Starlink
ವಿಶ್ವದ ಅತ್ಯುತ್ತಮ ನೆಟ್ವರ್ಕ್ ಪ್ರೊವೈಡರ್ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಟಾರ್ಲಿಂಕ್ ಭಾರತಕ್ಕೆ ಬರುತ್ತಿದೆ. ಸ್ಟಾರ್ಲಿಂಕ್ ಅಮೆರಿಕದ ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ಮೊಬೈಲ್ ಮತ್ತು ಅಂತರ್ಜಾಲ ಸೇವೆಯನ್ನು ಒದಗಿಸುತ್ತಿದೆ. ಸ್ಟಾರ್ಲಿಂಕ್ ವಿಶ್ವದ ಅತ್ಯುತ್ತಮ ನೆಟ್ವರ್ಕ್ ಪ್ರೊವೈಡರ್ ಎನಿಸಿಕೊಂಡಿದ್ದು, ಈಗ ಇದೇ ಸ್ಟಾರ್ಲಿಂಕ್ ಭಾರತಕ್ಕೆ ಬರಲು ಸಜ್ಜಾಗಿದೆ. ಇದರಿಂದಾಗಿ ಭಾರತದ ಏರ್ಟೆಲ್ ಮತ್ತು ಜಿಯೋಗೆ ನಡುಕ ಶುರುವಾಗಿದೆ.
ಸ್ಟಾರ್ಲಿಂಕ್, ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಅವರದ್ದಾಗಿದೆ. ಅವರ ಒಡೆತನದ ಸ್ಪೇಸ್ ಎಕ್ಸ್ನ ಅಡಿಯಲ್ಲಿಯೇ ಸ್ಟಾರ್ಲಿಂಕ್ ಕಾರ್ಯ ನಿರ್ವಹಿಸುತ್ತಿದೆ. ಅಮೆರಿಕ ಒಂದರಲ್ಲಿಯೇ ಸ್ಟಾರ್ಲಿಂಕ್ಗೆ 40 ಲಕ್ಷ ಗ್ರಾಹಕರಿದ್ದಾರೆ. ಸ್ಟಾರ್ ಲಿಂಕ್ ತನ್ನ ಸೇವೆಯನ್ನು ನೀಡಲು ಪ್ರಾರಂಭ ಮಾಡಿದ್ದು 2019 ರಲ್ಲಿ, ಕೇವಲ ಐದು ವರ್ಷಗಳಲ್ಲಿ 40 ಲಕ್ಷ ಗ್ರಾಹಕರನ್ನು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಸ್ಟಾರ್ಲಿಂಕ್ ಸೇವೆ ವಿಸ್ತರಣೆ ಮಾಡಲಿದೆ.
2022 ರ ಸೆಪ್ಟೆಂಬರ್ ನಲ್ಲಿ ಸ್ಟಾರ್ಲಿಂಕ್ ಸೇವೆ ವಿಶ್ವದ 40 ದೇಶಗಳಲ್ಲಿ ಲಭ್ಯವಿತ್ತು ಸಂಖ್ಯೆ ಈಗ ಇನ್ನಷ್ಟು ಹೆಚ್ಚಿದೆ. ನೆರೆಯ ಶ್ರೀಲಂಕಾನಲ್ಲಿ ಸ್ಟಾರ್ಲಿಂಕ್ ಸೇವೆ ಕೆಲ ಷರತ್ತುಗಳ ಮೇಲೆ ಲಭ್ಯವಿದೆ. ಪ್ರೀ ಆರ್ಡರ್ ಮಾಡಿದರೆ ಮಾತ್ರವೇ ಶ್ರೀಲಂಕಾನಲ್ಲಿ ಈ ಸೇವೆ ಲಭ್ಯವಾಗಲಿದೆ. ಭಾರತದಲ್ಲಿ ಈ ಹಿಂದೆಯೇ ಸ್ಟಾರ್ಲಿಂಕ್ ಸೇವೆ ಆರಂಭಿಸಲಿದೆ ಎನ್ನಲಾಗಿತ್ತು. ಆದರೆ ಇಲ್ಲಿನ ಟ್ರಾಯ್ ನಿಯಮಗಳಲ್ಲಿ ಆ ಸಂದರ್ಭದಲ್ಲಿ ಕೆಲ ಬದಲಾವಣೆಗಳು ಆದ ಕಾರಣ ಸ್ಟಾರ್ಲಿಂಕ್ ಭಾರತಕ್ಕೆ ಬರಲಿಲ್ಲ.
iPhone: ಆಪಲ್ ಫೋನ್ ಬಳಸುವವರು ಓದಲೇ ಬೇಕಾದ ಸುದ್ದಿ ಇದು
ಆದರೆ ಈಗ ಸ್ಟಾರ್ಲಿಂಕ್ ಭಾರತಕ್ಕೆ ಪಕ್ಕಾ ಬರಲಿದೆ ಎನ್ನಲಾಗುತ್ತಿದೆ. ಆದರೆ ಕೆಲವು ದೊಡ್ಡ ಪ್ಲೇಯರ್ಗಳು ಅಡ್ಡಗಾಲು ಹಾಕಿದ ಕಾರಣ ಸ್ಟಾರ್ಲಿಂಕ್ ಭಾರತಕ್ಕೆ ಬರಲಿಲ್ಲ ಎನ್ನಲಾಗಿತ್ತು. ಆದರೆ ಈಗ ಎಲಾನ್ ಮಸ್ಕ್ರ ಆತ್ಮೀಯ ಸ್ನೇಹಿತ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆದ್ದು ಅಮೆರಿಕ ಅಧ್ಯಕ್ಷ ಆಗಿರುವ ಕಾರಣ ಟ್ರಂಪ್, ಮಧ್ಯಸ್ಥಿಕೆಯಿಂದಾಗಿ ಸ್ಟಾರ್ಲಿಂಕ್, ಭಾರತಕ್ಕೆ ಬರಲಿದೆ ಎನ್ನಲಾಗುತ್ತಿದೆ. ಟ್ರಂಪ್ ಹಾಗೂ ಭಾರತದ ನಡುವೆ ಉತ್ತಮ ಸಂಬಂಧ ಇದ್ದು, ಈಗ ಖುದ್ದು ಟ್ರಂಪ್ ಅವರೇ ಸ್ಟಾರ್ಲಿಂಕ್ ಪರವಾಗಿ ಮಧ್ಯಸ್ಥಿಕೆ ವಹಿಸುವ ಅಥವಾ ವಶೀಲಿಬಾಜಿ ನಡೆಸುವ ಸಾಧ್ಯತೆ ಇದೆ.