Sandalwood News: ಖ್ಯಾತ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ನಿಧನ, ಆತ್ಮಹತ್ಯೆ ಶಂಕೆ

0
169
Sandalwood News

Sandalwood News

ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಪಕ ಹಾಗೂ ಉದ್ಯಮಿ ಆಗಿದ್ದ ಸೌಂದರ್ಯ ಜಗದೀಶ್ ಅವರು ಇಂದು (ಏಪ್ರಿಲ್ 14) ನಿಧನರಾಗಿದ್ದಾರೆ. ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ‘ಅಪ್ಪು-ಪಪ್ಪು’, ‘ರಾಮಕೃಷ್ಣ’, ‘ಸ್ನೇಹಿತರು’ ಸೇರಿದಂತೆ ಇನ್ನೂ ಕೆಲವು ಕನ್ನಡ ಸಿನಿಮಾಗಳನ್ನು ಸೌಂದರ್ಯ ಜಗದೀಶ್ ನಿರ್ಮಾಣ ಮಾಡಿದ್ದರು. ಜೊತೆಗೆ ಹಲವು ಕನ್ನಡ ಹಾಗೂ ಕೆಲ ಪರಭಾಷೆಗಳನ್ನು ವಿತರಣೆ ಸಹ ಮಾಡಿದ್ದರು. ಉದ್ಯಮಿಯೂ ಆಗಿದ್ದ ಸೌಂದರ್ಯ ಜಗದೀಶ್ ಕೆಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದರು.

ಕೆಲವು ಮೂಲಗಳ ಪ್ರಕಾರ ಸೌಂದರ್ಯ ಜಗದೀಶ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಬ್ಯಾಂಕ್​ನವರು ಸೌಂದರ್ಯ ಜಗದೀಶ್ ಅವರ ಮನೆ ಸಹ ಸೀಜ್ ಮಾಡಿದ್ದರು. ಸಾಲಗಾರರ ಕಾಟ ತಡೆದುಕೊಳ್ಳಲಾಗದೆ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಪೊಲೀಸರ ತನಿಖೆ ಬಳಿಕವಷ್ಟೆ ಹೊರಬೀಳಲಿದೆ.

ಬೆಂಗಳೂರಿನ ಜನಪ್ರಿಯ ಐಶಾರಾಮಿ ಪಬ್ ‘ಜೆಟ್​ಲ್ಯಾಗ್​’ನ ಮಾಲೀಕರು ಆಗಿದ್ದ ಸೌಂದರ್ಯ ಜಗದೀಶ್, ರಿಯಲ್ ಎಸ್ಟೇಟ್ ಉದ್ಯಮವನ್ನೂ ಸಹ ನಡೆಸುತ್ತಿದ್ದರು. ಹಲವು ಕಟ್ಟಡ ನಿರ್ಮಾಣ ಸೇರಿದಂತೆ ಇನ್ನಿತರೆ ಕನ್​ಸ್ಟ್ರಕ್ಷನ್ ಗಳಲ್ಲಿಯೂ ಸಹ ಸೌಂದರ್ಯ ಜಗದೀಶ್ ತಮ್ಮನ್ನು ತೊಡಗಿಸಿಕೊಂಡಿದ್ದರು. ‘ಕಾಟೇರ’ ಸಿನಿಮಾದ ಪಾರ್ಟಿ ಇವರ ಒಡೆತನದ ‘ಜೆಟ್​ಲ್ಯಾಗ್’ನಲ್ಲಿಯೇ ನಡೆದಿತ್ತು. ನಿಯಮ ಬಾಹಿರವಾಗಿ ತಡರಾತ್ರಿ ವರೆಗೆ ಪಾರ್ಟಿ ಮಾಡಿದ್ದಾರೆಂದು ಪೊಲೀಸರು ದರ್ಶನ್, ರಾಕ್​ಲೈನ್ ವೆಂಕಟೇಶ್ ಇನ್ನಿತರರ ಮೇಲೆ ಪ್ರಕರಣ ದಾಖಲಿಸಿದ್ದರು, ಪಬ್ ಮಾಲೀಕ ಸೌಂದರ್ಯ ಜಗದೀಶ್ ಅವರಿಗೂ ನೋಟೀಸ್ ನೀಡಿ ಬಳಿಕ 21 ದಿನಗಳ ಕಾಲ ಅದರ ಪರವಾನಗಿ ರದ್ದು ಮಾಡಲಾಗಿತ್ತು.

ಸಲ್ಮಾನ್ ಖಾನ್ ಮನೆ ಬಳಿ ಗುಂಡಿನ ದಾಳಿ, ಪೊಲೀಸರಿಂದ ತನಿಖೆ

ಈ ಹಿಂದೆ ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಸೌಂದರ್ಯ ಜಗದೀಶ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ಮಾಡಿದ್ದರು. ಆದರೆ ಸೌಂದರ್ಯ ಜಗದೀಶ್​ ಮೇಲೆ ಆರೋಪ ಹೊರಿಸಲಾಗಿರಲಿಲ್ಲ. ಅದಾದ ಬಳಿಕ ಸೌಂದರ್ಯ ಜಗದೀಶ್​ರ ಪುತ್ರ ಸ್ನೇಹಿತ್, ತಮ್ಮ ನೆರೆಮನೆಯ ಕೆಲಸದಾಕೆಯ ಮೇಲೆ ಹಲ್ಲೆ ಮಾಡಿ ಸುದ್ದಿಯಾಗಿದ್ದರು. ಸ್ನೇಹಿತ್ ವಿರುದ್ಧ ಕೆಲಸದಾಕೆ ಹಾಗೂ ನೆರೆಮನೆಯ ಮಹಿಳೆ ದೂರು ಸಹ ದಾಖಲಿಸಿದ್ದರು. ಆ ಬಳಿಕ ಸೌಂದರ್ಯ ಜಗದೀಶ್, ರಾಜಿ ಸಂಧಾನದ ಮೂಲಕ ಮಗನ ಮೇಲೆ ದೂರುದಾರರು ದೂರು ಹಿಂಪಡೆಯುವಂತೆ ಮಾಡಿದ್ದರು. ಸೌಂದರ್ಯ ಜಗದೀಶ್ ಅವರು ಪತ್ನಿ ರೇಖಾ ಜಗದೀಶ್, ಪುತ್ರ ಸ್ನೇಹಿತ್ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

ನಿಮ್ಹಾನ್ಸ್ ಸಂಸ್ಥೆ ಸಲಹೆ ಮೇರೆಗೆ ಕಾರ್ಯ ನಿರ್ವಹಿಸುವ ಈ ಸಹಾಯವಾಣಿಗೆ ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ಸಹಾಯಕವಾಗಿ ನಿಂತಿದೆ. SAHAI ಸಹಾಯವಾಣಿ: 080 – 25497777

LEAVE A REPLY

Please enter your comment!
Please enter your name here