Site icon Samastha News

Royal Enfield: ರಾಯಲ್ ಎನ್ಫೀಲ್ಡ್ ಹೊಸ ಬೈಕ್ ಬಿಡುಗಡೆ: ಮಾರುಕಟ್ಟೆ ಶೇಕ್ ಗ್ಯಾರೆಂಟಿ, ಬೆಲೆ ಎಷ್ಟು?

Royal Enfield

royal Enfield guerrilla 450

Royal Enfield

ಕಳೆದ‌ ಹತ್ತಕ್ಕೂ ಹೆಚ್ಚು ವರ್ಷದಿಂದ ಭಾರತೀಯ ಬೈಕ್ ಮಾರುಕಟ್ಟೆಯಲ್ಲಿ ರಾಯಲ್‌ ಎನ್ ಫೀಲ್ಡ್ ರಾಯಲ್ ಆಗಿ ಮೆರೆಯುತ್ತಿದೆ. ತನ್ನ ಕ್ಲಾಸಿಕ್ ಹಾಗೂ ಇತರೆ ಬುಕೆಟ್ ಗಳ ಮೂಲಕ ಭಾರತದ ಬೈಕ್ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಎಬ್ಬಿಸೊತು ರಾಯಲ್‌ ಎನ್ ಫೀಲ್ಡ್. ಆದರೆ ಇತ್ತೀಚೆಗೆ ರಾಯಲ್ ಎನ್ ಫೀಲ್ಡ್ ಗೆ ಟ್ರಿಯಂಪ್, ಹೋಂಡಾ ಇನ್ನೂ ಕೆಲವು ಸಂಸ್ಥೆಗಳು ಬುಲೆಟ್ ವಿಭಾಗದಲ್ಲಿ ಸ್ಪರ್ಧೆ ಒಡ್ಡುತ್ತಿವೆ. ಆದರೆ ರಾಯಲ್‌ ಎನ್ ಫೀಲ್ಡ್ ಸಂಸ್ಥೆ ಮಾತ್ರ ಆನೆ ನಡೆದಿದ್ದೆ ಹಾದಿ ಎನ್ನುವಂತೆ ಸಾಗುತ್ತಿದೆ. ಇದೀಗ ರಾಯಲ್ ಎನ್ ಫೀಲ್ಡ್ ಹೊಸ ಬೈಕ್ ಬಿಡುಗಡೆಗೆ ಮುಂದಾಗಿದ್ದು, ಈ ಹೊಸ ಬೈಕ್ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸುವುದು ಖಾಯಂ ಎನ್ನಲಾಗುತ್ತಿದೆ.

ರಾಯಲ್ ಎನ್ ಫೀಲ್ಡ್ ಈಗಾಗಲೇ ಬುಲೆಟ್ ವಿಭಾಗದಿಂದ ತುಸು ಹೊರಬಂದು ಹಂಟರ್ ಅನ್ನು ಹೊರತಂದಿತ್ತು. ಪೂರ್ಣವಾಗಿ ಬುಲೆಟ್ ಅಲ್ಲದ ಇತ್ತ ಬೈಕ್ ಸಹ ಅಲ್ಲದ ಹೊಸ ಮಾದರಿಯ ಬೈಕ್ ಇದಾಗಿದ್ದು, ಬೆಲೆಯನ್ನು ಸಹ ಬಹಳ ಕಡಿಮೆ ಇರಿಸಿತ್ತು. ಹಾಗಾಗಿ ಈ ರಾಯಲ್‌ಎನ್ ಫೀಲ್ಡ್ ಹಂಟರ್ ಬೈಕ್ ದೇಶದಲ್ಲಿ ಲಕ್ಷಗಳ ಲೆಕ್ಕದಲ್ಲಿ ಮಾರಾಟವಾಯ್ತು. ಈಗ ಅದೇ ಮಾದರಿಯ ಆದರೆ ಹಂಟರ್ ಗಿಂತಲೂ ಬಹಳ ಭಿನ್ನವಾದ ಬೈಕ್ ಅನ್ನು ರಾಯಲ್ ಎನ್ ಫೀಲ್ಡ್ ಬಿಡುಗಡೆ ಮಾಡುತ್ತಿದೆ.

