Food
ಪ್ಯಾಕೇಜ್ಡ್ ಫುಡ್ ಅಥವಾ ರೆಡಿ ಟು ಈಟ್ ಫುಡ್ ಉದ್ಯಮ ಭಾರತದ ಅತ್ಯಂತ ದೊಡ್ಡ ಉದ್ಯಮಗಳಲ್ಲಿ ಒಂದು. ಸಂಘಟಿತ ಮತ್ತು ಅಸಂಘಟಿತ ಪ್ಯಾಕೇಜ್ಡ್ ಫುಡ್ ಉದ್ಯಮಗಳನ್ನು ಒಟ್ಟು ಮಾಡಿದರೆ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಉದ್ಯಮ ಇದಾಗುತ್ತದೆ. ಕರ್ನಾಟಕದಲ್ಲಿಯೇ ಸುಮಾರು ಸಾವಿರಕ್ಕೂ ಹೆಚ್ಚು ಬ್ರ್ಯಾಂಡ್ಗಳ ಲಕ್ಷಾಂತರ ಮಾದರಿಯ ಕೋಟ್ಯಂತರ ಪ್ಯಾಕೇಜ್ಡ್ ಫುಡ್ ಪಾಕೆಟ್ಗಳು ಪ್ರತಿನಿತ್ಯ ಮಾರಾಟ ಆಗುತ್ತಿವೆ. ಇವು ತಿನ್ನಲು ಸುಲಭ ಮತ್ತು ರುಚಿಕರ ಸಹ ಹೌದು. ಆದರೆ ಇವು ತಂದೊಡ್ಡುತ್ತಿರುವ ಆರೋಗ್ಯ ಸಮಸ್ಯೆ ಒಂದೆರಡಲ್ಲ.
ಭಾರತದ ಪ್ಯಾಕೇಜ್ಡ್ ಫುಡ್ ಉದ್ಯಮದ ಬಗ್ಗೆ ಇತ್ತೀಚೆಗೆ ಕೆಲವು ವರದಿಗಳು ಪ್ರಕಟವಾಗಿದ್ದು, ಭಾರತದಲ್ಲಿ ಮಾರಾಟವಾಗುತ್ತಿರುವ ಬಿವರೇಜಸ್ ಅಂದರೆ ಕೋಲ್ಡ್ ಡ್ರಿಂಕ್ಸ್ ಹಾಗೂ ಸ್ನ್ಯಾಕ್ಸ್ ಅಂದರೆ ಚಿಪ್ಸ್ ಹಾಗೂ ಅದನ್ನು ಹೋಲುವ ಪ್ಯಾಕೇಜ್ಡ್ ಫುಡ್ ಉದ್ಯಮ ಅತ್ಯಂತ ಅಪಾಯಕಾರಿಯುದುದು ಎನ್ನಲಾಗುತ್ತಿದೆ. ಭಾರತದಲ್ಲಿ ಲಭ್ಯವಾಗುವ ಸಾಫ್ಡ್ ಡ್ರಿಂಕ್ಸ್ಗಳಲ್ಲಿ 65.7% ಸಕ್ಕರೆ ಅಂಶ ಪತ್ತೆಯಾದರೆ, ಸ್ನ್ಯಾಕ್ಸ್ಗಳಲ್ಲಿ 96.7% ಕೊಬ್ಬಿನ ಅಂಶ ಪತ್ತೆಯಾಗಿದೆ. ಮಾನವನ ಆರೋಗ್ಯಕ್ಕೆ ಇದು ಅತ್ಯಂತ ಅಪಾಯಕಾರಿ.
ಸಿಡಿಎಸ್ಟಿ (ಸೆಂಟ್ರಲ್ ಡಿಪಾರ್ಟ್ಮೆಂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ) ಮಾಡಿರುವ ಈ ವರದಿಯಂತೆ ಸೂಪ್ ಮಿಕ್ಸ್ ಹೆಸರಿನ ಪ್ಯಾಕೇಜ್ಡ್ ಫುಡ್ಗಳಲ್ಲಿ ಅತ್ಯಧಿಕ ಪ್ರಮಾಣದ ಸೋಡಿಯಂ ಅಂಶ ಪತ್ತೆಯಾಗಿದೆ. ಇದು ಕ್ಯಾನ್ಸರ್ಕಾರಕ ಅಂಶವಾಗಿದೆ. ಭಾರತದಲ್ಲಿ ಗಲೈಸೆಮಿಕ್ ಇಂಡೆಕ್ಸ್ನ ಆಹಾರಗಳು ಹೆಚ್ಚಿನ ಪ್ರಮಾಣದಲ್ಲಿ ಇದೆ. ಕೆಲ ಸಾಫ್ಟ್ ಡ್ರಿಂಕ್ಸ್, ಇಡ್ಲಿ ಮಿಕ್ಸ್, ಸೂಪ್ಗಳಲ್ಲಿ ಮಾತ್ರವೇ ಶುಗರ್ ಪ್ರಮಾಣ ಕಡಿಮೆ ಪ್ರಮಾಣದಲ್ಲಿ ಇದೆ.
Omlete: ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್: ಯಾವುದು ಆರೋಗ್ಯಕರ
ಸುಮಾರು 432 ಪ್ರಮುಖ, ಭಾರತದಲ್ಲಿ ಅತಿ ಹೆಚ್ಚು ಮಾರಾಟ ಆಗುವ ವಿವಿಧ ಪ್ಯಾಕೇಜ್ಡ್ ಫುಡ್ಗಳನ್ನು ಪ್ರಯೋಗಕ್ಕೆ ತೆಗೆದುಕೊಂಡು ಭಾರತದ ಪ್ರಮುಖ ಸಂಶೋಧನಾ ಕೇಂದ್ರಗಳು, ಮಧುಮೇಹ ಇನ್ಸ್ಟಿಟ್ಯೂಟ್ಗಳು ಇನ್ನಿತರೆ ಕೆಲವು ಸಂಸ್ಥೆಗಳು ಈ ಸಂಶೋಧನೆ ಮಾಡಿ ವರದಿ ನೀಡಿವೆ. ವರದಿಯ ಪ್ರಕಾರ, ಭಾರತದಲ್ಲಿ ಮಾರಾಟವಾಗುವ ಬಹುತೇಕ ಪ್ಯಾಕೇಜ್ಡ್ ಫುಡ್ ಹಾಗೂ ಡ್ರಿಂಕ್ಸ್ಗಳು ಮಾನವನ ಆರೋಗ್ಯಕ್ಕೆ ಮಾರಕವೇ ಆಗಿವೆ. ಈ ಪ್ರಯೋಗದಲ್ಲಿ ಇಡ್ಲಿ ಮಿಕ್ಸ್, ಪುಳಿಯೋಗರೆ ಮಿಕ್ಸ್, ವಿವಿಧ ಚಿಪ್ಸ್, ಕುರ್ ಕುರೆ, ಬಿಸ್ಕೆಟ್ಗಳು, ನೂಡಲ್ಸ್, ಕೂಲ್ ಡ್ರಿಂಕ್ಸ್, ಎನರ್ಜಿ ಡ್ರಿಂಕ್ಸ್, ಹೆಲ್ತ್ ಡ್ರಿಂಕ್ಸ್ಗಳನ್ನು ಸಹ ಬಳಸಲಾಗಿತ್ತು.