Smartphones
ನೆಟ್’ವರ್ಕ್ ಟವರ್’ಗಳನ್ನು ಪ್ರತಿ ಊರುಗಳಲ್ಲಿಯೂ ನೋಡೇ ಇರುತ್ತಿರಿ. ಉದ್ದನೆಯ ಈ ಸ್ಟ್ರಕ್ಚರ್
, ಸ್ಯಾಟಲೈಟ್’ನಿಂದ ಸಿಗ್ನಲ್’ಗಳನ್ನು ಸ್ವೀಕರಿಸಿ ನಿಗದಿತ ಪ್ರದೇಶದ ಒಳಗೆ ಇರುವ ಮೊಬೈಲ್’ಗಳಿಗೆ ವಿತರಣೆ ಮಾಡುತ್ತದೆ. ಮೊಬೈಲ್’ಗಳಲ್ಲಿ ನೆಟ್’ವರ್ಕ್ ಬರಲು ಈ ಟವರ್’ಗಳು ಅತ್ಯಂತ ಅವಶ್ಯಕ. ಮೊಬೈಲ್ ಮೂಲಕ ನಾವು ಇಂದು ಮಾಡುತ್ತಿರುವ ಕರೆ, ಇಂಟರ್ನೆಟ್ ಬ್ರೌಸಿಂಗ್’ಗಳಿಗೆ ಈ ಮೊಬೈಲ್ ಟವರ್’ಗಳೇ ಪ್ರಮುಖ ಕಾರಣ. ಆದರೆ ಇನ್ನು ಮುಂದೆ ಈ ಟವರ್ ಗಳು ಇರುವುದಿಲ್ಲ.
ಹೌದು, ಇನ್ನು ಮುಂದೆ ಈ ಟವರ್’ಗಳು ಇರುವುದಿಲ್ಲ. ಅಂತರಿಕ್ಷದಲ್ಲಿ ಹಾರಿ ಬಿಡಲಾಗಿರುವ ಸ್ಯಾಟಲೈಟ್ ಮೂಲಕ ಸಿಗ್ನಲ್ ಅನ್ನು ತೆಗೆದುಕೊಳ್ಳುವುದು ಟವರ್’ಗಳ ಮೂಲ ಕೆಲಸ ಆದರೆ ಇನ್ನು ಮುಂದೆ ಮೊಬೈಲ್’ಗಳೇ ಈ ಕಾರ್ಯವನ್ನು ಮಾಡಲಿವೆ. ಸ್ಯಾಟಲೈಟ್ ಮೂಲಕ ನೇರವಾಗಿ ಸಿಗ್ನಲ್ ಅನ್ನು ಸ್ವೀಕರಿಸುವ ತಂತ್ರಜ್ಞಾನದ ಮೊಬೈಲ್’ಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಆದಷ್ಟು ಶೀಘ್ರವೇ ಈ ಮೋಬೈಲ್’ಗಳು ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ.
ಈಗಾಗಲೇ ಎಲಾನ್ ಮಸ್ಕ್’ರ ಸ್ಟಾರ್ ಲಿಂಕ್ ಸಂಸ್ಥೆ, ಸಣ್ಣ ಡಿವೈಸ್ ನೆರವಿನಿಂದ ನೇರವಾಗಿ ಸ್ಯಾಟಲೈಟ್ ನಿಂದ ಸಿಗ್ನಲ್’ಗಳನ್ನು ಸ್ವೀಕರಿಸುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದು, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಇದು ಯಶಸ್ವಿಯಾಗಿದೆ. ಭಾರತದಲ್ಲಿಯೂ ಈ ತಂತ್ರಜ್ಞಾನ ಬರಲಿದ್ದು, ದೊಡ್ಡ ನೆಟ್’ವರ್ಕ್ ಪ್ರೊವೈಡರ್ ಸಂಸ್ಥೆಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿವೆ.
Nikhil Kumaraswamy: ನನ್ನ ಮಗ ನಿಖಿಲ್ ಗೆದ್ದಿದ್ದಾನೆ: ಅನಿತಾ ಕುಮಾರಸ್ವಾಮಿ
ನೇರವಾಗಿ ಸ್ಯಾಟಲೈಟ್’ನಿಂದ ಸಿಗ್ನಲ್ ಸ್ವೀಕರಿಸುವ ತಂತ್ರಜ್ಞಾನ ಬಂದರೆ ಏರ್ಟೆಲ್, ರಿಲಯನ್ಸ್, ಐಡಿಯಾ ಇನ್ನಿತರೆ ಸಂಸ್ಥೆಗಳ ಸಾವಿರಾರು ಕೋಟಿಗಳ ಹೂಡಿಕೆ ನಷ್ಟ ಆಗಲಿದೆ. ಈ ಸಂಸ್ಥೆಗಳು ಈಗಾಗಲೇ ದೇಶದಾದ್ಯಂತ ಹಾಕಿರುವ ಲಕ್ಷಾಂತರ ಟವರ್’ಗಳು, ಅದಕ್ಕೆ ಅಳವಡಿಸಿರುವ ರಿಸೀವರ್, ಶಕ್ತಿಯುತ ಜನರೇಟರ್ ಇನ್ನೂ ಹಲವು ವಸ್ತುಗಳು ಮತ್ತು ಮಾನವ ಸಂಪನ್ಮೂಲ ನಷ್ಟ ಆಗಲಿದೆ. ಆದರೆ ಹೊಸ ತಂತ್ರಜ್ಞಾನದಿಂದ ಗ್ರಾಹಕರಿಗೆ ಅನುಕೂಲ ಆಗಲಿದೆ. ನೇರವಾಗಿ ಸ್ಯಾಟಲೈಟ್’ನಿಂದ ಸಿಗ್ನಲ್ ಸ್ವೀಕರಿಸುವ ತಂತ್ರಜ್ಞಾನ ಬಂದರೆ ಮೊಬೈಲ್ ನೆಟ್’ವರ್ಕ್ ಸೇವೆಗಳ ಬೆಲೆ ಈಗಿನದಕ್ಕಿಂತಲೂ ಕಡಿಮೆ ಆಗಲಿದೆ.