ರಾಯಲ್‌ ಎನ್ ಫೀಲ್ಡ್ ಸಂಸ್ಥೆಯು ‘ಗೊರಿಲ್ಲ’ ಹೆಸರಿನ ಹೊಸ ಬೈಕ್ ಬಿಡುಗಡೆ ಮಾಡುತ್ತಿದೆ. ಈ ಬೈಕ್ ಹಂಟರ್ ಮಾದರಿಯ ಬೈಕ್ ನಂತೆ ಕಂಡರೂ ಸಹ ಬಹಳ ದೊಡ್ಡ ಅಂತರವಿದೆ. ಹಂಟರ್ ಗಿಂತಲೂ ಹೆಚ್ಚು ರಗಡ್ ಆದ ಲುಕ್ ಅನ್ನು ಈ ಗೊರಿಲ್ಲ‌ ಹೊಂದಿದೆ. ವಶೇಷವೆಂದರೆ ಗೊರಿಲ್ಲ ಬೈಕ್ 450 ಸಿಸಿ ಬೈಕ್ ಆಗಿರಲಿದೆ. ಹಂಟರ್ ಕೇವಲ 350 ಸಿಸಿ ಬೈಕ್ ಆಗಿದೆ.

ಬಜಾಜ್ ಹೊರತರುತ್ತಿದೆ CNG ಬೈಕ್, ಪೆಟ್ರೋಲ್ ಬೈಕ್ ಗೆ ಹೇಳಿ ಗುಡ್ ಬೈ

450 ಸಿಸಿ ಬೈಕ್ ಆಗಿದ್ದರೂ ಸಹ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಹಂಟರ್ ಬೈಕ್ ಬೆಂಗಳೂರಿನಲ್ಲಿ 2 ಲಕ್ಷದಿಂದ 2.21 ಲಕ್ಷದ ವರೆಗೆ ಆನ್ ರೋಡ್ ಬೆಲೆಗೆ ದೊರಕುತ್ತದೆ. ಅದೇ ಹೊಸ ಗೊರಿಲ್ಲ ಸಹ ಬಹುತೇಕ ಇದೇ ಬೆಲೆಯಲ್ಲಿ ಗ್ರಾಹಕರಿಗೆ ದೊರಕಲಿದೆ ಎನ್ನಲಾಗುತ್ತಿದೆ. ಹೆಚ್ಚೆಂದರೆ 2.50 ಲಕ್ಷದ ವರೆಗೆ ಬೆಲೆ ಇರಬಹುದು ಎನ್ನಲಾಗುತ್ತಿದೆ. ಈ ಬಗ್ಗೆ ರಾಯಲ್ ಎನ್ ಫೀಲ್ಡ್ ಹೇಳಿಕೆ ನೀಡಬೇಕಿದೆ.

ಆದರೆ ಲುಕ್, ಫೀಲ್ ಗಳಲ್ಲಿ ಗೊರಿಲ್ಲ ಬೈಕ್, ರಾಯಲ್ ಎನ್ ಫೀಲ್ಡ್ ನ ಈವರೆಗಿನ ಅತ್ಯುತ್ತಮ ಬೈಕ್ ಗಳ ಸಮಕ್ಕಿದೆ. ಕೆಲವೇ ದಿನಗಳಲ್ಲಿ ಈ ಬೈಕ್ ಮಾರುಕಟ್ಟೆಗೆ ಬರಲಿದ್ದು ಜನ ಹೇಗೆ ಸ್ವೀಕರಿಸುತ್ತಾರೆಯೋ ಕಾದು ನೋಡಬೇಕಿದೆ.

Exit mobile version