Site icon Samastha News

RR vs CSK: ಧೋನಿ ಮೇಲೆ ಎಲ್ಲರ ಕಣ್ಣು, ಆದರೆ ಆತನ ಕತೆ ಏನು?

RR vs CSK

ಚೆನ್ನೈ ಸೂಪರ್ ಕಿಂಗ್ಸ್​ಗೆ ಐಪಿಎಲ್​ 2025ರ ಆರಂಭದಲ್ಲಿಯೇ ಆಘಾತ ಎದುರಾಗಿದೆ. ಸಾಂಪ್ರದಾಯಿಕ ಎದುರಾಳಿ ಬೆಂಗಳೂರಿನ ಮೇಲೆ ಈ ತಂಡ ಹೋಮ್ ಗ್ರೌಂಡ್ ಚೆಪಾಕ್​​ನಲ್ಲಿ ಹೀನಾಯ ಸೋಲು ಕಂಡಿದೆ. ಅದಕ್ಕಿಂತಲೂ ದೊಡ್ಡ ಹೊಡೆತವೆಂದರೆ ಆ ತಂಡದಲ್ಲಿ ಧೋನಿ ಆಡಿದ ರೀತಿ. ವಿಕೆಟ್​ಗಳು ಉರುಳುತ್ತಲೇ ಸಾಗುತ್ತಿದ್ದರೂ ಸಹ ಧೋನಿ ಬ್ಯಾಟ್ ಹಿಡಿದು ಸ್ಕ್ರೀಜ್​ಗೆ ಬರಲಿಲ್ಲ. ಧೋನಿ ಆಟಕ್ಕೆ ಬಂದಿದ್ದು 9ನೇ ವಿಕೆಟ್​ಗೆ ಈ ಬಗ್ಗೆ ತೀವ್ರ ಟೀಕೆ ಎಲ್ಲೆಡೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೆ ಇದೀಗ ಚೆನ್ನೈ ತಂಡದ ಎರಡನೇ ಪಂದ್ಯ ಇಂದು (ಮಾರ್ಚ್ 30) ರಾಜಸ್ಥಾನದ ವಿರುದ್ಧ ನಡೆಯುತ್ತಿದೆ.

ವಿಶೇಷವೆಂದರೆ ಇದು ಸೋತವರ ನಡುವಿನ ಪಂದ್ಯವಾಗಿದೆ. ರಾಜಸ್ಥಾನ ರಾಯಲ್ಸ್ ತಂಡ ಆಡಿರುವ ಎರಡೂ ಪಂದ್ಯವನ್ನು ಸೋತಿದೆ. ಅದೇ ಸಿಎಸ್​ಕೆ ಆಡಿದ ಒಂದು ಪಂದ್ಯವನ್ನು ಸೋತಿದೆ. ಎರಡೂ ತಂಡಗಳಿಗೆ ಈ ಪಂದ್ಯದಲ್ಲಿ ಗೆಲುವು ಅತ್ಯವಶ್ಯಕವಾಗಿದೆ. ಆರ್​ಸಿಬಿ ಮೇಲೆ ಚೆನ್ನೈ ಆಡಿದ ರೀತಿಗೆ ಅವರ ಅಭಿಮಾನಿಗಳಿಗೇ ಬೇಸರ ಮೂಡಿದ್ದು, ತಂಡದಲ್ಲಿಯೂ ಕೆಲವು ಆಟಗಾರರ ಹುಬ್ಬು ಮೇಲೇರಿರುತ್ತದೆ. ಅದು ಈ ಪಂದ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕಳಂಕ ಹೋಗಲಾಡಿಸಿಕೊಳ್ಳಲು ಈ ಪಂದ್ಯದಲ್ಲಿ ಧೋನಿ ಅಪ್​ ದಿ ಆರ್ಡರ್ ಬಂದರೂ ಅನುಮಾನವಿಲ್ಲ.

ಚೆನ್ನೈ ಮತ್ತು ಆರ್​ಆರ್ ತಂಡಗಳು ಐಪಿಎಲ್​ನಲ್ಲಿ ಹಲವಾರು ಬಾರಿ ಪರಸ್ಪರ ಮುಖಾಮುಖಿ ಎದುರಾಗಿವೆ. ಆರ್​ಆರ್ 13 ಬಾರಿ ಗೆದ್ದಿದೆ, ಚೆನ್ನೈ 16 ಬಾರಿ ಗೆದ್ದಿದೆ. ಆದರೆ 2020ರ ಬಳಿಕ ಚೆನ್ನೈ ಗೆದ್ದಿರುವುದು ಎರಡು ಬಾರಿ ಮಾತ್ರ ಆದರೆ ಆರ್​ಆರ್​ ಗೆದ್ದಿರುವುದು ಆರು ಬಾರಿ. ಪಂದ್ಯ ಅಸ್ಸಾಂನ ಬರ್ಸಾಪರ ಸ್ಟೇಡಿಯಂನಲ್ಲಿ ನಡೆಯಲಿದೆ. ಇದೂ ಸಹ ಹೈ ಸ್ಕೋರ್ ಗೇಮ್ ಆಗಲಿದೆ. ಈ ಪಂದ್ಯದಲ್ಲಿ ಬಹುಷಃ ಸಂಜು ಸ್ಯಾಮ್ಸನ್ ಕ್ಯಾಪ್ಟನ್ ಆಗಿರಲಿಕ್ಕಿಲ್ಲ, ಅವರು ಕೀಪಿಂಗ್ ಸಹ ಮಾಡುವುದಿಲ್ಲ ಎನ್ನಲಾಗುತ್ತಿದೆ. ಸಂಜು ಸ್ಯಾಮ್ಸನ್ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ.

Exit mobile version