Rave Party
ಕೆಲ ವಾರಗಳ ಹಿಂದೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿಆರ್ ಫಾರಮ್ಸ್ ನಲ್ಲಿ ಆಂಧ್ರದ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯೊಂದು ಆಯೋಜಿಸಿದ್ದ ‘ಸನ್ ಸೆಟ್ ಟು ಸನ್ ರೈಸ್’ ಹೆಸರಿನ ರೇವ್ ಪಾರ್ಟಿಯಲ್ಲಿ ಭಾಗಿಯಾಗಿ ಡ್ರಗ್ಸ್ ಸೇವನೆ ಹಾಗೂ ಡ್ರಗ್ಸ್ ಹಂಚಿಕೆ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದ ನಟಿ ಹೇಮಾ ಕೊಲ್ಲಗೆ ಕೊನೆಗೂ ಜಾಮೀನು ದೊರೆತಿದೆ.
ಬೆಂಗಳೂರು ಗ್ರಾಮಾಂತರ ಎನ್ ಡಿಪಿಎಸ್ ನ್ಯಾಯಾಲಯವು ಹೇಮಾ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಕೆಲವು ಷರತ್ತುಗಳನ್ನು ಸಹ ವಿಧಿಸಿದೆ. ನಿನ್ನೆಯೇ ಹೇಮಾಗೆ ಜಾಮೀನು ದೊರಕಿದೆಯಾದರೂ ನಿನ್ನೆ ಜಾಮೀನು ಪ್ರಕ್ರಿಯೆ ಪೂರ್ಣವಾಗದ ಕಾರಣ ಇಂದು (ಜೂನ್ 13 ) ಹೇಮಾ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.
https://samasthanews.com/will-darshan-thoogudeepa-get-punishment-what-lawyer-says/
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಕೊಲ್ಲ ಅವರನ್ನು ಜೂನ್ 3 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು. ಹೇಮಾ ಕೊಲ್ಲ ಅವರನ್ನು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನಟಿ ಹೇಮಾಗೆ ಜೂನ್ 14 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಯ್ತು. ಆದರೆ ಹೇಮಾ ಪರ ವಕೀಲರು, ಹೇಮಾ ಬಳಿ ಡ್ರಗ್ಸ್ ದೊರಕಿಲ್ಲವೆಂದು, ಪಾರ್ಟಿ ನಡೆದ ಕೆಲವು ದಿನಗಳ ಬಳಿಕ ಹೇಮಾರ ಪರೀಕ್ಷೆ ಮಾಡಲಾಗಿದೆಯೆಂದು ವಾದ ಮಂಡಿಸಿ ಅವಧಿ ಮುಗಿವ ಮುಂಚಿತವಾಗಿಯೇ ಜಾಮೀನು ಪಡೆದುಕೊಂಡಿದ್ದಾರೆ.
ಕಳೆದ ತಿಂಗಳ ಮೇ 20 ರಂದು ಜಿಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ನಡೆದಿತ್ತು ಸುಮಾರು ನೂರಕ್ಕೂ ಹೆಚ್ಚು ಮಂದಿ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ರಾತ್ರಿ ಪೂರ ನಡೆದಿದ್ದ ಈ ಪಾರ್ಟಿಯಲ್ಲಿ ಡ್ರಗ್ಸ್, ಸಿಂಥೆಟಿಕ್ ಗಾಂಜಾ ಬಳಕೆಯಾಗಿದೆ ಎಂದು ಪೊಲೀಸರು ಹೇಳಿದ್ದು, ದಾಳಿಯ ಬಳಿಕ ಪಾರ್ಟಿ ಆಯೋಜಕರ ಸೇರಿದಂತೆ ಕೆಲ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದರು. ನಟಿ ಹೇಮಾ ಸಹ ಈ ಪಾರ್ಟಿಯಲ್ಲಿ ಹಾಜರಿದ್ದರು. ಆದರೆ ಫಾರಂ ಹೌಸ್ ನಿಂದಲೇ ವಿಡಿಯೋ ಬಿಡುಗಡೆ ಮಾಡಿದ್ದ ಹೇಮಾ, ತಾವು ಪಾರ್ಟಿಯಲ್ಲಿಲ್ಲ, ತಾವು ಬೆಂಗಳೂರಿನಲ್ಲಿ ಇರುವುದಾಗಿ ಸುಳ್ಳು ಹೇಳಿದ್ದರು. ಪಾರ್ಟಿ ನಡೆದ ಕೆಲ ದಿನಗಳ ಬಳಿಕ ಹೇಮಾರನ್ನು ವಿಚಾರಣೆಗೆ ಕರೆದಿದ್ದ ಪೊಲೀಸರು ಆಕೆಯನ್ನು ಬಂಧಿಸಿದ್ದರು.