Site icon Samastha News

Rishab Shetty: ತೆಲುಗಿನ ಸೂಪರ್ ಹೀರೋ ಸಿನಿಮಾಕ್ಕೆ ರಿಷಬ್ ಶೆಟ್ಟಿ ನಾಯಕ

Rishab Shetty

Rishab Shetty

ಕಾಂತಾರ ಸಿನಿಮಾದಿಂದಾಗಿ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಒಬ್ಬ ವ್ಯಕ್ತಿಯ ಜೀವನ ಬದಲಿಸಲು ಒಂದು ಒಳ್ಳೆ ನಿರ್ಧಾತ ಸಾಕು ಎನ್ನುವಂತೆ ರಿಷಬ್ ಶೆಟ್ಟರ ಜೀವನ ಬದಲಾಗಲು ‘ಕಾಂತಾರ’ ಸಿನಿಮಾ ಸಾಕಾಯ್ತು. ‘ಕಾಂತಾರ’ ಸಿನಿಮಾಕ್ಕೆ ಹಿಂದೆ ಸಹ ಲೋ ಬಜೆಟ್ ಸಿನಿಮಾ ಮಾಡಿದ್ದ ರಿಷಬ್ ಶೆಟ್ಟಿ ಈಗ ಕಾಂತಾರ ಸಿನಿಮಾದ ಬಳಿಕ ಬಾಲಿವುಡ್, ಸೌಥ್ ನ ದೊಡ್ಡ ನಿರ್ದೇಶಕರಿಂದ ಅವಕಾಶ ಪಡೆದುಕೊಳ್ಳುತ್ತಿದ್ದಾರೆ.

ರಿಷಬ್ ಶೆಟ್ಟಿ ಈಗಾಗಲೇ ಬಾಲಿವುಡ್ ನ ಒಂದು ಭಾರಿ ಬಜೆಟ್ ಸಿನಿಮಾಕ್ಕೆ ಓಕೆ ಹೇಳಿದ್ದಾರೆ. ಇದೀಗ ತೆಲುಗಿನ ಸೂಪರ್  ಹೀರೋ ಸಿನಿಮಾದಲ್ಲಿ ನಾಯಕ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ರಿಷಬ್ ನಟಿಸಲಿರುವ ತೆಲುಗು ಸಿನಿಮಾದ ಪ್ರೀ ಪ್ರೊಡಕ್ಷನ್ ಈಗಾಗಲೇ ಮುಗಿದಿದ್ದು ಕೆಲವೇ ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆ.

ಕಳೆದ ವರ್ಷ ಸಂಕ್ರಾಂತಿಗೆ ದೊಡ್ಡ ಸ್ಟಾರ್ ನಟತ ಸಿನಿಮಾಗಳ ಜೊತೆ ಬಿಡುಗಡೆ ಆಗಿಯೂ ಭಾರಿ ದೊಡ್ಡ ಹಿಟ್ ಎನಿಸಿಕೊಂಡು ‘ಹನುಮ್ಯಾನ್’ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ಭಾರತೀಯ ದೇವರುಗಳನ್ನು ಆಧಾರವಾಗಿಟ್ಟುಕೊಂಡು ವರ್ಷಕ್ಕೊಂದು ಸೂಪತ್ ಹೀರೋ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದರ ಭಾಗವಾಗಿ ಈಗ ‘ಜೈ ಹನುಮಾನ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

Ramayana: ಹಣಕ್ಕೆ ಶ್ರೀರಾಮನ ಬಳಕೆ, ಬಾಲಿವುಡ್ಡಿಗರು ಬುದ್ಧಿ ಕಲಿಯಲ್ಲ

ಪ್ರಶಾಂತ್ ವರ್ಮಾ ನಿರ್ಮಾಣ ಮಾಡಲಿರುವ ‘ಜೈ ಹನುಮಾನ್’ ಸಿನಿಮಾದಲ್ಲಿ ಹನುಮಂತನ ಮಾತ್ರ ಅಂದರೆ ಸಿನಿಮಾದ ಅತ್ಯಂತ ಪ್ರಮುಖ ಪಾತ್ರವನ್ನು ರಿಷಬ್ ಶೆಟ್ಟಿ ನಿರ್ವಹಿಸಲಿದ್ದಾರೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿಯವರದ್ದು ಅತ್ಯಂತ ಪ್ರಮುಖ ಪಾತ್ರವಾಗಿದ್ದು, ಅವರೇ ಈ ಸಿನಿಮಾದ ಪ್ರಮುಖ ನಾಯಕ ಎನ್ನಲಾಗುತ್ತಿದೆ. ಕೆಲವೇ ತಿಂಗಳಲ್ಲಿ ರಿಷಬ್ ಶೆಟ್ಟಿ, ‘ಜೈ ಹನುಮಾನ್’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ.

ರಿಷಬ್ ಶೆಟ್ಟಿ ಪ್ರಸ್ತುತ ‘ಕಾಂತಾರ’ ಪ್ರೀಕ್ವೆಲ್ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಅಂತಿಮ ಹಂತ ತಲುಪಿದ್ದು ಕೆಲವೇ ತಿಂಗಳಲ್ಲಿ ಸಿನಿಮಾದ ಪ್ರೀ ಪ್ರೊಡಕ್ಷನ್ ಪ್ರಾರಂಭ ಆಗಲಿದೆ. ಅದರ ಬಳಿಕವಷ್ಟೆ ರಿಷಬ್ ಶೆಟ್ಟಿ ಬೇರೆ ಸಿನಿಮಾಗಳ ಕಡೆಗೆ ತಲಡ ಹಾಕಲಿದ್ದಾರೆ. ಇದರ ಜೊತೆಗೆ ರಿಷಬ್ ಶೆಟ್ಟಿ ಬಾಲಿವುಡ್ ನ ಖ್ಯಾತ ನಿರ್ದೇಶನ ಅಶುತೋಷ್ ಗೋವರಿಕರ್ ಸಿನಿಮಾದಲ್ಲಿಯೂ ನಟಿಸಲಿದ್ದಾರೆ‌ ‘ಲಗಾನ್’ ಸಿನಿಮಾ ನಿರ್ದೇಶಿಸಿದ್ದ ಅಶುತೋಷ್ ಗೋವರಿಕರ್ ಈಗ ರಿಷಬ್ ಜೊತೆ ಮುಂದಿನ ಸಿನಿಮಾ ಮಾಡಲಿದ್ದಾರೆ.

Exit mobile version