Bengaluru
ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟಮೆಂಟ್ ಒಂದರಲ್ಲಿ ದೇವರಿಂದಾಗಿ ಅಪಾರ್ಟ್ ಮೆಂಟ್ ನಿವಾಸಿಗಳಲ್ಲಿ ಕಲಹ ಶುರುವಾಗಿದೆ. ದೇವರ ಪ್ರತಿಷ್ಠಾಪನೆ ವಿಷಯ ಗೇಟೆಡ್ ಕಮ್ಯೂನಿಟಿ ಅಪಾರ್ಟ್ ಮಿಂಟ್ ನ ನಿವಾಸಿಗಳನ್ನು ಇಬ್ಭಾಗವಾಗಿ ಒಡೆದಿದೆ. ಯಲಹಂಕ ಬಳಿಯ ಪ್ರಾವಿಡೆಂಟ್ ವೆಲ್ ವರ್ತ್ ಅಪಾರ್ಟ್ ಮಿಂಟ್ ಈಗ ಧರ್ಮದ ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದೆ.
ಈ ಗೇಟೆಡ್ ಕಮ್ಯೂನಿಟಿ ಅಪಾರ್ಟ್ ಮೆಂಟ್ ನಲ್ಲಿ 3360 ಕುಟುಂಬಗಳು ವಾಸವಿದ್ದು, ಹಲವು ಧರ್ಮ, ಜಾತಿಯ ಜನರು ಅದರಲ್ಲೂ ಸಿರಿವಂತ ಜನರೇ ಹೆಚ್ಚಾಗಿ ಇಲ್ಲಿ ವಾಸಿಸುತ್ತಿದ್ದಾರೆ. ಇಷ್ಟು ದಿನ ನೆಮ್ಮದಿಯಾಗಿದ್ದ ನಿವಾಸಿಗಳ ನಡುವೆ ಈಗ ಧರ್ಮದ ಕಾರಣಕ್ಕೆ ಭಿನ್ನಾಭಿಪ್ರಾಯ ತಲೆದೂರಿದೆ. ಅಪಾರ್ಟ್ ಮೆಂಟ್ ಅಧ್ಯಕ್ಷರು, ಈ ಸನ್ನಿವೇಶ ಸೃಷ್ಟಿಯಾಗಲು ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಕಾರಣ ಎಂದು ದೂರಿದ್ದಾರೆ.
https://samasthanews.com/accident-in-bengaluru-pune-highway-13-dead/
ಅಪಾರ್ಟ್್ ಮೆಂಟ್ ಕೆಲವರು ಅಪಾರ್ಟ್ ಮೆಂಟ್ ಕಾಂಪೌಂಡ್ ನಲ್ಲಿ ತುಳಸಿ ಕಟ್ಟೆ ನಿರ್ಮಾಣ ಮಾಡಿದ್ದು, ಅಲ್ಲಿ ದೇವರ ಪ್ರತಿಷ್ಟಾಪನೆಗೆ ಮುಂದಾಗಿದ್ದಾರೆ. ತುಳಸಿ ಕಟ್ಟೆ ನಿರ್ಮಾಣ ಮತ್ತು ದೇವರ ಪ್ರತಿಷ್ಟಾಪನೆ ಕಾರ್ಯಕ್ಕೆ ಬಿಜೆಪಿ ಶಾಸಕ ವಿಶ್ವನಾಥ್ ಬೆಂಬಲ ಇದೆ ಎನ್ನಲಾಗುತ್ತಿದೆ. ತುಳಸಿ ಕಟ್ಟೆ ನಿರ್ಮಾಣದ ಬಳಿಕ ಅಪಾರ್ಟ್ ಮೆಂಟ್ ನ ಇತರೆ ಧರ್ಮಸ ನಿವಾಸಿಗಳು ತಮ್ಮ ಧರ್ಮದ ಗುಡಿಗಳನ್ನು ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಮುಸ್ಲೀಮರು, ದರ್ಗಕ್ಕೆ, ಕ್ರೈಸ್ತರು ಚರ್ಚ್ ಗಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದ್ದು, ಇದರಿಂದಾಗಿ ಇಷ್ಟು ದಿನ ಶಾಂತಿಯಿಂದಿದ್ದ ಅಪಾರ್ಟ್ ಮೆಂಟ್ ನಲ್ಲಿ ಈಗ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪ್ರಾವಿಡೆಂಟ್ ವೆಲ್ ವರ್ತ್ ಸಿಟಿ ಅಪಾರ್ಟ್ ಮೆಂಟ್ ಬೆಂಗಳೂರಿನ ಎರಡನೇ ಅತಿದೊಡ್ಡ ಅಪಾರ್ಟ್ ಮೆಂಟ್ ಸಮುಚ್ಛಯವಾಗಿದೆ. 42 ಎಕರೆಗಳ ಬೃಹತ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಅಪಾರ್ಟ್ ಮೆಂಟ್ ಸಮುಚ್ಛಯದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಜನ ವಾಸ ಮಾಡುತ್ತಿದ್ದಾರೆ. ಬರೋಬ್ಬರಿ 61 ಬ್ಲಾಕ್ ಗಳು ಈ ಅಪಾರ್ಟ್ ಮೆಂಟ್ ಸಮುಚ್ಛಯದಲ್ಲಿವೆ. ಹಾಗಾಗಿ ರಾಜಕಾರಣಿಗಳ ಕಣ್ಣು ಸದಾ ಅಪಾರ್ಟ್ ಮೆಂಟ್ ಮೇಲಿರುತ್ತದೆ. ಇದೀಗ ಇದೇ ಕಾರಣಕ್ಕೆ ಕೋಮು ಸೌಹಾರ್ಧ ಹಾಳಾಗಿದ್ದು ಮುಂದಿನ ದಿನಗಳಲ್ಲಿ ಏನಾಗಲಿದೆಯೋ ಎಂಬ ಆತಂಕ ಅಪಾರ್ಟ್ ಮೆಂಟ್ ನಿವಾಸಿಗಳಲ್ಲಿ ಮನೆ ಮಾಡಿದೆ.