Rohit Sharma: ವಿಶ್ವಕಪ್ ಗೆದ್ದ ಪಿಚ್​ನ ಮಣ್ಣು ತಿಂದ ರೋಹಿತ್ ಶರ್ಮಾ: ಕಾರಣವೇನು?

0
200
Rohit Sharma

Rohit Sharma

ಭಾರತ ಕ್ರಿಕೆಟ್ ತಂಡ ನಿನ್ನೆ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದೆ. 17 ವರ್ಷದ ಬಳಿಕ ಟ20 ವಿಶ್ವ ಚಾಂಪಿಯನ್ ಎನಿಸಿಕೊಂಡಿದೆ. ಈ ಹಿಂದೆ ಭಾರತ ಟಿ20 ವಿಶ್ವಕಪ್ ಗೆದ್ದಿದ್ದು 2007 ರಲ್ಲಿ ಮಹೇಂದ್ರ ಸಿಂಗ್ ಧೋನಿಯ ನಾಯಕತ್ವದಲ್ಲಿ. 17 ವರ್ಷದ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮತ್ತೆ ಟಿ20 ವಿಶ್ವಕಪ್ ಗೆದ್ದಿದೆ. ನಿನ್ನೆಯ ಪಂದ್ಯ ವೆಸ್ಟ್ ಇಂಡೀಸ್​ನ ಬಾರ್ಬೆಡೋಸ್​ನಲ್ಲಿ ನಡೆಯಿತು. ಭಾರತವು ಪಂದ್ಯ ಗೆದ್ದು ಚಾಂಪಿಯನ್ ಆದ ಬಳಿಕ ಭಾವುಕರಾಗಿದ್ದ ರೋಹಿತ್ ಶರ್ಮಾ, ಪಂದ್ಯ, ಪ್ರಶಸ್ತಿ ವಿತರಣೆ ಬಳಿಕ ಪಂದ್ಯ ನಡೆದ ಕ್ರೀಡಾಂಗಣದ ಪಿಚ್​ನ ಮಣ್ಣು ತಿಂದರು!

ಬಾರ್ಬೆಡೋಸ್​ ಪಿಚ್ ಮೇಲಿನ ಮಣ್ಣನ್ನು ತಿಂದಿರುವ ಚಿತ್ರವನ್ನು ಸ್ವತಃ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೆನಪಿಗಾಗಿ ತಾವು ಹೀಗೆ ಮಾಡಿರುವುದಾಗಿ ರೋಹಿತ್ ಶರ್ಮಾ ಬರೆದುಕೊಂಡಿದ್ದಾರೆ. ಅಲ್ಲದೆ ಬಾರ್ಬೆಡೋಸ್ ಜನರಿಗೆ ಧನ್ಯವಾದ ಹೇಳುವ ಪದ್ಧತಿಯೂ ಇದಾಗಿದೆ ಎನ್ನಲಾಗುತ್ತಿದೆ.

Athlete Ashwini: ದಕ್ಷಿಣ ಕೊರಿಯಾದ ಟ್ರಯಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಏಕೈಕ ಕ್ರೀಡಾಪಟು

ಭಾರತದಲ್ಲಿ ಮಣ್ಣು ತಿನ್ನುವ ಕ್ರಿಯೆಗೆ ಸಾಂಸ್ಕೃತಿಕ, ಪೌರಾಣಿಕ ನಂಟು ಇದೆ. ಮಣ್ಣು ತಿಂದರೆಂದರೆ ಆ ಮಣ್ಣಿಗೆ ಋಣಿಯಾಗಿರುತ್ತಾರೆ ಎಂಬ ಅರ್ಥವೂ ಇದೆ. ಆ ಮಣ್ಣಿಗೆ ದತ್ತು ಹೋದವರೆಂಬ ಅರ್ಥವೂ ಇದೆ. ವಿಶ್ವಕಪ್ ಗೆದ್ದ ಪಿಚ್​ಗೆ ಋಣಿಯಾಗಿರುವುದನ್ನು ರೋಹಿತ್ ಶರ್ಮಾ ಮಣ್ಣು ತಿನ್ನುವ ಮೂಲಕ ತೋರಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ಟಿ20 ಟ್ರೋಫಿಯೊಂದಿಗೆ ಭಿನ್ನವಾಗಿ ಫೋಸ್ ಕೊಟ್ಟಿದ್ದಾರೆ. ವಿಶ್ವಕಪ್ ಟ್ರೋಫಿಯನ್ನು ತನ್ನ ಬೆಡ್​ರೂಂಗೆ ಒಯ್ದು ತಮ್ಮ ಹಾಗೂ ಪತ್ನಿಯ ನಡುವೆ ಟ್ರೋಫಿಯನ್ನಿಟ್ಟು ಫೋಟೊ ತೆಗೆಸಿಕೊಂಡಿದ್ದಾರೆ. ಪತಿ-ಪತ್ನಿ ಇಬ್ಬರೂ ಬೆಡ್​ನಲ್ಲಿ ಮಲಗಿದ್ದಾಗ ಮಧ್ಯದಲ್ಲಿ ಟ್ರೋಫಿ ಸಹ ಇದೆ. ಈ ಚಿತ್ರ ಸಹ ವೈರಲ್ ಆಗುತ್ತಿದೆ.

LEAVE A REPLY

Please enter your comment!
Please enter your name here