Royal Enfield
ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಒಂದು ದಶಕದಿಂದಲೂ ರಾಯಲ್ ಎನ್’ಫೀಲ್ಡ್ ಹವಾ ಜೋರಾಗಿದೆ. ಆದರೆ ರಾಯಲ್ ಎನ್’ಫೀಲ್ಡ್ 350 ಸಿಸಿ ಮತ್ತು ಅದಕ್ಕಿಂತಲೂ ಮೇಲಿನ ಶಕ್ತಿ, ಸಾಮರ್ಥ್ಯ ಇರುವ ಬೈಕ್’ಗಳನ್ನು ಮಾತ್ರವೇ ನಿರ್ಮಾಣ ಮಾಡುತ್ತಿದೆ. ಈ ಬೈಕುಗಳ ಬೆಲೆ ಪ್ರಾರಂಭ ಆಗುವುದೇ 2 ಲಕ್ಷದಿಂದ. ಭಾರತದಲ್ಲಿ ಬೈಕುಗಳ ಮೇಲೆ 2 ಲಕ್ಷ ಹಾಗೂ ಅದಕ್ಕಿಂತಲೂ ಹೆಚ್ಚು ಹಣ ಖರ್ಚು ಮಾಡುವ ಜನ ಈಗಲೂ ತುಸು ಕಡಿಮೆಯೇ.
ರಾಯಲ್ ಎನ್’ಫೀಲ್ಡ್ ಬೈಕ್ ಖರೀದುವ ಆಸೆ ಆದರೆ ಬಜೆಟ್ ಕಡಿಮೆ ಇರುವವರಿಗಾಗಿ ರಾಯಲ್ ಎನ್’ಫೀಲ್ಡ್ ಹೊಸ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಅದುವೇ ರಾಯಲ್ ಎನ್’ಫೀಲ್ಡ್ 250 ಸಿಸಿ ಬುಲೆಟ್. ಹೌದು ಮೊದಲ ಬಾರಿಗೆ ರಾಯಲ್ ಎನ್’ಫೀಲ್ಡ್ 250 ಸಿಸಿ ಸೆಗ್ಮೆಂಟ್’ಗೆ ಕಾಲಿಡುತ್ತಿದೆ. ರಾಯಲ್ ಎನ್’ಫೀಲ್ಡ್ ನ ಈ ನಿರ್ಣಯ ಬಜಾಜ್, ಟಿವಿಎಸ್ ಮತ್ತು ಹೀರೋ ಕಂಪೆನಿಗಳಿಗೆ ನಡುಕ ಹುಟ್ಟಿಸಿದೆ. ಆದರೆ ಬೈಕ್ ಪ್ರಿಯರಿಗೆ ಖುಷಿ ತಂದಿದೆ
ರಾಯಲ್ ಎನ್’ಫೀಲ್ಡ್ ಬೈಕ್ ಖರೀದಿಸುವ ಆಸೆ ಇದ್ದರೆ ಬಜೆಟ್ ಕಡಿಮೆ ಇದ್ದ ಕಾರಣ ಪಲ್ಸರ್, ಅಥವಾ ಅಪಾಚೆ ಖರೀದಿ ಮಾಡುತ್ತಿದ್ದವರು ಇನ್ನು ಮುಂದೆ 1.35 ಅಥವಾ 1.50 ಲಕ್ಷ ಬೆಲೆಗೆ ರಾಯಲ್ ಎನ್’ಫೀಲ್ಡ್ ಬುಲೆಟ್ ಖರೀದಿ ಮಾಡ ಬಹುದು. ಈಗ ಮಾರುಕಟ್ಟೆಯಲ್ಲಿರುವ ರಾಯಲ್ ಎನ್’ಫೀಲ್ಡ್ ನ ಇತರೆ ಬೈಕುಗಳಿಗಿಂತಲೂ ಹೆಚ್ಚಿನ ಮೈಲೇಜ್ ಅನ್ನು 250 ಸಿಸಿ ಬೈಕ್ ನೀಡಲಿದೆ.
Royal Enfield: ರಾಯಲ್ ಎನ್’ಫೀಲ್ಡ್ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ ಬುಲೆಟ್, ಬೆಲೆ ಎಷ್ಟಿರಲಿದೆ?
250 ಸಿಸಿ ಬೈಕಿನಲ್ಲಿ, ಕೆಲ ಸಣ್ಣ ಪುಟ್ಟ ಡಿಸೈನ್ ಬದಲಾವಣೆ ಮಾಡಲಿದೆಯಂತೆ ರಾಯಲ್ ಎನ್’ಫೀಲ್ಡ್, ಎಂಜಿನ್ ಸಹ ಬದಲಾಗಲಿದೆ. 250 ಸಿಸಿ ಆಗಿದ್ದರು ಒಳ್ಳೆಯ ಟಾರ್ಕ್ ಪವರ್ ನೀಡುವ ನಿರೀಕ್ಷೆ ಇದೆ. ಡ್ಯುಯೆಲ್ ಎಬಿಎಸ್, ಡಿಜಿಟಲ್ ಕ್ರಸ್ಟರ್, ಲಿಕ್ವೀಡ್ ಕೂಲ್ ಎಂಜಿನ್, 17 ಕ್ಕೂ ಹೆಚ್ಚು ಬಿಎಚ್’ಪಿ ಶಕ್ತಿ, 18 ಎನ್’ಎಂ ಟಾರ್ಕ್, 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಈ ಹೊಸ ಬೈಕ್ ಒಳಗೊಳ್ಳಲಿದೆ. ಈ ಬೈಕ್ ನಲ್ಲಿ ಟ್ರಾಕ್ಷನ್ ಕಂಟ್ರೋಲ್, ದೊಡ್ಡ ಟಯರ್’ಗಳು ಸಹ ಲಭ್ಯ ಇರಲಿವೆ. ಈ ಬೈಕ್ 2025 ರ ಮಧ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.