Russia
ಪ್ರಧಾನಿ ಮೋದಿ ಮೂರನೇ ಬಾರಿ ಪ್ರಧಾನಿ ಆದ ಬಳಿಕ ರಷ್ಯಾ ಪ್ರವಾಸಕ್ಕೆ ತೆರಳಿದ್ದಾರೆ. ಮೋದಿಯವರ ಈ ರಷ್ಯಾ ಪ್ರವಾಸ ಅತ್ಯಂತ ಮಹತ್ವದ್ದಾಗಿದೆ. ವಿಶೇಷವಾಗಿ ಭದ್ರತೆ ಮತ್ತು ರಟಷ್ಟ್ರೀಯ ಸುರಕ್ಷತೆ ದೃಷ್ಟಿಯಿಂದ ಹಲವು ಮಹತ್ವದ ಒಪ್ಪಂದಗಳು ಭಾರತ ಮತ್ತು ರಷ್ಯಾ ನಡುವೆ ನಡೆಯಲಿವೆ. ಇದರ ನಡುವೆ ರಷ್ಯಾದ ಸೈನ್ಯದಲ್ಲಿ ‘ಜೀತಕ್ಕಿದ್ದ’ ಭಾರತೀಯರಿಗೆ ಮೋದಿ ಬಿಡುಗಡೆ ನೀಡಿದ್ದಾರೆ.
ರಷ್ಯಾದ ಯೋಧರಿಗೆ ಸಹಾಯಕರಾಗಿ ಭಾರತೀಯ ಪ್ರಜೆಗಳನ್ನು ವರ್ಷಗಳಿಂದಲೂ ಬಳಸಿಕೊಳ್ಳಲಾಗುತ್ತಿದೆ. ಕಳೆದ ತಿಂಗಳು ರಷ್ಯಾ ಸೇನೆಯಲ್ಲಿ ಸೇವೆ ಮಾಡುತ್ತಿದ್ದ ಇಬ್ಬರು ಭಾರತೀಯರು ಮೃತಪಟ್ಟಿದ್ದರು. ಇದು ತೀವ್ರ ಚರ್ಚೆಗೆ ಸಹ ಕಾರಣವಾಗಿತ್ತು. ರಷ್ಯಾ, ಭಾರತೀಯರನ್ನು ಸೇನೆಗೆ ಸೇರಿಸಿಕೊಂಡು ತನ್ನ ಯೋಧರ ಗುಲಾಮಗಿರಿಗೆ ನೇಮಿಸಿಕೊಳ್ಳುತ್ತಿದೆ, ಜೀತ ಮಾಡಿಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಪ್ರಧಾನಿ ಮೋದಿ ಮಾತುಕತೆಯಿಂದ ರಷ್ಯಾ ಸೇನೆಯಲ್ಲಿರುವ ಎಲ್ಲ ಭಾರತೀಯ ಪ್ರಜೆಗಳಿಗೆ ಬಿಡುಗಡೆ ದೊರೆಯುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ಪ್ರಮುಖ ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ.
ಭಾರತ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ಗೆ ಸಿಗಲಿರುವ ಸಂಬಳ ಎಷ್ಟು?
ಈ ಹಿಂದೆಯೂ ಸಹ ರಷ್ಯಾದ ಸೇನೆಯಲ್ಲಿರುವ ಕೆಲ ಭಾರತೀಯರು ನಿಧನ ಹೊಂದೊರುವ ವರದಿಗಳು ಪ್ರಕಟವಾಗಿದ್ದವು. ಈ ಸಾವುಗಳನ್ನು ತೀವ್ರವಾಗಿ ಖಂಡಿಸಿದ್ದ ಭಾರತ, ‘ಸೇನೆಗೆ ಭಾರತೀಯರ ನೇಮಕವನ್ನು ಕೂಡಲೆ ನಿಲ್ಲಿಸಬೇಕು’ ಎಂದು ಆಗ್ರಹಿಸಿತ್ತು.
ಇದರ ಜೊತೆಗೆ ರಷ್ಯಾದ ಕಝಾನ್ ಮತ್ತು ಯೆಕತರೀನ್ ಬರ್ಗ್ ಗಳಲ್ಲಿ ಭಾರತವು ಎರಡು ಕಾನ್ಸುಲೇಟ್ ಕಚೇರಿಗಳನ್ನು ತೆರೆಯುವುದಾಗಿ ತಿಳಿಸಿದೆ. ಸ್ವತಃ ಮೋದಿಯರು ಈ ಘೋಷಣೆ ಮಾಡಿದ್ದು, ಇದರಿಂದ ಭವಿಷ್ಯದಲ್ಲಿ ಭಾರತೀಯರ ರಷ್ಯಾ ಪ್ರವಾಸ ಮತ್ತು ವಾಣಿಜ್ಯ ಚಟುವಟಿಕೆಗಳ ಹೆಚ್ಚಳಕ್ಕೆ ಇದು ಪೂರಕವಾಗಲಿದೆ ಎಂದಿದ್ದಾರೆ. ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಮತ್ತು ವ್ಲಾಡುವೋಸ್ಟೋಕ್ ನಗರಗಳಲ್ಲಿ ಭಾರತ ಈಗಾಗಲೇ ಕಾನ್ಸುಲೇಟ್ ಗಳನ್ನು ಹೊಂದಿದೆ.
ರಷ್ಯಾದ ಎರಡು ದಿನದ ಪ್ರವಾಸ ಮುಗಿಸಿರುವ ಪ್ರಧಾನಿ ಮೋದಿ ಅವರು ಅಲ್ಲಿಂದ ಆಸ್ಟ್ರಿಯಾಕ್ಕೆ ತೆರಳಿದ್ದಾರೆ. 40 ವರ್ಷದ ಹಿಂದೆ ಇಂದಿರಾ ಗಾಂಧಿ ಆಸ್ಟ್ರಿಯಾಕ್ಕೆ ಹೋಗಿದ್ದರು. ಅದಾದ ಬಳಿಕ ಆಸ್ಟ್ರೀಯಾಕ್ಕೆ ಹೋಗುತ್ತಿರುವ ಮೊದಲ ಪ್ರಧಾನಿ ಮೋದಿ.