Refex Eveelz: ಎಂಜಿ ಜೊತೆ ಕೈಜೋಡಿಸಿದ ಬೆಂಗಳೂರಿನ ಜನಪ್ರಿಯ ಟ್ಯಾಕ್ಸಿ ಸಂಸ್ಥೆ

0
308
Refex Eveelz

Refex Eveelz

ಕಡಿಮೆ ದರ,‌ ಗುಣಮಟ್ಟದ ಸೇವೆ, ತನ್ನ ಪರಿಸರ ಸ್ನೇಹಿ ಆಲೋಚನೆ ಮೂಲಕ ಬಹುಬೇಗನೆ ಬೆಂಗಳೂರಿಗರ ಮೆಚ್ಚಿನ ಟ್ಯಾಕ್ಸಿ ಸೇವಾ ಸಂಸ್ಥೆಯಾಗಿರುವ‌ ‘ರೆಫಿಕ್ಸ್ ಇವೀಲ್ಜ್’, ಇದೀಗ ತನ್ನ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಲು ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಈಗಾಗಲೇ ಟಾಟಾ ಮೋಟರ್ಸ್ ಜೊತೆ ಒಪ್ಪಂದ ಮಾಡಿಕೊಂಡಿರುವ ರೆಫೆಕ್ಸ್, ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಶಕ್ತಿಶಾಲಿ, ಐಶಾರಾಮಿ ಕಾರುಗಳಿಂದ ಛಾಪು ಮೂಡಿಸಿರುವ ಎಂಜಿ (ಮೊರಿಸನ್ ಗ್ಯಾರೆಜ್) ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಎಂಜಿ ಸಂಸ್ಥೆ ಶಕ್ತಿಶಾಲಿ ಎಂಜಿನ್ ನಿರ್ಮಾಣ ಮಾಡುವುದು ಮಾತ್ರವಲ್ಲದೆ, ಗುಣಮಟ್ಟದ ಎಲೆಕ್ಟ್ರಾನಿಕ್ ವಾಹನಗಳನ್ನು‌ ಸಹ ತಯಾರು ಮಾಡುತ್ತದೆ. ಪರಿಸರ ಸ್ನೇಹಿ ಧ್ಯೇಯ ಹೊಂದಿರುವ ಸಂಸ್ಥೆ ರೆಫೆಕ್ಸ್, ಈಗಾಗಲೇ ಬೆಂಗಳೂರು-ಚೆನ್ನೈಗಳಲ್ಲಿ ಹಲವಾರು ಟಾಟಾ ಸಂಸ್ಥೆಯ ಎಲೆಕ್ಟ್ರಾನಿಕ್ ವಾಹನಗಳನ್ನು ಬಳಸಿಕೊಂಡು ಕಡಿಮೆ ದರಕ್ಕೆ ಟ್ಯಾಕ್ಸಿ ಸೇವೆ ನೀಡುತ್ತಿದೆ. ಇದೀಗ ಎಂ ಜಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 150 ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದೆ‌.

ಎಂಜಿ ಸಂಸ್ಥೆಯ ಹೆಕ್ಟರ್ ಲೈನ್ ನ 150 ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಿರುವ ರೆಫೆಕ್ಸ್ ಇವೀಲ್ಜ್ ಸಂಸ್ಥೆ ಬೆಂಗಳೂರು, ಚೆನ್ನೈ‌ ವಿಮಾನ‌ ನಿಲ್ದಾಣಗಳಲ್ಲಿ ಟ್ಯಾಕ್ಸಿ ಸೇವೆಗೆ ಬಳಸಿಕೊಳ್ಳಲಿದೆ. ಎಂಜಿಯ ಎಲೆಕ್ಟ್ರಿಕ್ ವಾಹನವು ಪ್ರಯಾಣಿಕ ಸ್ನೇಹಿ ಸವಲತ್ತುಗಳನ್ನು ಹೊಂದಿದೆ. ಜೊತೆಗೆ ಒಂದೊಳ್ಳೆ ಐಶಾರಾಮಿ ಮತ್ತು ಆರಾಮದಾಯಕ ಪಯಣದ ಅನುಭವವನ್ನು ನೀಡುತ್ತದೆ‌. ಎಂಜಿ ಸಂಸ್ಥೆಯ ವಾಹನಗಳ ಮೂಲಕ ಇನ್ನು ಮುಂದೆ ರೆಫೆಕ್ಸ್ ಇವೀಲ್ಜ್ ಟ್ಯಾಕ್ಸಿಯ ಪಯಣ ಇನ್ನಷ್ಟು ಆರಾಮದಾಯಕ ಹಾಗೂ ಸುರಕ್ಷತೆಯನ್ನು ಹೊಂದಿರಲಿದೆ. ಎಂಜಿ ಮಾತ್ರವಲ್ಲದೆ, ಮಹಿಂದ್ರಾ ಎಕ್ಸ್ ಯುವಿ 400 ಎಲೆಕ್ಟ್ರಿಕ್ ವಾಹನಗಳನ್ನು ಸಹ ರೆಫೆಕ್ಸ್ ಖರೀದಿಸಲಿದ್ದು, ಕಡಿಮೆ ದರದಲ್ಲಿ ಗ್ರಾಹಕರಿಕೆ ಸೇವೆ ಒದಗಿಸುವ ಸತತ ಪ್ರಯತ್ನ ಮಾಡುತ್ತಿದೆ.

https://samasthanews.com/100-percent-ethanol-run-cars-will-be-produced-soon-in-india/

‘ರೆಫೆಕ್ಸ್ ಇವೀಲ್ಜ್’ ಸಂಸ್ಥೆ ಅತ್ಯಂತ ಕಡಿಮೆ ಬೆಲೆಗೆ ಟ್ಯಾಕ್ಸಿ ಸೇವೆಗಳನ್ನು ನೀಡುತ್ತಿದೆ. ಬೆಂಗಳೂರು ನಗರದ ಯಾವುದೇ ಭಾಗದಿಂದ‌ 1000 ರೂಪಾಯಿಗಳಿಗೂ ಕಡಿಮೆ ದರಕ್ಕೆ ವಿಮಾನ ನಿಲ್ದಾಣ ತಲುಪಬಹುದಾಗಿದೆ. ಇದೀಗ ಹೊಸ ಆಫರ್ ಗಳನ್ನು ಸಹ ಗ್ರಾಹಕರಿಕೆ ರೆಫೆಕ್ಸ್ ಇವೀಲ್ಜ್ ಸಂಸ್ಥೆ ನೀಡುತ್ತಿದ್ದು ಕೆಲವು ನಿಗದಿತ ಪ್ರದೇಶಗಳಿಂದ ಕೇವಲ 99 ರೂಪಾಯಿಗಳಿಗೆ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಬುಕ್ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here