Weekly Horoscope
ಸೆಪ್ಟೆಂಬರ್ ತಿಂಗಳ ಕೊನೆಯ ವಾರ ಆರಂಭವಾಗಿದೆ. ಸೆಪ್ಟೆಂಬರ್ 23 ರಿಂದ ಸೆಪ್ಟೆಂಬರ್ 29 ಈ ತಿಂಗಳ ಮೂರನೇ ವಾರ ಇರಲಿದೆ. ಈ ವಾರದಲ್ಲಿ ಕೆಲ ಗ್ರಹಗಳ ಚಲನೆ ಆಗಲಿದೆ. ಹಾಗಾಗಿ ಕೆಲವು ರಾಶಿಗಳ ಮೇಲೆ ಪ್ರಭಾವ ಉಂಟಾಗಲಿದ್ದು, ಕೆಲವು ರಾಶಿಗಳಿಗೆ ಶುಭ ಕೆಲವರಿಗೆ ಅಶುಭ ಫಲ ಉಂಟಾಗಲಿದೆ.
ಮೇಷ ರಾಶಿ
ಮೇಷ ರಾಶಿಗೆ ಈ ವಾರ ಶುಭವಿದೆ. ಮಾಡಿದ ಕೆಲಸಕ್ಕೆ ಒಳ್ಳೆಯ ಪ್ರತಿಫಲ ಸಿಗಲಿದೆ. ಕುಟುಂಬದ ಬಗ್ಗೆ, ಪತ್ನಿ/ಪತಿಯ ಬಗ್ಗೆ ಪ್ರೀತಿ ಹೆಚ್ಚಲಿದೆ. ಇಷ್ಟದ ಕೆಲವರು ನಿಮ್ಮ ಮನೆಗೆ ಬರಲಿದ್ದಾರೆ. ಕೆಲವರ ಬಗ್ಗೆ ನಿಮ್ಮ ಅಭಿಪ್ರಾಯ ಬದಲಾಗಲಿದೆ. ನಿಮ್ಮ ಅಧಿಕಾರಿಯುತ ಮಾತು ಹಲವೆಡೆ ನಡೆಯಲಿದೆ. ನೌಕರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಗೌರವ ಪ್ರಾಪ್ತಿ ಆಗಲಿದೆ.
ವೃಷಭ ರಾಶಿ
ಈ ವಾರ ನಿಮಗೆ ಮಿಶ್ರಫಲ ಇರಲಿದೆ. ನಿಮ್ಮ ಬೆನ್ನಿಗೆ ಚೂರಿ ಹಾಕುವವರು ಹುಟ್ಟಿಕೊಳ್ಳುವರು. ಮಾತು ಆಡಬೇಕಾದರೆ ಜಾಗೃತೆ, ಸ್ನೇಹಿತರನ್ನು ಶತ್ರುಗಳನ್ನಾಗಿ ಮಾಡಿಕೊಳ್ಳಬೇಡಿ. ಎಲ್ಲದರಲ್ಲೂ ತಾಳ್ಮೆ ಇರಲಿ. ಯಾವ ವಿಷಯದ ಬಗೆಗೂ ನಿಮಗೆ ಸಮಾಧಾನ ಇರುವುದಿಲ್ಲ. ಬರಬೇಕಾಗಿರುವ ಆದಾಯಕ್ಕೆ ತಡೆ ಬೀಳಲಿದೆ. ಓದು, ಕೆಲಸಗಳಲ್ಲಿ ಆಸಕ್ತಿ ಕಡಿಮೆ ಆಗಲಿದೆ.
ಮಿಥುನ ರಾಶಿ
ಮಿಥುನ ರಾಶಿಗೆ ಈ ವಾರ ಮಿಶ್ರ ಫಲವಿದೆ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಸಂಗಾತಿ, ಮಕ್ಕಳ ಬಗ್ಗೆ ಸಿಹಿ ಸುದ್ದಿ ಸಿಗಲಿದೆ. ವಿದೇಶಕ್ಕೆ ಹೋಗಬೇಕು ಎಂದುಕೊಂಡವರಿಗೆ ಇದು ಸಕಾಲ. ಕೆಲವು ವಿಷಯದಲ್ಲಿ ಸೋಮಾರಿತನ ಕಾಡಲಿದೆ. ಅದನ್ನು ದೂರಮಾಡಿಕೊಳ್ಳಿ. ಕೆಲವು ಅನಿರೀಕ್ಷಿತ ಅಪಘಾತ ನಡೆಯಬಹುದು ಎಚ್ಚರ ಇರಲಿ. ಉತ್ತಮರ ಆಶೀರ್ವಾದ ಸಿಗಲಿದೆ.
