Science: ಹಿಮಾಲಯದಲ್ಲಿ ಪತ್ತೆಯಾಯ್ತು 41 ಸಾವಿರ ವರ್ಷ ಹಳೆಯ ಜೀವಿಗಳು

0
277
Science

Science

ಭಾರತದ ಹಿಮಾಲಯ ಪವರ್ತ ಶ್ರೇಣಿ ಅದ್ಭುತಗಳ ಆಗರ. ಈ ಹಿಮಾಲಯ ಶ್ರೇಣಿಯ ಹಲವಾರು ನಿಗೂಢ ವಿಷಯಗಳನ್ನು ತನ್ನ ಮಡಿಲಲ್ಲಿ ಬಚ್ಚಿಟ್ಟುಕೊಂಡಿದೆ. ಹಿಮಾಲಯ ಪರ್ವತಗಳು ಸಾವಿರಾರು ವರ್ಷಗಳಿಂದಲೂ ಭೂಮಿಯ ಮೇಲಿದೆ. ಇಲ್ಲಿನ ಜೀವರಾಶಿ ಭೂಮಿಯ ಇತರೆ ಭಾಗದ ಜೀವರಾಶಿಗಿಂತಲೂ ಬಹಳ ಭಿನ್ನ. ಭಾರತ ಮಾತ್ರವಲ್ಲದೆ ಚೀನಾದ ಪುರಾಣಗಳಲ್ಲಿಯೂ ಹಿಮಾಲಯಕ್ಕೆ ವಿಶೇಷ ಸ್ಥಾನಮಾನವಿದೆ. ಗಂಗಾ, ಸರಸ್ವತಿ, ಬ್ರಹ್ಮಪುತ್ರ ಇನ್ನೂ ಹಲವು ನದಿಗಳ ಉಗಮಸ್ಥಾನವಾಗಿರುವ ಹಿಮಾಲಯ ಸಾವಿರಾರು ಜೀವರಾಶಿಗಳ ಆಶ್ರಯ ತಾಣವೂ ಹೌದು. ಇದೀಗ ವಿಜ್ಞಾನಿಗಳು ಸುಮಾರು 41 ವರ್ಷ ಹಳೆಯ ಜೀವರಾಶಿಯನ್ನು ಹಿಮಾಲಯದಲ್ಲಿ ಪತ್ತೆ ಮಾಡಿದ್ದಾರೆ.

ಟಿಬೆಟಿನ ಪ್ಲಾಟಿಯೂದ ಗುಲಿಯಾ ಗ್ಲೇಷಿಯರ್ ನಲ್ಲಿ ಹಿಮದ ಕೊರಚಲುಗಳಲ್ಲಿ ಸಾಂದ್ರಿತಗೊಂಡಿರುವ ಡಿಎನ್​ಎಗಳನ್ನು ವಿಜ್ಞಾನಿಗಳು ಹುಡುಕಿ ತೆಗೆದಿದ್ದು, ಈ ಡಿಎನ್​ಎಗಳು 41 ಸಾವಿರ ವರ್ಷದ ಹಿಂದಿನ ವೈರಾಣುಗಳದ್ದು ಎಂದಿದ್ದಾರೆ. 1700 ವಿವಿಧ ಬಗೆಯ ವೈರಾಣುಗಳ ಡಿಎನ್​ಎಗಳು ಹಿಮದಲ್ಲಿ ಸಿಲುಕಿಕೊಂಡು ಮೂಲ ರೂಪದಲ್ಲಿಯೇ ಸಂಸ್ಕರಣಗೊಂಡಿವೆ. 41 ಸಾವಿರ ವರ್ಷಗಳಾಗಿದ್ದರೂ ಸಹ ಡಿಎನ್​ಎಗಳು ಹಾಳಾಗಿಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ವೈರಾಣುಗಳ ಪತ್ತೆ ಅತ್ಯಂತ ಮಹತ್ವದ ಸಂಶೋಧನೆ ಎನಿಸಿಕೊಂಡಿದೆ. ಇದರ ಮೂಲಕ 41 ಸಾವಿರ ವರ್ಷದ ಹಿಂದೆ ವೈರಾಣುಗಳು ಹೇಗಿದ್ದವು, ಅವು ಕಾಲಾಂತರದಲ್ಲಿ ಹೇಗೆ ಬದಲಾವಣೆಗೊಂಡವು ಎಂಬನ್ನು ಇದರಿಂದ ಅಧ್ಯಯನ ಮಾಡಬಹುದಾಗಿದೆ. ಈ ಬದಲಾವಣೆ ಆಧರಿಸಿ, ಈಗಿರುವ ವೈರಾಣುಗಳು ಮುಂದಿನ ವರ್ಷಗಳಲ್ಲಿ ಹೇಗೆ ಬದಲಾವಣೆ ಆಗಬಹುದೆಂದು ಸಹ ಅಂದಾಜು ಮಾಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

Dengue: ಡೆಂಘಿಗೆ ಕಂಡು ಹಿಡಿಯಲಾಗಿದೆ ಲಸಿಕೆ, ಆದರೆ ಸಾಮಾನ್ಯರಿಗೆ ಸಿಗುವುದು ಯಾವಾಗ?

ಈಗ ವೈರಾಣುಗಳು ಪತ್ತೆಯಾಗಿರುವ ಹಿಮದ ಗ್ಲೇಷಿಯರ್​ಗಳು ಸಹ ಬಹಳ ಹಳೆಯವಾಗಿದ್ದು, ಇವು ಎಲ್ಲಿಂದ ಇಲ್ಲಿಗೆ ಬಂದಿವೆ ಎಂಬುದನ್ನು ಸಹ ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ. ಈ ಗ್ಲೇಷಿಯರ್​ಗಳು ಅಂಟಾರ್ಟಿಕಾದಿಂದ ಬಂದಿರಬಹುದು ಅಥವಾ ಹಿಂದೆ ಯಾವಾಗಲೋ ಹಿಮದಿಂದ ಕೂಡಿದ್ದ ಮಧ್ಯ ಪ್ರಾಚ್ಯ ದೇಶಗಳಿಂದಲೂ ಬಂದಿರಬಹುದು ಎಂದು ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಅಸಲಿಗೆ 2015 ರಲ್ಲಿಯೇ ಈ ವೈರಾಣುಗಳನ್ನು ಪತ್ತೆ ಮಾಡಲಾಗಿತ್ತು. ಆದರೆ ಇವುಗಳ ವಿಸ್ತಾರದ ಅಧ್ಯಯನದ ಬಳಿಕ ಇತ್ತೀಚೆಗಷ್ಟೆ ಈ ಬಗ್ಗೆ ವರದಿ ಪ್ರಕಟಿಸಲಾಗಿದೆ.

LEAVE A REPLY

Please enter your comment!
Please enter your name here