Renuka Swamy: ದರ್ಶನ್ ಪ್ರಕರಣದಲ್ಲಿ ಇಂದು ಏನೇನಾಯ್ತು: ಕೆಲವು‌ ಮಹತ್ವದ ಬೆಳವಣಿಗೆಗಳು

0
149
Renuka Swamy

Renuka Swamy Murder Case

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಹಾಗೂ ಸಹಚರರು ಬಂಧನಕ್ಕೆ ಒಳಪಟ್ಟು ಮೂರು ದಿನಗಳಾಗಿವೆ. ನ್ಯಾಯಾಲಯವು ಆರೋಪಿಗಳನ್ನು ಆರು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದ್ದು ಇನ್ನೂ ಮೂರು ದಿನ ಬಾಕಿ ಇದೆ. ಮೂರನೆ ದಿನ ಅಂದರೆ ಜೂನ್ 13 ರಂದು ಪ್ರಕರಣದಲ್ಲಿ ಕೆಲವು ಮಹತ್ವದ ಬೆಳವಣಿಗೆಗಳಾಗಿವೆ. ಕೆಲವು ಮಹತ್ವದ ಅಂಶಗಳು ಹೊರಬಿದ್ದಿವೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಒಬ್ಬ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಹೆಸರು ಕೇಳಿ ಬಂದಿದೆ. ಕೊಲೆ ನಡೆದ ದಿನ ಆರೋಪಿಗಳು ಸಬ್ ಇನ್ ಸ್ಪೆಕ್ಟರ್ ಗೆ ಕರೆ ಮಾಡಿ ಸಲಹೆ ಕೇಳಿದ್ದು, ಆ ಪೊಲೀಸ್ ಅಧಿಕಾರಿ ನೀಡಿದ ಸಲಹೆಯಂತೆಯೇ ಶವವನ್ನು ಸುಮನಹಳ್ಳಿ ಮೋರಿಗೆ ಎಸೆಯಲಾಗಿತ್ತಂತೆ. ಆ ಪೊಲೀಸ್ ಅಧಿಕಾರಿ, ಶವವನ್ನು ತನ್ನ ಠಾಣಾ ವ್ಯಾಪ್ತಿಯಲ್ಲಿ ಎಸೆಯಬೇಡಿ ಎಂದು ಸಹ ಹೇಳಿದ್ದನಂತೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖಾಧಿಕಾರಿಯನ್ನು ಸಹ ಬದಲಾವಣೆ ಮಾಡಲಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣ ಭೇದಿಸಿ, ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಿದ್ದ ಗಿರೀಶ್ ನಾಯಕ್ ರ‌ ಬದಲಿಗೆ ಚಂದನ್ ಎಂಬುವರಿಗೆ ಪ್ರಕರಣದ ಜವಾಬ್ದಾರಿ ವಹಿಸಲಾಗಿದೆ. ಇನ್ನು ಮುಂದೆ ಪ್ರಕರಣದ ತನಿಖೆಯನ್ನು‌ ಚಂದನ್ ಮಾಡಲಿದ್ದಾರೆ.

https://samasthanews.com/darshan-thoogudeepa-close-friend-deepak-became-approver-in-renuk-swamy-case-reports/

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪೊಯಾಗಿರುವ ದರ್ಶನ್ ಆಪ್ತ ದೀಪಕ್ ಅಪ್ರೂವರ್ ಆಗಿ ಬದಲಾಗಿದ್ದು, ನಡೆದ ಘಟನೆಗಳನ್ನೆಲ್ಲ ವಿವರವಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ. ದೀಪಕ್ ಪ್ರಮುಖ ರಾಜಕಾರಣಿಗೆ ಹತ್ತಿರದ ಸಂಬಂಧಿಯಾಗಿದ್ದು, ರಾಜಕಾರಣಿಯ ಒತ್ತಡದಿಂದಲೇ ದೀಪಕ್ ಅನ್ನು ಆರೋಪಿಯ ಬದಲಾಗಿ ಅಪ್ರೂವರ್ ಅನ್ನಾಗಿ ಬದಲಿಸಲಾಗಿದೆ ಎನ್ನಲಾಗುತ್ತಿದೆ.

ಇಂದು ಸಹ ಆರೋಪಿಗಳಿಂದ ಕೆಲವೆಡೆ ಮಹಜರು ಮಾಡಿಸಲಾಗಿದೆ. ಕೊಲೆ ನಡೆದ ಪಟ್ಟಣಗೆರೆ ಶೆಡ್ ಗೆ ಆರೋಪಿಗಳನ್ನು ಕರೆದುಕೊಂಡು ಹೋಗಿ ಮಹಜರು ಮಾಡಲಾಗಿದ್ದು, ಹಲ್ಲೆಗೆ ಬಳಸಿದ್ದ ದೊಣ್ಣೆ, ರಿಪೀಸು, ಬೆಲ್ಟು ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಚಿತ್ರದುರ್ಗಕ್ಕೂ ತೆರಳಿ, ಅಪಹರಣ ನಡೆದ ಸ್ಥಳದ ಮಹಜರು ಸಹ ಮಾಡಲಾಗಿದೆ.

ದರ್ಶನ್ ಹಾಗೂ ಇತರ ಆರೋಪಿಗಳನ್ನು ಇರೊಸಲಾಗಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಮುಂದೆ ಶಾಮಿಯಾನವನ್ನು ಪೊಲೀಸರು ಅಡ್ಡ ಇರಿಸಿದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ. ಮಾಧ್ಯಮಗಳ ಕಣ್ಣಿಗೆ ಠಾಣೆ ಒಳಗೆ ನಡೆಯುವ ಪ್ರಕ್ರಿಯೆ ಗೋಚರಿಸಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ವಿಪಕ್ಷ ನಾಯಕರು ಇದನ್ನು ಖಂಡಿಸಿದ್ದಾರೆ.

ದರ್ಶನ್ ಅನ್ನು ಚಿತ್ರರಂಗದಿಂದ ಬ್ಯಾನ್ ಮಾಡುವ‌ ವಿಷಯವಾಗಿ ಚರ್ಚಿಸಲು ಫಿಲಂ ಚೇಂಬರ್ ನಲ್ಲಿ ಪದಾಧಿಕಾರಿಗಳ ಸಭೆ ನಡೆದಿದ್ದು, ದರ್ಶನ್ ಮಾಡಿರುವ ಕೃತ್ಯವನ್ನು ಫಿಲಂ ಚೇಂಬರ್ ಖಂಡಿಸುತ್ತದೆ ಆದರೆ ಪೊಲೀಸ್ ವರದಿ ಬರುವ ವರೆಗೂ ನಾವು ಯಾವುದೇ ನಿರ್ಣಯಕ್ಕೆ ಬರುವುದಿಲ್ಲ. ಆದರೆ ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದೇವೆ ಎಂದಿದ್ದಾರೆ.

LEAVE A REPLY

Please enter your comment!
Please enter your name here