರುತ್ತಲೇ ಸಾಗುತ್ತಿದೆ. ಬಹಳ ಕಡಿಮೆ ಮೊತ್ತದ ಸಂಭಾವನೆಯಿಂದ ನಟನೆ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನ ಟಾಪ್ ಸಂಭಾವನೆ ಪಡೆವ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಈ ವರೆಗೆ ಗಳಿಸಿರುವ ಆಸ್ತಿ ಎಷ್ಟು? ರಶ್ಮಿಕಾರ ಆಸ್ತಿಯ ಮೌಲ್ಯವೆಷ್ಟು?

ಬಾಲಿವುಡ್ ವರದಿ ಪ್ರಕಾರ ರಶ್ಮಿಕಾ ಮಂದಣ್ಣ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 70 ಕೋಟಿ ರೂಪಾಯಿಗಳು. ರಶ್ಮಿಕಾ ಸಿನಿಮಾಗಳಿಂದ ಮಾತ್ರವೇ ಅಲ್ಲದೆ ಹಲವು ಉದ್ಯಮಗಳಿಂದ, ಜಾಹೀರಾತುಗಳಿಂದಲೂ ದೊಡ್ಡ ಮೊತ್ತದ ಹಣ ಗಳಿಕೆ ಮಾಡುತ್ತಾರೆ. ಮೂಲಗಳ ಪ್ರಕಾರ ರಶ್ಮಿಕಾ ಮಂದಣ್ಣ ಪ್ರತಿ ಸಿನಿಮಾಕ್ಕೆ 5 ರಿಂದ 6 ಕೋಟಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳಿಗೆ 50 ಲಕ್ಷದಿಂದ 1 ಕೋಟಿ ಪಡೆಯುತ್ತಾರೆ.

ರಶ್ಮಿಕಾ ಮಂದಣ್ಣ ಬಳಿಕ ಕೆಲವು ಐಶಾರಾಮಿ ಕಾರುಗಳಿವೆ. ಈ ಕಾರುಗಳ ಮೌಲ್ಯ ಸುಮಾರು ಎರಡು ಕೋಟಿ ರೂಪಾಯಿಗಳಂತೆ. ಹೈದರಾಬಾದ್ ನಲ್ಲಿ ಒಂದು ಮನೆ ಹಾಗೂ ಮುಂಬೈನಲ್ಲಿ ಒಂದು ಫ್ಲ್ಯಾಟ್ ಸಹ ಖರೀದಿ ಮಾಡಿದ್ದಾರೆ. ಇದರ ಜೊತೆಗೆ ಬೆಂಗಳೂರಿನಲ್ಲೂ ಅಪಾರ್ಟ್ ಮೆಂಟ್ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇವುಗಳ‌ ಜೊತೆಗೆ ಕೊಡಗಿನಲ್ಲಿಯೂ ಸಹ ಕೆಲವು ಕಮರ್ಶಿಯಲ್ ಪ್ರಾಪರ್ಟಿಗಳನ್ನು ನಟಿ ರಶ್ಮಿಕಾ ಮಂದಣ್ಣ ಹೊಂದಿದ್ದಾರೆ. ಅವರ ತಂದೆ ಅವನ್ನೆಲ್ಲ ನೋಡಿಕೊಳ್ಳುತ್ತಾರೆ.

ಇವುಗಳ ಜೊತೆಗೆ ರಶ್ಮಿಕಾ ಕೆಲ ಬ್ಯುಸಿನೆಸ್ ನಲ್ಲಿ ಹೂಡಿಕೆ ಸಹ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಪ್ಲಮ್ ಹೆಸರಿನ ಬ್ಯೂಟಿ ಬ್ರ್ಯಾಂಡ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಗೋ ಐಬಿಬೊ ನಲ್ಲಿ ಅವರ ಪಾಲುದಾರಿಕೆ ಇದೆ. ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸಿನಿಮಾ ನಿರ್ಮಾಣ ಸಂಸ್ಥೆಯನ್ನೂ ಪ್ರಾರಂಭಾಡಿದ್ದಾರೆ ಎನ್ನಲಾಗುತ್ತಿದೆ. ಒದರ ಜೊತೆಗೆ ಹಲವಯ ಕಂಪೆನಿಗಳ ಷೇರುಗಳ ಮೇಲೆ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿದ್ದಾರೆ ರಶ್ಮಿಕಾ ಮಂದಣ್ಣ.

Yash: ‘ಟಾಕ್ಸಿಕ್’ ಸಿನಿಮಾ ಸೆಟ್​ ನೋಡಿ ಶಾಕ್ ಆದ ಖ್ಯಾತ ನಿರ್ಮಾಪಕ

2016 ರಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಬಿಡುಗಡೆ ಆದಾಗ ರಶ್ಮಿಕಾ ಮಂದಣ್ಣ ಅವರ ಖಾಸಗಿ ಆಸ್ತಿ ಮೌಲ್ಯ ಬಹುತೇಕ ಸೊನ್ನೆ ಆಗಿತ್ತು. ಆದರೆ ಈಗ ಕೇವಲ 9 ವರ್ಷಗಳಲ್ಲಿ ಸುಮಾರು 70 ಕೋಟಿ ಆಸ್ತಿ ಮೌಲ್ಯವನ್ನಿ ರಶ್ಮಿಮಾ ಹೊಂದಿದ್ದಾರೆ. ಇದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ ಚೆಲುವೆ. ಇದೀಗ ರಶ್ಮಿಕಾ ಮಂದಣ್ಣ, ಸಲ್ಮಾನ್ ಖಾನ್ ಜೊತೆಗೆ ‘ಸಿಖಂಧರ್’ ಸಿನಿಮಾನಲ್ಲಿ ನಟಿಸಿದ್ದು ಸಿನಿಮಾ ಮಾರ್ಚ್ 30 ಕ್ಕೆ ಬಿಡುಗಡೆ ಆಗಲಿದೆ.

LEAVE A REPLY

Please enter your comment!
Please enter your name here