Refex Eveelz: ಸ್ವಾತಂತ್ರ್ಯೋತ್ಸವದ ಆಫರ್: ಕೇವಲ 78 ರೂಪಾಯಿಗಳಿಗೆ ವಿಮಾನ ನಿಲ್ದಾಣ‌ ತಲುಪಿ

0
580
Refex eVeelz

Refex Eveelz

ಬಸ್ ಟಿಕೆಟ್ ಬೆಲೆಗಿಂತಲೂ ಕಡಿಮೆ ಹಣದಲ್ಲಿ ವಿಮಾನ ನಿಲ್ದಾಣ ತಲುಪಬಹುದು ಅದೂ ಐಶಾರಾಮಿ ಟ್ಯಾಕ್ಸಿಯಲ್ಲಿ. ಈ ಆಫರ್ ಬಿಟ್ಟಿರುವುದು ಎಲೆಕ್ಟ್ರಿಕ್ ವಾಹನಗಳನ್ನಷ್ಟೆ ಟ್ಯಾಕ್ಸಿ ಸೇವೆಗೆ ಬಳಸುವ‌ ಮೂಲಕ ಟ್ಯಾಕ್ಸಿ ಸೇವಾ ಉದ್ದಿಮೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿರುವ ರೆಫಿಕ್ಸ್ ಇವೀಲ್ಜ್ ಸಂಸ್ಥೆ. ಬೆಂಗಳೂರು ಹಾಗೂ ಚೆನ್ನೈ ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಕಾರುಗಳ ಮೂಲಕ ಕಡಿಮೆ ದರಕ್ಕೆ ಗುಣಮಟ್ಟದ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ರೆಫಿಕ್ಸ್ ಇವೀಲ್ಜ್ ಸಂಸ್ಥೆ ಇದೀಗ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಆಫರ್ ಒಂದನ್ನು ಹೊರ ತಂದಿದೆ.

ಬೆಂಗಳೂರು ನಗರದಿಂದ ವಿಮಾನ ನಿಲ್ದಾಣ ತಲುಪಲು ಟ್ಯಾಕ್ಸಿಗಳಿಗೆ ಕನಿಷ್ಟ 1500 ನೀಡಬೇಕು, ಆದರೆ ರೆಫಿಕ್ಸ್ ಇವೀಲ್ಜ್ ಸಂಸ್ಥೆ ಬೆಂಗಳೂರಿನ ಯಾವುದೇ ಪ್ರದೇಶದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೇವಲ 78 ರೂಪಾಯಿಗಳಲ್ಲಿ ತಲುಪಿಸಲಿದೆ. ಹೌದು, ಕೇವಲ 78 ರೂಪಾಯಿ ಪಾವತಿಸಿ ಬೆಂಗಳೂರಿನ ಯಾವುದೇ ಭಾಗದಿಂದ ನೀವು ಟ್ಯಾಕ್ಸಿಯಲ್ಲಿ ವಿಮಾನ ನಿಲ್ದಾಣ ತಲುಪಬಹುದು. ಆದರೆ ಈ ಆಫರ್ ಕೆಲವು ದಿನಗಳ ವರೆಗೆ ಮಾತ್ರವಲವೇ ಇರಲಿದೆ.

ಭಾರತವು ಆಗಸ್ಟ್ 15 ರಂದು 78ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳಲಿದ್ದು, ಇದರ ಪ್ರಯುಕ್ತ ರೆಫಿಕ್ಸ್ ಇವೀಲ್ಜ್ ಸಂಸ್ಥೆ‌78 ರೂಪಾಯಿಗಳ ಭಂಪರ್ ಆಫರ್ ಹೊರತಂದಿದೆ. ಆಗಸ್ಟ್ 14, 15 ಮತ್ತು‌ ಆಗಸ್ಟ್ 16  ರಂದು ಗ್ರಾಹಕರು, ರೆಫಿಕ್ಸ್ ಇವೀಲ್ಜ್ ಸಂಸ್ಥೆಯ ಕಾರು ಟ್ಯಾಕ್ಸಿಯನ್ನು ಕೇವಲ 78 ರೂಪಾಯಿಗಳಿಗೆ ಬುಕ್ ಮಾಡಬಹುದು. ಅತ್ಯಂತ ಕಡಿಮೆ ದರಕ್ಕೆ ಬೆಂಗಳೂರಿನ ಯಾವುದೇ ಭಾಗದಿಂದ ವಿಮಾನ ನಿಲ್ದಾಣವನ್ನು ತಲುಪಬಹುದು.