ಕರ್ಕಾಟಕ ರಾಶಿ
ಕರ್ನಾಟಕ ರಾಶಿಯವರಿಗೆ ಈ ವಾರ ಶುಭ ಸುದ್ದಿಗಳು ಸಿಗಲಿವೆ. ಅನಿರೀಕ್ಷಿತ ಆದಾಯ ಬರಲಿದೆ. ಅದರ ಜೊತೆಗೆ ಹತ್ತಿರದವರೊಟ್ಟಿಗೆ ಕಲಹಗಳೂ ನಡೆಯಲಿವೆ. ನಿಮ್ಮ ಅಹಂಕಾರ ಪ್ರವೃತ್ತಿಯಿಂದ ನಿಮಗೆ ಸಮಸ್ಯೆ ಆಗಲಿದೆ. ಕೆಟ್ಟದು-ಒಳಿತು ಒಟ್ಟೊಟ್ಟಿಗೆ ನಡೆಯಲಿವೆ. ಕುಟುಂಬದಲ್ಲಿ ನಿಮ್ಮ ಬಗ್ಗೆ ಅಸಮಾಧಾನ ಇರಲಿದೆ. ಕೆಲವು ಅನಿರೀಕ್ಷಿತ ಖರ್ಚು ಸಹ ನಡೆಯಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಮಿಶ್ರಫಲ ಇರಲಿದೆ. ಹಿರಿಯರೊಡನೆ ತಗ್ಗಿ-ಬಗ್ಗಿ ನಡೆಯಿರಿ. ಮದುವೆ ಮಾತುಕತೆ ಮುಂದುವರೆಯಲಿದೆ. ಸೂಕ್ತ ಸಂಗಾತಿಯೇ ಸಿಗಲಿದ್ದಾರೆ. ಅನವಶ್ಯಕವಾಗಿ ಸಿಟ್ಟು ಮಾಡಿಕೊಳ್ಳಬೇಡಿ. ಅವಮಾನವಾದರೂ ತಾಳ್ಮೆಯಿಂದ ಇರಿ. ಕೆಲಸದ ಸ್ಥಳದಲ್ಲಿ ಬೇಸರ ಆಗಲಿದೆ. ನಿಮಗೆ ಸಿಗಬೇಕಾದ ಗೌರವ ಸಿಗುವುದಿಲ್ಲ. ಆದರೆ ಮಾಡಿದ ಕೆಲಸಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಗೆ ಈ ವಾರ ಶುಭವಿದೆ. ಅನಾರೋಗ್ಯ ದೂರಾಗಲಿದೆ. ಮಾನಸಿಕವಾಗಿಯೂ ಸಂತುಷ್ಟಿ ಸಿಗಲಿದೆ. ಮನಸ್ಸಿಗೆ ಆಹ್ಲಾದಕರ ಸಂಗತಿಗಳು ನಡೆಯಲಿದೆ. ಬಹುದಿನದ ಕನಸು ನನಸಾಗಲಿದೆ. ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಹೊಸ ಯೋಜನೆಗಳನ್ನು ಪ್ರಾರಂಭ ಮಾಡಲಿದ್ದೀರಿ, ನಿಮಗೆ ಕೆಲವರ ಸಹಕಾರವೂ ಸಹ ಸಿಗಲಿದೆ. ಕೆಲವು ಉತ್ತಮರಿಂದ ಸನ್ಮಾನ, ಗೌರವಗಳು ಸಹ ನಿಮಗೆ ಸಿಗಲಿದೆ. ದೇವರ ಆರಾಧನೆ ಬಿಡಬೇಡಿ.
ತುಲಾ ರಾಶಿ
ತುಲಾ ರಾಶಿಗೆ ಈ ವಾರ ಅಶುಭ ಫಲವಿದೆ. ಮಾಡಿದ ಕೆಲಕ್ಕೆ ಲಾಭ ಸಿಗದು, ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಮೇಲೆ ನಂಬಿಕೆ ಕಳೆದುಕೊಳ್ಳುವಿರಿ. ಕೆಟ್ಟ ಆಲೋಚನೆಗಳು ಬರಲಿವೆ. ನಿಮ್ಮ ಹತ್ತಿರದವರಿಗೂ ಅವಮಾನ ಆಗಲಿದೆ. ಹಿತಶತ್ರುಗಳಿಂದ ಹಿನ್ನಡೆ ಆಗಲಿದೆ. ಕೊಟ್ಟ ಸಾಲ ಮರಳಿ ಬಾರದು, ಹೊಸ ಸಾಲ ಮಾಡು ಮುಂದಾಗುವಿರಿ. ಯಾರಿಗೂ ಹಣ ಕೊಡಬೇಡಿ, ಹಣ ಕೊಟ್ಟು ಸಮಸ್ಯೆಗೆ ಸಿಲುಕಲಿದ್ದೀರಿ. ಪೋಷಕರೊಡನೆ ಕಲಹ ಏರ್ಪಡಲಿದೆ.
