Pavitra Gowda
ರೇಣುಕಾ ಸ್ವಾಮಿ ಕೊಲೆ ಪ್ರಕಣದ ನಾಲ್ಕು ಜನ ಆರೋಪಿಗಳಿಗೆ ಜಾಮೀನು ದೊರೆತಿದೆ. ನಟ ದರ್ಶನ್’ಗೆ ಮಧ್ಯಂತರ ಜಾಮೀನು ದೊರೆತಿದೆ. ಜನರಲ್ ಬೇಲ್ ಸಹ ದರ್ಶನ್’ಗೆ ಸಿಗುವ ಸಾಧ್ಯತೆ ಇದೆ. ದರ್ಶನ್ ಪ್ರಸ್ತುತ ಆಸ್ಪತ್ರೆಯಲ್ಲಿದ್ದು, ಇನ್ನೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ಇನ್ನು ಇದೇ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಪವಿತ್ರಾ ಗೌಡ ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿತ್ತು. ಈಗ ಹೈಕೋರ್ಟ್ ನಲ್ಲಿ ಅರ್ಜಿ ಹಾಕಿದ್ದಾರೆ.
ಆದರೆ ಪವಿತ್ರಾ ಗೌಡಗೆ ಜಾಮೀನು ಸಿಗದಂತೆ ಮಾಡುವ ‘ಉನ್ನತ ಮಟ್ಟದ’ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಪ್ರಕರಣದಲ್ಲಿ ಪವಿತ್ರಾ ಗೌಡ ಆರೋಪಿ ನಂಬರ್ 1 ಆಗಿದ್ದರೂ ಸಹ ರೇಣುಕಾ ಸ್ವಾಮಿ ನಿಧನ ಹೊಂದಿದಾಗ ಪವಿತ್ರಾ ಅಲ್ಲಿ ಇರಲಿಲ್ಲ ಎಂಬುದು ಪೊಲೀಸರು ಸಂಗ್ರಹಿಸಿರುವ ಸಾಕ್ಷಿ ಮತ್ತು ಹೇಳಿಕೆಗಳಿಂದ ದೃಢಪಟ್ಟಿದೆ. ಹಾಗಿದ್ದರೂ ಸಹ ಪವಿತ್ರಾ ಅನ್ನು ಪ್ರಕರಣದಲ್ಲಿ ಪವಿತ್ರಾ ಅನ್ನು ಎ1 ಮಾಡಲಾಗಿದೆ.
ಈಗ ಪವಿತ್ರಾರ ಜಾಮೀನಿಗೆ ಕಲ್ಲು ಹಾಕುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಪವಿತ್ರಾ ಹೆಚ್ಚು ಸಮಯ ಜೈಲಿನಲ್ಲಿದ್ದಾರೆ ದರ್ಶನ್’ಗೆ ಕ್ಷೇಮ ಎಂಬ ಕಾರಣಕ್ಕೆ ಪವಿತ್ರಾಗೆ ಜಾಮೀನು ಸಿಗದಂತೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆಯಂತೆ. ಪವಿತ್ರಾಗೆ ಜಾಮೀನು ಸಿಗಬಾರದೆಂದು ಇದೇ ಪ್ರಕರಣದ ಆರೋಪಿಯೊಬ್ಬರಿಂದ ಮರು ಹೇಳಿಕೆಯನ್ನು ದಾಖಲಿಸುವ ಯೋಜನೆ ಸಹ ರೂಪಗೊಂಡಿದೆ ಎನ್ನಲಾಗುತ್ತಿದೆ. ಆದರೆ ಈ ಯೋಜನೆ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಹೇಳಲಾಗದು.
Darshan Thoogudeepa: ದರ್ಶನ್’ಗೆ ಇಂದು ಜಾಮೀನು ಪಕ್ಕಾ, ಆದರೆ ಇದರ ಕೆಲವು ಸಮಸ್ಯೆ
ರೇಣುಕಾ ಸ್ವಾಮಿ ಕೊಲೆ ಜೂನ್ 09 ರಂದು ನಡೆದಿತ್ತು. ಜೂನ್ 11 ರಂದು ದರ್ಶನ್ ಅನ್ನು ಪೊಲೀಸರು ಮೈಸೂರಿನಲ್ಲಿ ಬಂಧಿಸಿದರು. ಆ ನಂತರ ಪವಿತ್ರಾ ಗೌಡ ಅನ್ನು ವಿಚಾರಣೆಗೆಂದು ಠಾಣೆಗೆ ಕರೆಸಿಕೊಂಡು ಆಕೆಯನ್ನು ಸಹ ಬಂಧಿಸಲಾಯ್ತು. ಒಟ್ಟು 17 ಮಂದಿಯನ್ನು ಈ ಪ್ರಕರಣದಲ್ಲಿ ಬಂಧನ ಮಾಡಲಾಗಿತ್ತು. ಅದರಲ್ಲಿ, ಹಣ ಪಡೆದು ಕೊಲೆ ಒಪ್ಪಿಕೊಳ್ಳಲು ಬಂದ ಮೂವರಿಗೆ ಮೊದಲೇ ಜಾಮೀನು ದೊರಕಿತು. ಅದಾದ ಬಳಿಕ ಪ್ರಕರಣದ ಕೊನೆಯ ಆರೋಪಿಗೆ ಜಾಮೀನು ದೊರಕಿತು. ದರ್ಶನ್’ಗೆ ಅನಾರೋಗ್ಯದ ಕಾರಣ ಮಧ್ಯಂತರ ಜಾಮೀನು ನೀಡಲಾಯ್ತು. ಮುಂದಿನ ವಿಚಾರಣೆ ನವೆಂಬರ್ 28 ಕ್ಕೆ ಇದೆ.