Rohit Sharma: ರಾಹುಲ್ ದ್ರಾವಿಡ್ ಅವರನ್ನು ತಡೆಯಲು ಯತ್ನಿಸಿದೆ ಆದರೆ…: ರೋಹಿತ್ ಶರ್ಮಾ ಭಾವುಕ

0
184
Rohit Sharma

Rohit Sharma

ಟಿ 20 ವಿಶ್ವಕಪ್ ಆಡಲು ತೆರಳಿರುವ ಭಾರತ ಕ್ರಿಕೆಟ್ ತಂಡ ತನ್ನ ಮೊದಲ ಪಂದ್ಯದಲ್ಲಿ ಈಗಾಗಲೆ ವಿಜಯ ಸಾಧಿಸಿದೆ. ಇತ್ತೀಚೆಗಿನ ಸಂದರ್ಶನದಲ್ಲಿ ರೋಹಿತ್ ಶರ್ಮಾ, ಭಾರತ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ತಮ್ಮ ಸ್ಥಾನ ತ್ಯಜಿಸುತ್ತಿರುವ ಬಗ್ಗೆ ಮಾತನಾಡುತ್ತಾ ಭಾವುಕರಾದರು. ‘ನಾನು ಅವರನ್ನು ತಡೆಯಲು ಯತ್ನಿಸಿದೆ’ ಎಂದರು ರೋಹಿತ್.

ರಾಹುಲ್‌ ದ್ರಾವಿಡ್ ನಿವೃತ್ತಿಯ ಬಗ್ಗೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಶರ್ಮಾ, ‘ಕೋಚ್ ಸ್ಥಾನದಲ್ಲಿ ಮುಂದುವರೆಯುವಂತೆ ನಾನು ಮನವಿ ಮಾಡಿಕೊಂಡೆ. ಆದರೆ ಅವರಿಗೆ ಬೇರೆ ಜವಾಬ್ದಾರಿಗಳಿವೆ. ಅವನ್ನು ಅವರು ಪೂರ್ತಿ ಮಾಡಬೇಕಿದೆ. ಆದರೆ ನಾನು ಅವರೊಟ್ಟಿಗೆ ಸಮಯವನ್ನು ಎಂಜಾಯ್ ಮಾಡಿದ್ದೇನೆ. ತಂಡದ ಇತರೆ ಸದಸ್ಯರದ್ದು ಇದೇ ಅಭಿಪ್ರಾಯ ಎಂಬ ನಂಬಿಕೆ ನನ್ನದು’ ಎಂದಿದ್ದಾರೆ.

‘ಅವರು ನನಗೆ ಆದರ್ಶ ನಾನು ಮೊದಲ ಭಾರತಕ್ಕೆ ಆಡಿದಾಗ ಅವರೇ ನಾಯಕ. ನಾನು ನಾಯಕ ಆದಾಗ ಕೋಚ್. ಅವರು ಇಒಗ ತಂಡವನ್ನು, ನಮ್ಮನ್ನು ಬಿಟ್ಟು ಹೋಗುವುದು ನನ್ನಿಂದ ನೋಡಲು ಆಗುವುದಿಲ್ಲ. ಇದಕ್ಕಿಂತಲೂ ಹೆಚ್ಚಿಗೆ ನಾನೇನು ಮಾತನಾಡುವುದಿಲ್ಲ, ನಾನು ಮಾತನಾಡುವುದಿಲ್ಲ’ ಎಂದು ಭಾವುಕವಾಗಿ ನುಡಿದರು.

Vegetarian Food: ಮಾಂಸಾಹಾರಿಗಳೆ ಇಲ್ಲದ ವಿಶ್ವದ ಏಕೈಕ ಸಸ್ಯಹಾರಿ ನಗರ ಭಾರತದಲ್ಲಿದೆ

ರಾಹುಲ್ ದ್ರಾವಿಡ್ ಕಳೆದ ಕೆಲವು ವರ್ಷಗಳಿಂದ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರ ಅವಧಿ ಮುಗಿದಿದ್ದು ಅವರೀಗ ಸ್ಥಾನ ತ್ಯಜಿಸಿ ಹೋಗುತ್ತಿದ್ದಾರೆ. ಹೊಸ ಕೋಚ್ ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೆಲವು ಅಂತರಾಷ್ಟ್ರೀಯ ಆಟಗಾರರನ್ನು ಸಂಪರ್ಕ ಸಹ ಮಾಡಿದೆ ಬಿಸಿಸಿಐ.

LEAVE A REPLY

Please enter your comment!
Please enter your name here