ವೃಶ್ಚಿಕ ರಾಶಿ
ಅಂದುಕೊಂಡ ಕೆಲಸಗಳು ಆಗಲಿದೆ. ಮದುವೆ ಮಾತುಗಳಲ್ಲಿ ಸಣ್ಣ ಹಿನ್ನಡೆ ಆಗಲಿದೆ. ಕೃಷಿಕರಿಗೆ ತುಸು ಲಾಭವಿದೆ. ಭೂ ವ್ಯಾಪಾರಿಗಳಿಗೂ ಉತ್ತಮ ಸಮಯವಿದು. ವಿದೇಶಕ್ಕೆ ಹೋಗುವ ಪ್ರಯತ್ನ ಮಾಡುವಿರಿ, ಕುಟುಂಬದೊಂದಿಗೆ ಸಮಯ ಕಳೆಯುವಿರಿ, ಉತ್ತಮ ಆಲೋಚನೆಗಳು ಬರಲಿವೆ. ಪೋಷಕರಿಂದ ನೆರವು ಸಿಗಲಿದೆ. ಕುಟುಂಬದ ಮೇಲೆ ಪ್ರೀತಿ ಹೆಚ್ಚಾಗಲಿದೆ.
ಧನು ರಾಶಿ
ಮಾನಸಿಕ ಸಮತೋಲನ ಕಳೆದುಕೊಳ್ಳುವಿರಿ. ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಮೂಡಲಿವೆ. ಕುಟುಂಬದವರ ಬಗ್ಗೆ ಬೇಸರ ಮೂಡಲಿದೆ. ಕೆಲವರ ಬಗ್ಗೆ ಅನುಮಾನ ಮೂಡಲಿದೆ. ಕುಟುಂಬದಲ್ಲಿ ನಿಮಗೆ ಪ್ರಾಮುಖ್ಯತೆ ಸಿಗದು. ಸಹನೆ ಇರಲಿ, ತಾಳ್ಮೆ ಇರಲಿ. ಸಣ್ಣ ಪುಟ್ಟ ಆದಾಯ ನಿಮಗೆ ಬರಲಿದೆ. ಕೆಲಸದಲ್ಲಿ ಸಮಚಿತ್ತ ಇರಲಿ. ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ಶ್ರಮಪಟ್ಟು ಕೆಲಸ ಮಾಡಿ.
ಮಕರ ರಾಶಿ
ಕುಟುಂಬ, ಗೆಳೆಯರ ಮುಂದೆ ನಮಗೆ ಗೌರವ, ಪ್ರಶಂಸೆ ಸಿಗಲಿದೆ. ಕಲಾವಿದರಿಗೆ ಉತ್ತಮ ಸಮಯ ಇದು. ಕೆಲವು ಹೊಸ ಕೆಲಸ ಸಿಗಲಿದೆ. ಕಲಾವಿದರು, ಕುಶಲಕರ್ಮಿಗಳು ನಿಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ಕುಟುಂಬಕ್ಕೆ ಸಂಬಂಧಿಸಿದ ಕೆಲ ವ್ಯವಹಾರಗಳಲ್ಲಿ ಭಾಗಿ ಆಗಲಿದ್ದೀರಿ. ಅದನ್ನು ಜಾಗೃತೆಯಾಗಿ ನಿರ್ವಹಿಸಿ.
ಕುಂಭ ರಾಶಿ
ಕುಂಭ ರಾಶಿಗೆ ಈ ವಾರ ಮಿಶ್ರಫಲವಿದೆ. ಕುಟುಂಬದ ಬಗ್ಗೆ ಅಸಮಾಧಾನ ಮೂಡಲಿದೆ. ಕುಟುಂಬದವರಿಗೆ ಉತ್ತಮವಾದುದನ್ನು ಏನನನ್ನಾದರೂ ಮಾಡುವ ನಿರ್ಧಾರ ಮಾಡಲಿದ್ದೀರಿ ಆದರೆ ಅದು ಸಾಧ್ಯವಾಗದು. ದೈಹಿಕ ಆರೋಗ್ಯ ಉತ್ತಮಗೊಳ್ಳಲಿದೆ. ಆದರೆ ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಿ. ದೃಢವಾದ ನಿರ್ಧಾರಗಳನ್ನು ಮಾಡಿ. ಉದ್ಯೋಗದಲ್ಲಿ ಪ್ರಗತಿ ಸಾಧ್ಯವಾಗಲಿದೆ.
Weekly Horoscope: ಸೆಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ಯಾವ ರಾಶಿಯವರಿಗೆ ಅದೃಷ್ಟ
ಮೀನ ರಾಶಿ
ಮೀನ ರಾಶಿಗೆ ಮಿಶ್ರಫಲ ಇರಲಿದೆ. ಸಹೋದರನ ಜೊತೆ ಕಲಹ ಉಂಟಾಗಲಿದೆ. ನೆಮ್ಮದಿ ಇರದು. ಪೋಷಕರ ಆರೋಗ್ಯದಲ್ಲಿ ವ್ಯತ್ಯಯ ಆಗಲಿದೆ. ಕೆಲವು ಅನವಶ್ಯಕ ಖರ್ಚುಗಳು ಬರಲಿವೆ. ಪತಿ-ಪತ್ನಿ ನಡುವೆ ಜಗಳ ಮೂಡಲಿದೆ. ಆದರೆ ಬೇಗನೆ ಸರಿ ಹೋಗಲಿದೆ. ಕೆಲವರ ಮಾತುಗಳು ಕಿರಿ-ಕಿರಿ ಮೂಡಿಸಲಿವೆ. ಆದರೆ ತಾಳ್ಮೆ ಇರಲಿ.