Site icon Samastha News

Royal Enfield: ರಾಯಲ್ ಎನ್​ಫೀಲ್ಡ್ ಬಿಡುಗಡೆ ಮಾಡುತ್ತಿದೆ ಎಂಟು ಹೊಸ ಬೈಕು

Royal Enfield

Royal Enfield

ರಾಯಲ್ ಎನ್​ಫೀಲ್ಡ್ ಕಳೆದ ಕೆಲವು ವರ್ಷಗಳಿಂದಲೂ ಭಾರತದ ಬೈಕ್ ಮಾರುಕಟ್ಟೆಯಲ್ಲಿ ರಾಜನಂತೆ ಆಳ್ವಿಕೆ ನಡೆಸುತ್ತಿದೆ. ಪಲ್ಸರ್, ಅಪಾಚೆ 160 ಹೊರತಾಗಿ ಬೇರೆ ಬೈಕೇ ಇಲ್ಲ ಎನ್ನುವ ಸಮಯದಲ್ಲಿ ಮಾರುಕಟ್ಟೆಗೆ ನುಗ್ಗಿದ ರಾಯಲ್ ಎನ್​ಫೀಲ್ಡ್ ಬುಲೆಟ್ ಬೈಕುಗಳನ್ನು ದೋಸೆಯಂತೆ ಮಾರಿತು. ಈಗಲೂ ಸಹ ಭಾರತದಲ್ಲಿ 200 ಸಿಸಿ ಗೂ ಹೆಚ್ಚಿರುವ ಬೈಕುಗಳ ಮಾರಾಟದಲ್ಲಿ ರಾಯಲ್ ಎನ್​ಫೀಲ್ಡ್​ನ ಬೈಕುಗಳೇ ಕಿಂಗ್. ಬುಲೆಟ್​ 350 ಇಂದ ಆರಂಭಿಸಿ, ಈಗ ಹಲವು ಬೈಕುಗಳನ್ನು ಮಾರುಕಟ್ಟೆಗೆ ತಂದಿರುವ ರಾಯಲ್ ಎನ್​ಫೀಲ್ಡ್​ ಈಗ ಬರೋಬ್ಬರಿ ಎಂಟು ಬೈಕುಗಳನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದೆ.

ಕ್ಲಾಸಿಕ್ 350 ಅಪ್​ಡೇಟ್

ರಾಯಲ್ ಎನ್​ಫೀಲ್ಡ್​ನ ಅತಿ ಹೆಚ್ಚು ಮಾರಾಟವಾಗುವ ಕ್ಲಾಸಿಕ್ 350 ಬೈಕಿಗೆ ಕೆಲವು ಅಪ್​ಡೇಟ್​ಗಳನ್ನು ತರಲು ಸಂಸ್ಥೆ ಸಿದ್ಧವಾಗಿದೆ. ಡಿಸೈನ್​ನಲ್ಲಿ ಹಾಗೂ ಎಂಜಿನ್​ ರಿಫೈನ್​ಮೆಂಟ್​ನಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಗೊರಿಲ್ಲ 650

ರಾಯಲ್ ಎನ್​ಫೀಲ್ಡ್​ ನ ಗೊರಿಲ್ಲ 450 ಒಂದು ಅತ್ಯುತ್ತಮ ಬೈಕು. ಬುಲೆಟ್​ಗಳಿಗೆ ಹೆಸರಾಗಿರುವ ರಾಯಲ್ ಎನ್​ಫೀಲ್ಡ್ ಗೊರಿಲ್ಲ 450 ಅಂಥಹಾ ಸ್ಪೋರ್ಟಿ ಬೈಕನ್ನು ಸಹ ಹೊರತಂದಿದೆ. ಇದೀಗ ಗೊರಿಲ್ಲ 650 ಅನ್ನು ಮಾರುಕಟ್ಟೆಗೆ ತರಲು ರಾಯಲ್ ಎನ್​ಫೀಲ್ಡ್ ಸಜ್ಜಾಗಿದೆ.

ಕೇಫ್ ರೇಸರ್ 650

ರಾಯಲ್ ಎನ್​ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಸಹ ಜನಪ್ರಿಯ ಬೈಕು. ಆದರೆ ಇದೇ ಬೈಕಿಗೆ ಮುಂದೆ ವಿದೇಶದಲ್ಲಿ ಜನಪ್ರಿಯವಾಗಿರುವ ಕೇಫ್ ರೇಸರ್ ಬೈಕಿನ ಮಾಡೆಲ್ ಇಟ್ಟು ಕೇಫ್ ರೇಸರ್ 650 ಬಿಡುಗಡೆ ಮಾಡಲು ರಾಯಲ್ ಎನ್​ಫೀಲ್ಡ್ ಮುಂದಾಗಿದೆ.

