Darshan
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್’ಗೆ ಮಧ್ಯಂತರ ಜಾಮೀನು ದೊರೆತಿದ್ದು ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೈಲಿನಿಂದ ಹೊರಬಂದಿರುವ ಖುಷಿಯಲ್ಲಿ ದರ್ಶನ್ ಇದ್ದಾರಾದರೂ ಅವರಿಗೆ ಭಾರಿ ದೊಡ್ಡ ಹೊಡೆತ ಬಿದ್ದಿದೆ. ದರ್ಶನ್ ವಿರುದ್ಧ ಪ್ರಬಲವಾದ ಸಾಕ್ಷ್ಯವೊಂದು ತನಿಖೆ ನಡೆಸುತ್ತಿರುವ ಪೊಲೀಸರಿಗೆ ದೊರಕಿದೆ.
ರೇಣುಕಾ ಸ್ವಾಮಿ ನಿಧನವಾದಾಗ ದರ್ಶನ್ ಶೆಡ್’ನಲ್ಲಿ ಇರಲಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ದರ್ಶನ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾಗ ಅವರ ಪರ ವಕೀಲರು ಇದೇ ಮಾತುಗಳನ್ನು ಆಡಿದ್ದರು. ಆದರೆ ಈಗ ಸಿಕ್ಕಿರುವ ಸಾಕ್ಷಿ, ರೇಣುಕಾ ಸ್ವಾಮಿ ನಿಧನ ಹೊಂದಿದಾಗ ದರ್ಶನ್, ಸ್ಥಳದಲ್ಲಿ ಹಾಜರಿದ್ದರು ಎಂಬುದನ್ನು ಖಾತ್ರಿ ಪಡಿಸುತ್ತಿವೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುವಾಗ ಪೊಲೀಸರು ವಶ ಪಡಿಸಿಕೊಂಡಿದ್ದ ಸಾಕ್ಷಿಗಳನ್ನು ಬೆಂಗಳೂರು ಮತ್ತು ಹೈದರಾಬಾದ್ ಎಫ್’ಎಸ್’ಎಲ್ ಪರೀಕ್ಷಾ ಕೇಂದ್ರಕ್ಕೆ ರವಾನಿಸಿದ್ದರು. ಎಲ್ಲ ಪರೀಕ್ಷಾ ವರದಿಗಳು ಬಂದಿದ್ದವಾದರೂ ಕೆಲವರ ಮೊಬೈಲ್ ಫೋನ್ ವರದಿಗಳು ಬಂದಿರಲಿಲ್ಲ. ಇದೀಗ ಎಲ್ಲ ವರದಿಗಳು ಬಂದ ವರದಿಯಲ್ಲಿ ಆಘಾತಕಾರಿ ಅಂಶ ಬಹಿರಂಗ ಆಗಿದೆ.
ಆರೋಪಿ ಪವನ್ ಮೊಬೈಲ್ ನಲ್ಲಿ ದರ್ಶನ್, ರೇಣುಕಾ ಸ್ವಾಮಿ ಶವದ ಮುಂದೆ ನಿಂತಿರುವ ಚಿತ್ರ ಸೆರೆಯಾಗಿದೆ. ಚಿತ್ರದಲ್ಲಿ ದರ್ಶನ್ ಜೊತೆಗೆ ಇನ್ನೂ ಕೆಲವು ಆರೋಪಿಗಳಿದ್ದಾರೆ. ಕೃತ್ಯ ನಡೆದ ಬಳಿಕ ಆ ಫೋಟೊಗಳನ್ನು ಡಿಲೀಟ್ ಮಾಡಲಾಗಿತ್ತು, ಆದರೆ ಹೈದರಾಬಾದ್ ಎಫ್’ಎಸ್’ಎಲ್ ನಲ್ಲಿ ಆ ಡಿಲೀಟ್ ಮಾಡಿದ ಫೋಟೊಗಳನ್ನು ರಿಟ್ರೀವ್ ಮಾಡಲಾಗಿದ್ದು, ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ನಿಂತಿರುವ ಚಿತ್ರ ಲಭ್ಯವಾಗಿದೆ.
Vijay Raghavendra: ವಿಜಯಪುರದಲ್ಲಿ ವಿಜಯ ರಾಘವೇಂದ್ರ: ‘ರುದ್ರಾಭಿಷೇಕಂ’ ಸಿನಿಮಾಕ್ಕೆ ಚಾಲನೆ
ಈ ಫೋಟೊದಿಂದಾಗಿ, ರೇಣುಕಾ ಸ್ವಾಮಿ ಕೊಲೆ ನಡೆದಾಗ ದರ್ಶನ್ ಸ್ಥಳದಲ್ಲಿ ಹಾಜರಿದ್ದರು ಎಂಬುದು ಖಾತ್ರಿ ಆದಂತಾಗಿದೆ. ಜಾಮೀನು ತೆಗೆದುಕೊಳ್ಳಬೇಕು ಎಂದುಕೊಂಡಿಧದ ದರ್ಶನ್’ಗೆ ಈ ಚಿತ್ರದಿಂದ ದೊಡ್ಡ ಹಿನ್ನಡೆ ಆಗಿದೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಿನ್ನೆಯಷ್ಟೆ ಹೈಕೋರ್ಟ್’ನಲ್ಲಿ ನಡೆದಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 22 ಕ್ಕೆ ಮುಂದೂಡಲಾಗಿದೆ. ಇದೇ ಪ್ರಕರಣದ ಇತರೆ ಆರೋಪಿಗಳಾದ ಪವಿತ್ರಾ ಗೌಡ ಇನ್ನಿತರರ ಜಾಮೀನು ಅರ್ಜಿ ವಿಚಾರಣೆಯೂ ನಡೆಯಲಿದೆ.