Shubman Gill
ಯುವ ಕ್ರಿಕೆಟಿಗ ಶುಭ್ ಮನ್ ಗಿಲ್ ಇತ್ತೀಚೆಗಿನ ದಿನಗಳಲ್ಲಿ ಕ್ರಿಕೆಟ್ ಮೈದಾನಕ್ಕಿಂತಲೂ ಬೇರೆ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಗಿಲ್, ಈ ಮೊದಲು ತಮ್ಮ ಪ್ರೀತಿ, ಪ್ರೇಮ, ಪ್ರಣಯದ ಕಾರಣಕ್ಕೆ ಸುದ್ದಿಯಲ್ಲಿದ್ದರು. ಮೊದಲಿಗೆ ಬಾಲಿವುಡ್ ನಟಿಯ ಜೊತೆ ಅವರ ಚಿತ್ರ ಹರಿದಾಡಿತ್ತು, ಬಳಿಕ ಸಾರಾ ತೆಂಡೂಲ್ಕರ್ ಜೊತೆ ಅವರ ಹೆಸರು ಕೇಳಿ ಬಂತು. ಆದರೆ ಈಗ 450 ಕೋಟಿ ವಂಚನೆ ಪ್ರಕರಣದಲ್ಲಿ ಗಿಲ್ ಹೆಸರು ಕೇಳಿ ಬರುತ್ತಿದೆ.
ಗುಜರಾತ್ ಸಿಐಡಿ, ಪೋಂಜಿ ಹಗರಣ (ಹೂಡಿಕೆಗೆ ಸಂಬಂಧಿಸಿದ ವಂಚನೆ)ದ ತನಿಖೆ ನಡೆಸುತ್ತಿದ್ದು, ಇದೇ ಹಗರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಶುಭ್’ಮನ್ ಗಿಲ್ ಸೇರಿದಂತೆ ಇನ್ನೂ ಮೂವರು ಕ್ರಿಕೆಟಿಗರಿಗೆ ನೊಟೀಸ್ ಜಾರಿ ಮಾಡಿದೆ. ರಾಹುಟ್ ತಿವಾಟಿಯಾ, ಮೋಹಿತ್ ಶರ್ಮಾ, ಸಾಯಿ ಸುಬ್ರಹ್ಮಣ್ಯನ್ ಅವರಿಗೂ ನೊಟೀಸ್ ಜಾರಿ ಮಾಡಲಾಗಿದೆ. ಈ ವಂಚನೆ ಹಗರಣದ ಮಾಸ್ಟರ್ ಮೈಂಡ್ ಭೂಪೇಂದ್ರ ಸಿಂಹ ಜಾಲಾ ಅನ್ನು ಗುಜರಾತ್ ಸಿಐಡಿ ಬಂಧಿಸಿದ್ದು, ಆತ ನೀಡಿದ ಹೇಳಿಕೆ ಮೇರೆಗೆ ಗಿಲ್ ಹಾಗೂ ಇತರೆ ಕ್ರಿಕೆಟಿಗರಿಗೆ ನೊಟೀಸ್ ನೀಡಲಾಗಿದೆ.
ಗಿಲ್, ಗುಜರಾತ್ ಟೈಟನ್ಸ್’ನ ನಾಯಕ ಆಗಿದ್ದು, ಭೂಪೇಂದ್ರ ಸಿಂಹ ಜಾಲಾನ ಹೂಡಿಕೆ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಈಗ ಸಮನ್ಸ್ ನೀಡಲಾಗಿರುವ ಇತರೆ ಕ್ರಿಕೆಟಿಗರುಗಳೂ ಸಹ ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡಿದ್ದು, ಭೂಪೇಂದ್ರ ಸಿಂಹ ಜಾಲಾನ ವಂಚನೆಗೆ ಪರೋಕ್ಷ ಹಣ ಒದಗಿಸಿದ್ದಾರೆ ಎನ್ನಲಾಗಿದೆ. ಗಿಲ್, ಬರೋಬ್ಬರಿ 1.92 ಕೋಟಿ ರೂಪಾಯಿ ಹಣವನ್ನು ವಂಚಕನ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದರಂತೆ.
ಎಫ್’ಜೆಡ್ ಫೈನ್ಯಾನ್ಷಿಯಲ್ ಸರ್ವೀಸ್ ಕಂಪೆನಿ ಮಾಲೀಕನಾದ ಗುಜರಾತ್’ನ ಭೂಪೇಂದ್ರ ಸಿಂಹ ಜಾಲಾ 2020 ರಿಂದ 2024 ರ ವರೆಗೆ 11 ಸಾವಿರ ಹೂಡಿಕೆದಾರರಿಂದ ಬರೋಬ್ಬರಿ 450 ಕೋಟಿ ರೂಪಾಯಿ ಹಣ ಪಡೆದಿದ್ದು, ಹಣವನ್ನು ಮರಳಿಸಿಲ್ಲ. ಹೆಚ್ಚು ಬಡ್ಡಿ ನೀಡುವ ಭರವಸೆ ನೀಡಿ ಈ ವ್ಯಕ್ತಿ 450 ಕೋಟಿ ಹಣ ಪಡೆದುಕೊಂಡಿದ್ದ. ವರ್ಷಕ್ಕೆ 36% ಹಣ ಬಡ್ಡಿ ನೀಡುವ ಭರವಸೆ ಬೀಡಿದ್ದ ಈ ಭೂಪೇಂದ್ರ ಸಿಂಹ ಜಾಲಾ.
Virat Kohli: ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರಿನ ಪಬ್ ಮೇಲೆ ಎಫ್ ಐಆರ್
ಹೂಡಿಕೆದಾರರಿಗೆ ನಂಬಿಕೆ ಮೂಡಿಸಲು ನಕಲಿ ಗ್ರಾಹಕರನ್ನು ಸಹ ಇರಿಸಿಕೊಂಡಿದ್ದ ಈತ ನೂರಾರು ಕೋಟಿ ಹಣ ಖರ್ಚು ನಾಡಿ ಐಶಾರಾಮಿ ಜೀವನ ನಡೆಸುತ್ತಿದ್ದ. ಇದೀಗ ಗುಜರಾತ್ ಸಿಐಡಿ ಭೂಪೇಂದ್ರ ಸಿಂಹ ಜಾಲಾ ಅನ್ನು ಬಂಧಿಸಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಇನ್ನೂ ಏಳು ಆರೋಪಿಗಳ ಬಂಧನ ಮಾಡಲಾಗಿದೆ. ಶುಭ್ ಮನ್ ಗಿಲ್ ಸೇರಿದಂತೆ ಅನೇಕ ದೊಡ್ಡ ವ್ಯಕ್ತಿಗಳಿಗೆ ಸಿನಿಮಾ ಸೆಲೆಬ್ರಿಟಿಗಳಿಗೂ ಈ ವ್ಯಕ್ತಿ ಟೋಪಿ ಹಾಕಿದ್ದಾನೆ.