ಹಿಮಾಲಯನ್ 650

ರಾಯಲ್ ಎನ್​ಫೀಲ್ಡ್​ನ ಕ್ಲಾಸಿಕ್, ಹಂಟರ್ ಹೊರತುಪಡಿಸಿದರೆ ಅತಿ ಹೆಚ್ಚು ಮಾರಾಟವಾಗುವುದು ಹಿಮಾಲಯನ್ ಬೈಕು. ಅತ್ಯುತ್ತಮ ಟೂರಿಂಗ್ ಬೈಕಾದ ಹಿಮಾಲಯನ್ ಭಾರತದಲ್ಲಿ ಟೂ ವೀಲರ್ ಟೂರಿಂಗ್ ಗೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಿದೆ. ಈವರೆಗೆ ಹಿಮಾಲಯನ್ 450 ಮಾತ್ರವೇ ಬಂದಿತ್ತು. ಈಗ ಹಿಮಾಲಯನ್ 650 ಬಿಡುಗಡೆ ಮಾಡಲಿದೆ ರಾಯಲ್ ಎನ್​ಫೀಲ್ಡ್.

ಹಂಟರ್ 250

ರಾಯಲ್ ಎನ್​ಫೀಲ್ಡ್ ನ ಅತಿ ಹೆಚ್ಚು ಮಾರಾಟವಾಗುವ ಬೈಕುಗಳಲ್ಲಿ ಒಂದಾಗಿರುವ ಹಂಟರ್ 350 ಯ ಹೊಸ ವರ್ಷನ್ ಮಾರುಕಟ್ಟೆಗೆ ಬರುತ್ತಿದೆ. 350 ಸಿಸಿ ಮತ್ತು ಅದಕ್ಕೂ ಹೆಚ್ಚಿನ ಸಿಸಿ ಬೈಕುಗಳನ್ನಷ್ಟೆ ನಿರ್ಮಿಸಿ ಮಾರಾಟ ಮಾಡುತ್ತಿದ್ದ ರಾಯಲ್ ಎನ್​ಫೀಲ್ಡ್ ಇದೇ ಮೊದಲ ಬಾರಿಗೆ 250 ಸಿಸಿ ಬೈಕು ಬಿಡುಗಡೆ ಮಾಡಲು ಸಜ್ಜಾಗಿದೆ. ಹಂಟರ್ 250 ಬೈಕನ್ನು ಮಾರುಕಟ್ಟೆಗೆ ತರುತ್ತಿದೆ ರಾಯಲ್ ಎನ್​ಫೀಲ್ಡ್.

ಶಾಟ್​ಗನ್ 650

ರಾಯಲ್ ಎನ್​ಫೀಲ್ಡ್​ನ ಶಾಟ್​ಗನ್ 650 ಒಂದು ಅತ್ಯುತ್ತಮ ಬೈಕು. ಆದರೆ ಈ ಬೈಕ್ ಭಾರತಕ್ಕಿಂತಲೂ ಬೇರೆ ರಾಷ್ಟ್ರಗಳಲ್ಲಿಯೇ ಹೆಚ್ಚು ಜನಪ್ರಿಯ. ಆದರೆ ಭಾರತದಲ್ಲಿ ಈ ಬೈಕನ್ನು ಜನಪ್ರಿಯಗೊಳಿಸುವ ಗುರಿ ಹೊಂದಿದ್ದು, ಸಾಕಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ತರಲು ಸಜ್ಜಾಗಿದೆ.

Bike: ಭಾರತದಲ್ಲಿ ಜುಲೈ ತಿಂಗಳು ಅತಿ ಹೆಚ್ಚು ಮಾರಾಟವಾದ ಬೈಕ್ ಯಾವುದು?

ಸ್ಕ್ರ್ಯಾಂಬ್ಲರ್ 650

ಸ್ಕ್ರ್ಯಾಂಬ್ಲರ್ ಬೈಕುಗಳು ವಿಶ್ವದಾದ್ಯಂತ ಬಹಳ ಜನಪ್ರಿಯತೆ ಹೊಂದಿವೆ. ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಭಾರತದಲ್ಲಿ ಹೊಸ ಹವಾ ಎಬ್ಬಿಸಿದೆ. ಇದೀಗ ರಾಯಲ್ ಎನ್​ಫೀಲ್ಡ್ ಸಹ ಸ್ಕ್ರ್ಯಾಂಬ್ಲರ್ ಬೈಕು ಬಿಡುಗಡೆಗೆ ಸಜ್ಜಾಗಿದ್ದು, ಸ್ಕ್ರ್ಯಾಂಬ್ಲರ್ 650 ಬಿಡುಗಡೆ ಮಾಡುತ್ತಿದೆ.

ಎಲೆಕ್ಟ್ರಿಕ್ ಬೈಕ್

ರಾಯಲ್ ಎನ್​ಫೀಲ್ಡ್ ಈವರೆಗೆ ಇಂಧನ ಚಾಲಿತ ಮೋಟರ್​ ಬೈಕ್​ಗಳನ್ನಷ್ಟೆ ಬಿಡುಗಡೆ ಮಾಡಿದೆ. ಆದರೆ ಈಗ ಇತರೆ ಬೈಕ್ ಕಂಪೆನಿಗಳು ಬ್ಯಾಟರಿ ಚಾಲಿತ ಬೈಕುಗಳ ನಿರ್ಮಾಣಕ್ಕೆ ಮುಂದಾಗಿದೆ. ಇದೀಗ ರಾಯಲ್ ಎನ್​ಫೀಲ್ಡ್ ಎಲೆಕ್ಟ್ರಿಕ್ ಬೈಕು ಬಿಡುಗಡೆಗೆ ಮುಂದಾಗಿದೆ.

Exit mobile version