Ramayana
ಶ್ರೀರಾಮ ಇಂದು ಕೇವಲ ದೇವರಾಗಿ ಉಳಿದಿಲ್ಲ. ರಾಮನನ್ನು ರಾಜಕೀಯಕ್ಕೆ, ಸ್ವಂತ ಲಾಭಕ್ಕೆ, ಹಣಕ್ಕೆ, ಚುನಾವಣೆಗೆ ಹಲವು ಕಾರಣಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಶ್ರೀರಾಮನ ಬಗ್ಗೆ, ರಾಮಾಯಣದ ಬಗ್ಗೆ ಭಾರತೀಯರಿಗೆ ಅಪರಿಮಿತ ಭಕ್ತಿ, ಪ್ರೀತಿ, ಗೌರವ ಇದೆ. ಆದರೆ ಕೆಲವರು ಕೇವಲ ತಮ್ಮ ಲಾಭಕ್ಕಾಗಿ ಶ್ರೀರಾಮನ ಬಳಕೆ ಮಾಡಿಕೊಳ್ಳುತ್ತಿರುವುದು ನಿಜ ತಾಮನ ಭಕ್ತರಿಗೆ ತೀವ್ರ ಬೇಸರ ತಂದಿದೆ. ಅದರಲ್ಲೂ ಸಿನಿಮಾದವರು ಶ್ರೀರಾಮನನ್ನು ಹಣಕ್ಕಾಗಿ ಬಳಸಿಕೊಳ್ಳುತ್ತಿರುವುದು ಸಹಜವಾಗಿಯೇ ಆಕ್ರೋಶಕ್ಕೆ ಕಾರಣವಾಗಿದೆ.
ರೋಹಿತ್ ಶೆಟ್ಟಿ, ಬಾಲಿವುಡ್ ನ ಮಸಾಲಾ ಸಿನಿಮಾಗಳ ನಿರ್ದೇಶಕ. ಫೈಟ್, ಐಟಂ ಸಾಂಗ್, ಡಬಲ್ ಮೀನಿಂಗ್ ಡೈಲಾಗ್ ಗಳಂಥಹಾ ಕರ್ಶಿಯಲ್ ಅಂಶಗಳನ್ನು ಬಳಸಿ ಸಿನಿಮಾ ಮಾಡುವುದು ಆತನ ಪ್ರತಿಭೆ. ತಮಿಳಿನ ಸಿಂಘಂ ಸಿನಿಮಾವನ್ನು ಹಿಂದಿಗೆ ರೀಮೆಕ್ ಮಾಡಿದ್ದ ರೋಹಿತ್ ಶೆಟ್ಟಿ, ಆ ನಂತರ ಸತತವಾಗಿ ಪೊಲೀಸ್ ಕತೆಗಳನ್ನೇ ಸಿನಿಮಾ ಮಾಡುತ್ತಾ ಬಂದಿದ್ದು, ಅವುಗಳಲ್ಲಿ ಹಲವು ಸಿನಿಮಾಗಳು ತೋಪೆದ್ದಿವೆ.
ಇದೀಗ ಹೊಸ ಪೊಲೀಸ್ ಸಿನಿಮಾ ನಿರ್ದೇಶಿಸಿರುವ ರೋಹಿತ್ ಶೆಟ್ಟಿ ಆ ಪೊಲೀಸ್ ಸಿನಿಮಾದಲ್ಲಿ ಅವಶ್ಯಕತೆ ಇಲ್ಲದಿದ್ದರೂ ಸುಖಾ-ಸುಮ್ಮನೆ ರಾಯಣದ ಕತೆಯನ್ನು ತುರುಕಿದ್ದಾರೆ. ಪಕ್ಕಾ ಮಸಾಲಾ, ಆಕ್ಷನ್ ಸಿನಿಮಾದಲ್ಲಿ ಕೇವಲ ಹಿಂದೂಗಳ ಧಾರ್ಮಿಕ ಭಾವನೆಯ ಲಾಭ ಪಡೆಯಲು, ಹಿಂದೂಗಳು ರಾಮನ ಮೇಲಿಟ್ಟಿರುವ ಭಕ್ತಿಯ ಲಾಭ ಪಡೆಯಲು, ಶ್ರೀರಾಮನನ್ನು ಬಳಕೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Prabhas: ಮತ್ತೆ ರಾಮಾಯಣದ ತಂಟೆಗೆ, ಸೋತರು ಬುದ್ಧಿ ಬರಲಿಲ್ಲವೇ ಪ್ರಭಾಸ್’ಗೆ
ರೋಹಿತ್ ಶೆಟ್ಟಿ ನಿರ್ದೇಶನ ಮಾಡಿರುವ ‘ಸಿಂಘಂ ಅಗೇನ್’ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಸಿನಿಮಾದಲ್ಲಿ ಬಾಲಿವುಡ್ ನ ಬಹುತೇಕ ನಾಯಕ ನಟರನ್ನು ರೋಹಿತ್ ಶೆಟ್ಟಿ ಹಾಕಿಕೊಂಡಿದ್ದಾರೆ. ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್, ಟೈಗರ್ ಶ್ರಾಫ್, ದೀಪಿಕಾ ಪಡುಕೋಣೆ, ಸಿದ್ಧಾರ್ಥ್ ಮಲ್ಹೋತ್ರಾ, ದಯಾ ಅವರುಗಳನ್ನು ಟ್ರೈಲರ್ ನಲ್ಲಿ ತೋರಿಸಲಾಗಿದೆ.
ಟ್ರೈಲರ್ ನಲ್ಲಿ ಪೊಲೀಸ್ ಅಧಿಕಾರಿ ಅಜಯ್ ದೇವಗನ್ ಅನ್ನು ಶ್ರೀರಾಮನಂತೆ ತೋರಿಸಲಾಗಿದೆ. ನಾಯಕಿ ಕರೀನಾ ಕಪೂರ್ ಅನ್ನು ಸೀತಾಮಾತೆಯಂತೆ. ಸೀತೆಯನ್ನು ಅಂದರೆ ಕರೀನಾ ಅನ್ನು ವಿಲಬ್ ಅಪಹರಿಸಿರುತ್ತಾನೆ ಆತನನ್ನು ಹುಡುಕಿ ಹೋಗುವ ಅಜಯ್ ದೇವಗನ್ ಗೆ ನೆರವಾಗುವ ರಣ್ವೀರ್ ಸಿಂಗ್ ಹನುಮಂತ, ಟೈಗರ್ ಶ್ರಾಫ್ ಲಕ್ಷ್ಮಣ, ಅಕ್ಷಯ್ ಕುಮಾರ್ ಜಟಾಯು ಹೀಗೆ ಒಬ್ಬೊಬ್ಬರಿಗೆ ಒಂದೊಂದು ಪಾತ್ರವನ್ನು ರೋಹಿತ್ ಶೆಟ್ಟಿ ನೀಡಿದ್ದಾರೆ. ಪಕ್ಕಾ ಕಮರ್ಶಿಯಲ್ ಸಿನಿಮಾದಲ್ಲಿ ಲಾಭ ಮಾಡುವ ಉದ್ದೇಶದಿಂದ ಶ್ರೀರಾಮನನ್ನು, ರಾಮಾಯಣವನ್ನು ಬಳಕೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಿನಿಮಾ ಅಕ್ಟೋಬರ್ 1 1ಕ್ಕೆ ತೆರೆಗೆ ಬರಲಿದೆ.