ಆಫರ್ ಪಡೆದುಕೊಳ್ಳುವುದು ಸಹ ಬಹು ಸುಲಭ. ರೆಫಿಕ್ಸ್ ಇವೀಲ್ಜ್ ಅಪ್ಲಿಕೇಷನ್ ತೆರೆದು ಟ್ಯಾಕ್ಸಿ ಬುಕ್ ಮಾಡಬೇಕು, ಡ್ರಾಪ್ ಲೊಕೇಷನ್ ಅನ್ನು ವಿಮಾನ ನಿಲ್ದಾಣದ ಟರ್ಮಿನಲ್ 1 ಅಥವಾ 2 ಅನ್ನು ಆಯ್ಕೆ ಮಾಡಿಕೊಳ್ಳಬೇಕು, ಪೇಮೆಂಟ್ ಮಾಡುವಾಗ ಕೂಪನ್ ಕೋಡ್ INDIA78 ಎಂದು ನಮೂದು ಮಾಡಬೇಕು. ಅಂದಹಾಗೆ ಈ ಆಫರ್ ಮೂರು ದಿನ ಮಾತ್ರವೇ ಇರುತ್ತದೆ. ಆಗಸ್ಟ್ 14 ರಿಂದ ಆಗಸ್ಟ್ 16 ರ ವರೆಗೆ ಮಾತ್ರ.

Refex Eveelz: ಎಂಜಿ ಜೊತೆ ಕೈಜೋಡಿಸಿದ ಬೆಂಗಳೂರಿನ ಜನಪ್ರಿಯ ಟ್ಯಾಕ್ಸಿ ಸಂಸ್ಥೆ

ರೆಫೆಕ್ಸ್ ಇವೀಲ್ಜ್ ಸಂಸ್ಥೆ ಆರಂಭದಿಂದಲೂ ಅತ್ಯಂತ ಕಡಿಮೆ ಬೆಲೆ ಟ್ಯಾಕ್ಸಿ ಸೇವೆ ಒದಗಿಸುತ್ತಾ ಬಂದಿದೆ. ಈ ಮೊದಲು 99 ರೂಪಾಯಿಗಳಿಗೆ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಬುಕ್ ಮಾಡುವ ಆಫರ್ ಬಿಟ್ಟಿತ್ತು. ಅದಾದ ಬಳಿಕ ಬೆಂಗಳೂರಿನ ಯಾವುದೇ ಮೂಲೆಯಿಂದ ಕೇವಲ 999 ರೂಪಾಯಿಗಳಿಗೆ ವಿಮಾನ ನಿಲ್ದಾಣ ತಲುಪುವ ಆಫರ್ ಹೊರ ತಂದಿತ್ತು. ಒಟ್ಟಾರೆ ರೆಫಿಕ್ಸ್ ಇವೀಲ್ಜ್ ಸಂಸ್ಥೆ ಅತ್ಯಂತ ಕಡಿಮೆ ದರಕ್ಕೆ ಗ್ರಾಹಕರಿಗೆ ಗುಣಮಟ್ಟದ ಮತ್ತು ಸುರಕ್ಷಿತ ಟ್ಯಾಕ್ಸಿ ಸೇವೆ ಒದಗಿಸುತ್ತಿದೆ.

LEAVE A REPLY

Please enter your comment!
Please enter your name here