Site icon Samastha News

Service Tax: ಹೈಕೋರ್ಟ್ ಆದೇಶ: ತಗ್ಗಲಿದೆ ಓಲಾ-ಊಬರ್ ದರ

Service Tax

Service Tax

ಓಲಾ-ಊಬರ್ ಗಳು ಬೆಂಗಳೂರಿನಲ್ಲಿ ಸಂಚಾರವನ್ನಯ ಸುಗಮವಾಗಿಸಿವೆ ಆದರೆ ಬೆಲೆ ಮಾತ್ರ ದುಬಾರಿ. ಓಲಾ-ಊಬರ್ ಗಳು ಸವಾರಿಯ ಶುಲ್ಕದ ಜೊತೆಗೆ ಹೆಚ್ಚಿನ ಸೇವಾ ಶುಲ್ಕವನ್ನು ಹಾಕುತ್ತಿದ್ದವು ಇದು ಪ್ರಯಾಣಿಕನಿಗೆ ಇನ್ನಷ್ಟು ಹೊರೆ ಆಗಿತ್ತು, ಆದರೆ ಇದೀಗ ಕರ್ನಾಟಕ ಹೈಕೋರ್ಟ್ ಮಾಡಿರುವ ಆದೇಶದಿಂದಾಗಿ ಓಲಾ-ಊಬರ್ ಗಳು 5% ಗಿಂತಲೂ ಹೆಚ್ಚಿನ ಸೇವಾ ಶುಲ್ಕವನ್ನು ಪ್ರಯಾಣಿಕರ ಮೇಲೆ ವಿಧಿಸುವಂತಿಲ್ಲ. ಇದರಿಂದಾಗಿ ಪ್ರಯಾಣಿಕರಿಗೆ ಹೊರೆ ಕಡಿಮೆ ಆಗಲಿದೆ.

2022 ರಲ್ಲಿ ಎಲ್ಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದ ಕರ್ನಾಟಕ ರಾಜ್ಯ ಸರ್ಕಾರ ಇನ್ನು ಮುಂದೆ ಎಲ್ಲ ಖಾಸಗಿ ವಾಹನಗಳು 5 ಮಾತ್ರವೇ ಸೇವ ಶುಲ್ಕ ವಿಧಿಸಬೇಕು ಎಂದಿತ್ತು. ರಾಜ್ಯ ಸರ್ಕಾರದ ಈ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಎಎನ್ ಐ ಟೆಕ್ನಾಲಜೀಸ್ ಮತ್ತು ಊಬರ್ ಇಂಡಿಯಾ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋಪಾಲ್ ರಾಜ್ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದು ಓಲಾ-ಊಬರ್ ಗಳ ಅರ್ಜಿಯನ್ನು ವಜಾ ಮಾಡಿದೆ.

ವೇಗವಾಗಿ ಹರಡುತ್ತಿರುವ ಡೆಂಘಿಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ, ಈ ಕ್ರಮಗಳನ್ನು ಅನುಸರಿಸಿ

ಓಲಾ, ಊಬರ್ ಇತರೆ ಕೆಲವು ಅಗ್ರಿಗೇಟರ್ ಗಳು ಪ್ರಯಾಣಿಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿವೆ ಎಂಬ ದೂರುಗಳು ಕೇಳಿ ಬಂದ ಕಾರಣ, 2022 ರ ನವೆಂಬರ್ ತಿಂಗಳಲ್ಲಿ ಸೇವಾ ಶುಲ್ಕವು 5% ದಾಟಬಾರದೆಂಬ ಆದೇಶ ಜಾರಿ ಮಾಡಿತ್ತು. ಓಲಾ, ಊಬರ್ ಗಳ ದರ ನಿಯಂತ್ರಣಕ್ಕಾಗಿ ಈ ಆದೇಶ ಹೊರಡಿಸಲಾಗಿತ್ತು.

Exit mobile version